ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಹಿನ್ನಲೆ – ಪುತ್ತೂರಿನಲ್ಲಿ ಪಾಕಿಸ್ತಾನ ಧ್ವಜಕ್ಕೆ ಬೆಂಕಿ ಕೊಟ್ಟು ಹಿಂದು ಸಂಘಟನೆಗಳ ಆಕ್ರೋಶ

0

ತ್ತೂರು: ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಸಮೀಪ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಿಂದ 28 ಮಂದಿ ಮೃತಪಟ್ಟು, ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ.

ಈ ಕುರಿತು ಭಯೋತ್ಪಾದಕರ ವಿರುದ್ಧ ಭಾರತೀಯರ ಆಕ್ರೋಶ ಮುಗಿಲು ಮುಟ್ಟಿದ್ದು. ಎ.23ರಂದು ಪುತ್ತೂರಿನಲ್ಲಿ ಮಾತೃಭೂಮಿ ಸಂರಕ್ಷಣಾ ವೇದಿಕೆ, ವಿಶ್ವಹಿಂದು ಪರಿಷದ್ ಬಜರಂಗದಳ ಮತ್ತು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಹಾಗು ವಿವಿಧ ಹಿಂದು ಸಂಘಟನೆಗಳ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರತಿಭಟನಾ ಸಭೆ ಮತ್ತು ಪಾಕಿಸ್ತಾನ ಧ್ವಜಕ್ಕೆ ಬೆಂಕಿ ಕೊಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.

ಸಂಜೆ ದರ್ಬೆಯಿಂದ ದೊಂದಿಯೊಂದಿಗೆ ಪಾದಾಯಾತ್ರೆಯ ಮೂಲಕ ತೆರಳಿದ ಹಿಂದು ಸಂಘಟನೆಗಳು ಪುತ್ತೂರು ಗಾಂಧಿಕಟ್ಟೆಯ ಬಳಿ ಸಮಾವೇಶಗೊಂಡು ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

ಆರಂಭದಲ್ಲಿ ಭಯೋತ್ಪಾದಕರ ಗುಂಡಿನ ಧಾಳಿಗೆ ಮೃತರಾದವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು. ಬಳಿಕ ಪ್ರತಿಭಟನೆ ನಡೆಸಿ ಕೊನೆಯಲ್ಲಿ ಪಾಕಿಸ್ತಾನದ ಧ್ವಜಕ್ಕೆ ಬೆಂಕಿ ನೀಡಿ ಆಕ್ರೋಶ ವ್ಯಕ್ತಪಡಿಸಲಾಯಿತು.

LEAVE A REPLY

Please enter your comment!
Please enter your name here