ಎ.25: ಝೈನ್‌ ಎಕ್ಸಲೆನ್ಸ್‌ ಫಾರ್‌ ಮೊರೆಲ್‌ ಎಜ್ಯುಕೇಶನ್‌ ಇದರ 8ನೇ ವಾರ್ಷಿಕ ಹಾಗೂ 2ನೇ ಸನದುದಾನ ಸಮ್ಮೇಳನ

0

ಸುಳ್ಯ: ಸ್ತ್ರೀ ವಿದ್ಯಾಭ್ಯಾಸ ಶಕ್ತೀಕರಣದ ಭಾಗವಾಗಿ ಸುಳ್ಯ ತಾಲೂಕಿನ ಅಡ್ಡ ಅಜ್ಜಾವರದಲ್ಲಿ ಏಳು ವರ್ಷಗಳ ಹಿಂದೆ ಸ್ಥಾಪಿತಗೊಂಡ ದೀನಿ ಸಮೂಹ ಸಂಸ್ಥೆಯಾಗಿದೆ ZAIN EXCELLENCE FOR MORAL EDUCATION. ಈ ಸಂಸ್ಥೆಯು ಈಗಾಗಲೇ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ‘ಝೈನಿಯಾ’ ಬಿರುದನ್ನು ನೀಡಿತ್ತಾ ಬಂದಿದೆ.

ಝೈನ್‌ ಎಕ್ಸಲೆನ್ಸ್‌ ಫಾರ್‌ ಮೊರೆಲ್‌ ಎಜ್ಯುಕೇಶನ್‌ ಇದರ 8ನೇ ವಾರ್ಷಿಕ ಹಾಗೂ 2ನೇ ಸನದುದಾನ ಸಮ್ಮೇಳನವು ಎ.25ರ ಶುಕ್ರವಾರ ರಾತ್ರಿ 7 ಗಂಟೆಗೆ ಸುಳ್ಯ ಅಜ್ಜಾವರದ ಎಜು ಗಾರ್ಡನ್‌ ಬಯಂಬ್ ನಲ್ಲಿ ನಡೆಯಲಿದೆ. ಎ.25ರ ರಾತ್ರಿ 8 ಗಂಟೆಗೆ ಪ್ರಖ್ಯಾತ ವಾಗ್ಮಿ ಉಸ್ತಾದ್ ನೌಶಾದ್ ಬಾಖವಿರವರ ಏಕದಿನ ಧಾರ್ಮಿಕ ಉಪನ್ಯಾಸ ನಡೆಯಲಿದ್ದು, ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್, ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಸೇರಿದಂತೆ ವಿವಿಧ ಸಯ್ಯದರು, ಉಲಮಾಗಳು ಮತ್ತು ಉಮರಾ ನಾಯಕರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಮಾರಂಭದ ವಿಶೇಷ ಅತಿಥಿಯಾಗಿ ಜನಾಬ್‌ ಅಬ್ದುಲ್‌ ರಹಿಮಾನ್‌ ಸಂಕೇಶ್‌ ಬೆಂಗಳೂರು ಅವರು ಭಾಗವಹಿಸಲಿದ್ದಾರೆ. ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here