ಹೈನುಗಾರರ ಸಮಸ್ಯೆಗಳ ಕುರಿತು ಕಾಲಕಾಲಕ್ಕೆ ಸರಕಾರವನ್ನು ಎಚ್ಚರಿಸುವುದು ಸಹಕಾರ ಭಾರತಿ – ನಾರಾಯಣ ಪ್ರಕಾಶ್

0


ಪುತ್ತೂರು: ಸಹಕಾರ ಭಾರತಿ ಸಹಕಾರ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ ಸಂಘಟನೆಯಾಗಿದ್ದು, ಸಹಕಾರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಘಟನಾತ್ಮಕವಾಗಿ ರಚನಾತ್ಮಕವಾಗಿ ನಿರಂತರ ಮಾಡುತ್ತಿದ್ದು, ಹೈನುಗಾರರ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಸ್ಪಂದಿಸುತ್ತಾ ಕಾಲಕಾಲಕ್ಕೆ ಸರಕಾರವನ್ನು ಎಚ್ಚರಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಎ.26ರಂದು ನಡೆಯುವ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಆಡಳಿತ ಮಂಡಳಿ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತೀ ಅಭ್ಯರ್ಥಿಗಳ ಗೆಲುವಾಗಲಿದೆ ಎಂದು ಸಹಕಾರ ಭಾರತೀ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಪ್ರಕಾಶ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಸಹಕಾರ ಭಾರತೀ ಅಭ್ಯರ್ಥಿಗಳಾದ ಎಸ್‌ಬಿ ಜಯರಾಮ ರೈ, ನಿಧಿಮುಂಡ ಚಂದ್ರಶೇಖರ್, ಬೆಳ್ತಂಗಡಿಯ ಪ್ರಭಾಕರ, ಸುಳ್ಯದ ಭರತ್ ನೆಕ್ರಾಜೆ ಮತ್ತು ಮಹಿಳಾ ಕ್ಷೇತ್ರಕ್ಕೆ ಬಂಟ್ವಾಳದ ಸರಿತಾ ಎನ್ ಶೆಟ್ಟಿಯವರು ಚುನಾವಣಾ ಕಣದಲ್ಲಿದ್ದಾರೆ. ಕಳೆದ 15 ವರ್ಷದಲ್ಲಿ ಸಹಕಾರ ಭಾರತಿ ಹಾಲು ಒಕ್ಕೂಟದಲ್ಲಿ ಉತ್ತಮ ಆಡಳಿತ ಮಾಡಿದೆ. ಈ ಆಡಳಿತ ಅವಧಿಯಲ್ಲಿ ಅನೇಕ ಅಮೂಲಾಗ್ರ ಬದಲಾವಣೆ ತಂದಿದ್ದೇವೆ. ಪಾರದರ್ಶಕವಾಗಿ ಶೇ.98 ಸಹಕಾರಿ ಸಂಘಗಳಿಗೆ ಸಾಫ್ಟ್‌ವೇರ್ ಕೊಟ್ಟಿದ್ದೇವೆ. ಪುತ್ತೂರು ಉಪವಿಭಾಗದಲ್ಲಿ ಬಲ್ಕ್ ಮಿಲ್ಕ್ ಕೂಲರ್ ಮೂಲಕ ಕ್ವಾಲಿಟಿ ಹಾಲನ್ನು ಪಡೆಯುತ್ತಿದ್ದೇವೆ. ದೇಶದಲ್ಲೇ 2ನೇ ಸ್ಥಾನ ಪಡೆದಿದ್ದೇವೆ. 70ಸಾವಿರ ಕುಟುಂಬ ದ.ಕ.ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಮಾಡುತ್ತಾರೆ. ಅದರಲ್ಲಿ ಶೇ.80 ಮಂದಿ ಮಧ್ಯಮ ವರ್ಗದವರೇ ಇದ್ದಾರೆ. ಹಸಿ ಹುಲ್ಲಿನ ಬದಲು ಶೈಲೇಜ್ ಅನ್ನು ಹಾಲು ಉತ್ಪಾದಕರ ಸಹಕಾರಿ ಸಂಘದ ಸೊಸೈಟಿಗಳಿಗೆ ಏಳುವರೆ ರೂಪಾಯಿಗೆ ಕೊಡುತ್ತಿದ್ದೇವೆ. ಉತ್ತಮ ಗುಣಮಟ್ಟದ ಹಾಲಿಗಾಗಿ ಫೇಟ್ ಆಧಾರದಲ್ಲಿ ಹೆಚ್ಚುವರಿ ಹಣ ಕೊಡುತ್ತಿದ್ದೇವೆ. ಹಲವಾರು ಯೋಜನೆಗಳ ಮೂಲಕ ಈ ವರ್ಷವೂ ಅಂದಾಜು ರೂ. 12ಕೋಟಿ ಲಾಭಾಂಶ ಒಕ್ಕೂಟಕ್ಕೆ ಬಂದಿದೆ ಎಂದವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಸಹಕಾರ ಭಾರತಿ ತಾಲೂಕು ಅಧ್ಯಕ್ಷ ಕೃಷ್ಣಕುಮಾರ್ ರೈ, ಕಾರ್ಯದರ್ಶಿ ಮೋಹನ್ ಪಕ್ಕಳ ಕುಂಡಾಪು, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಪುರುಷೊತ್ತಮ ಮುಂಗ್ಲಿಮನೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here