ಪುತ್ತೂರು: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಎ.22ರಂದು ಮಂಗಳವಾರ ಸಂಜೆ 6.30 ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ಗಿರಿಜಾ ಕಲ್ಯಾಣ” ಎಂಬ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಅಮೃತಾ ಕೌಶಿಕ್ ರಾವ್, ಮುರಾರಿ ಭಟ್ ಪಂಜಿಗದ್ದೆ, ಚೆಂಡೆ ಮದ್ದಳೆ ವಾದಕರಾಗಿ ಗಿರೀಶ್ ಕಿನಿಲಕೋಡಿ, ಜಯಪ್ರಕಾಶ್ ನಾಕೂರು, ಮುರಳೀಧರ ಬಟ್ಯಮೂಲೆ. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್, ರವಿ ಭಟ್, ಬಾಲಕೃಷ್ಣ ಸೀತಂಗೋಳಿ,ಪ್ರಶಾಂತ್ ಮುಂಡ್ಕೂರ್, ನವೀನಚಂದ್ರ, ಶ್ರೀಶ ಮಣಿಲ, ರಮೇಶ್ ಕಜೆ (ಹಾಸ್ಯ ಪಾತ್ರದಲ್ಲಿ), ಕಿಶನ್ ಅಗ್ಗಿತ್ತಾಯ, ತೃಷಾಲ್ ಗೌಡ, ಜೀವನ್ ಆಚಾರ್ಯ, ಸ್ತುತಿ ಕುಲಾಲ್, ಭೂಮಿಕಾ ಆಚಾರ್ಯರವರು ಭಾಗವಹಿಸಲಿದ್ದಾರೆ.
ವೇಷಭೂಷಣ ದೇವಕಾನ ಬಳಗ ಮತ್ತು ಗಿರೀಶ್ ಕಿನಿಲಕೋಡಿ ಸಂಯೋಜನೆಯಲ್ಲಿ ಯಕ್ಷಗಾನ ಮೂಡಿಬರಲಿದೆ. ಯಕ್ಷಗಾನ ಪ್ರಿಯರು ಈ ಕಾರ್ಯಕ್ರಮಕ್ಕೆ ಬಂದು ಸಂತೋಷದಿಂದ ಭಾಗವಹಿಸಬೇಕು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.