ಕರಿಂಕ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

0

ಪುತ್ತೂರು: ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಹಾಗೂ ಅನಂತಾಡಿ ಉಭಯ ಗ್ರಾಮಗಳಿಗೆ ಸಂಬಂಧಪಟ್ಟ ಇತಿಹಾಸ ಪ್ರಸಿದ್ಧ ಕರಿಂಕ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ವರ್ಷಾವಧಿ ಜಾತ್ರೆಯು ಬ್ರಹ್ಮಶ್ರೀ ವೇ.ಮೂ.ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿವರ್ಯರ ನೇತೃತ್ವದಲ್ಲಿ ಮೇ.1 ಗುರುವಾರ ರಾತ್ರಿ ಹಾಗೂ ಮೇ.2ನೇ ಶುಕ್ರವಾರ ದಂದು ನಡೆಯಲಿದ್ದು, ಪೂರ್ವಭಾವಿಯಾಗಿ ನಡೆಯುವ ಗೊನೆ ಮೂಹೂರ್ತ ಏ.23ರಂದು ಬೆಳಿಗ್ಗೆ 9.45ರ ವೇಳೆ ನಡೆಯಿತು.

ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ರಾಮಚಂದ್ರ ಭಟ್ ಗೊನೆ ಮೂಹೂರ್ತ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನರೇಂದ್ರ ರೈ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕಿರಣ್ ಹೆಗ್ಡೆ, ಸೇಸಪ್ಪ ಗೌಡ, ಬಿ. ಚೇತನ್ ರೈ, ಡಾ. ಮನೋಹರ ರೈ, ಜಗನ್ನಾಥ ಶೆಟ್ಟಿ ಕರಿಂಕ, ಚೇತನ್ ಶೆಟ್ಟಿ ಹೊಸಒಕ್ಲು, ದಾಮೋದರ ಕಾಪಿಕ್ಕಾಡ್, ಜತ್ತಪ್ಪ ಪೂಜಾರಿ ಕರಿಂಕ, ಡೊಂಬಯ್ಯ ಗೌಡ ಕರಿಂಕ ಹಾಗೂ ದೇವಸ್ಥಾನದ ಪ್ರಭಂಧಕರಾದ ಗೌರೀಶ್ ಶೆಟ್ಟಿ ಉಪಸ್ಥಿತರಿದ್ದರು.

ದಿನಾಂಕ 01-05-205ನೇ ಗುರುವಾರ ರಾತ್ರಿ ಗಂಟೆ 8ರಿಂದ ಮಹೋತ್ಸವ ಬಲಿ,ಭೂತ ಬಲಿ ನಡೆದು ಸಾರ್ವಜನಿಕ ಅನ್ನ ಸಂತರ್ಪಣೆ ನಡೆದು, ಜಿಲ್ಲೆಯ ಹೆಸರಾಂತ ಕಲಾವಿದರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಮರುದಿನ ಬೆಳಿಗ್ಗೆ ಗಂಟೆ 9.30 ರಿಂದ ಹಗಲು ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣದಲ್ಲಿ ಪ್ರಸಾದ ವಿತರಣೆ ನಡೆದು ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆದು, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. 12-05-2025ನೇ ಸೋಮವಾರ ಬೆಳಿಗ್ಗೆ ಗಂಟೆ 9 ರಿಂದ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಪ್ರಯುಕ್ತ ಗಣಪತಿ ಹೋಮ, ಕಲಶಾಭಿಷೇಕ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆದು ರಾತ್ರಿ ಗಂಟೆ 7 ರಿಂದ ಮಹಾ ರಂಗಪೂಜೆ ನಡೆಯಲಿದೆ.

LEAVE A REPLY

Please enter your comment!
Please enter your name here