ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಗೆ ಆಕ್ರೋಶ – ಆಲಂಕಾರಿನಲ್ಲಿ ಪ್ರತಿಭಟನೆ

0

ಆಲಂಕಾರು: ಹಿಂದೂ ಜಾಗರಣ ವೇದಿಕೆ ವತಿಯಿಂದ ವೇದಿಕೆಯಿಂದ ಜಮ್ಮು ಕಾಶ್ಮೀರದ ಪಹಲ್‌ಗಾಂಮ್‌ನಲ್ಲಿ ಪ್ರವಾಸಿಗರ ಮೇಲಿನ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಗುರುವಾರ ಆಲಂಕಾರಿನಲ್ಲಿ ವಿವಿಧ ಹಿಂದೂ ಜಾಗರಣ ವೇದಿಕೆ ವತಿಯಿಂದ ಆಲಂಕಾರು ಪೇಟೆಯಲ್ಲಿ ವರ್ತಕರು ಸೇರಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.


ಪ್ರತಿಭಟನಾಕಾರರನ್ನು ಉದ್ದೇಶಿಸಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ರವರು ಮಾತನಾಡಿ ನಮ್ಮ ದೇಶದ ಅಶ್ಮೀತೆಗೆ ದಕ್ಕೆ ಬಂದಾಗ ನಾವೆಲ್ಲರೂ ಜಾತಿ, ಧರ್ಮವನ್ನು ಬದಿಗಿಟ್ಟು ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು, ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಪ್ರವಾಸಿಗರ ಹತ್ಯೆ ಮಾಡುವ ಸಂದರ್ಭದಲ್ಲಿ ಮಹಿಳೆ ನನ್ನ ಗಂಡನನ್ನು ಕೊಂದಿದ್ದು ನನ್ನನು ಮತ್ತು ನನ್ನ ಮಗನನ್ನು ಕೊಲ್ಲು ಎಂದು ತಿಳಿಸಿದಾಗ ಈ ವಿಚಾರವನ್ನು ನಿನ್ನ ಮೋದಿಗೆ ಹೇಳು ಎಂದು ತಿಳಿಸಿದ್ದು, ಈ ದೇಶದ ರಕ್ಷಣೆಗೆ ಪ್ರಧಾನಿ ಮೋದಿ ಒಬ್ಬರಿದ್ದು ಹಿಂದೂ ಸಮಾಜದ ರಕ್ಷಣೆಗೆ ಕೋಟ್ಯಂತರ ಮೋದಿಗಳು ಇದ್ದಾರೆ ಎಂದು ಭಯೋತ್ಪಾದಕ ಇನ್ನೂ ತಿಳಿದಿಲ್ಲ. ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಬೆಂಬಲ ನೀಡುವವರನ್ನು ಹುಡುಕಿ ಬೆಂಕಿ ಹಚ್ಚಬೇಕು ಎಂದು ನುಡಿದರು.


ಹಿಂದೂ ಜಾಗರಣಾ ವೇದಿಕೆಯ ಸವಣೂರಿನ ಗೌರವಾಧ್ಯಕ್ಷರಾದ ಗಿರಿಶಂಕರ ಸುಲಾಯ ಮಾತನಾಡಿ ಕಾಶ್ಮೀರದ ಪಹಲ್‌ಗಾಂವ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರರ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಈ ಕೃತ್ಯದಲ್ಲಿ ಭಾಗಿಯಾದ ಉಗ್ರರನ್ನು ಹಾಗೂ ಅವರಿಗೆ ಬೆಂಬಲವಾಗಿರುವವರನ್ನು ಗುರುತಿಸಿ ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲುವುದರ ಜೂತೆಗೆ ಆತನ ಸಂತತಿ ನಕ್ಷೆಯಲ್ಲಿ ಉಗ್ರಗಾಮಿ ಸಂಘಟನೆಯ ಸದಸ್ಯ ಎಂದು ನಮೋದಿಸುವಂತೆ ಆಗಬೇಕೆಂದು ತಿಳಿಸಿ, ಭಯೋತ್ಪಾದಕರು ಪ್ರವಾಸಿಗರ ಧರ್ಮ ಯಾವುದೆಂದು ಗುರುತಿಸಿ ಹತ್ಯೆ ನಡೆಸಿರುವುದು ಪೈಶಾಚಿಕ ಕೃತ್ಯವಾಗಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಈ ದೇಶವನ್ನು ಒಡೆಯುವ ಷಡ್ಯಂತರ ಈ ದೇಶದಲ್ಲಿ ನಡೆಯಲು ಸಾಧ್ಯವಿಲ್ಲ ನಮ್ಮದೇಶ, ಮತ್ತು ಧರ್ಮವನ್ನು ರಕ್ಷಣೆ ಮಾಡುವುದು ನಮ್ಮ ಹಕ್ಕು ಭಯೋತ್ಪಾದನೆಗೆ ಬೆಂಬಲ ನೀಡುವವರಿಗೆ ಈ ದೇಶದಲ್ಲಿ ಯಾವುದೇ ಸವಲತ್ತುಗಳನ್ನು ನೀಡಬಾರದು ಹಾಗೂ ಅಂತವರಿಗೆ ಸಾರ್ವಜನಿಕವಾಗಿ ಶಿಕ್ಷೆ ನೀಡುವಂತಾಗಬೇಕೆಂದರು. ಕಾರ್ಯಕ್ರಮದಲ್ಲಿ ಹತ್ಯೆಗೈಯಲ್ಪಟ್ಟ ಹಿಂದೂ ಪ್ರವಾಸಿಗರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.


ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ರವೀಂದ್ರದಾಸ ಸ್ವಾಗತಿಸಿ, ಜನಾರ್ಧನಾ ಕಯ್ಯಾಪೆ ವಂದಿಸಿದರು. ಕಾರ್ಯಕ್ರಮದಲ್ಲಿ ಆಲಂಕಾರು ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ದಾಮೋದರ ಗೌಡ ಕಕ್ವೆ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹೇಮಂತ್ ರೈ ಮನವಳಿಕೆ, ತಾ.ಪಂ ಮಾಜಿ ಸದಸ್ಯ ದಯಾನಂದ ಆಲಡ್ಕ, ಆಲಂಕಾರು ಗ್ರಾ.ಪಂ ಅಧ್ಯಕ್ಷೆ ಸುಶೀಲಾ ಕೊಂಡಾಡಿ,ಉಪಾಧ್ಯಕ್ಷ ರವಿ ಕುಂಞಲಡ್ಡ, ಪೆರಾಬೆ ಗ್ರಾ.ಪಂ ಮಾಜಿ ಅಧ್ಯಕ್ಷ ಮೋಹನದಾಸ ರೈ ಪರಾರಿ,ಪ್ರಮುಖರಾದ ಜಯಂತ ಪೂಜಾರಿ ನೆಕ್ಕಿಲಾಡಿ,ಜಯಕರ ಪೂಜಾರಿ ಕಲ್ಲೇರಿ,ಸುಧಾಕರ ಪೂಜಾರಿ ಕಲ್ಲೇರಿ,ದೇವರಾಯ ಪ್ರಭು ಸೇರಿದಂತೆ ರಾಜಕೀಯ, ಧಾರ್ಮಿಕ ,ವಿವಿಧ ಸಂಘಸಂಸ್ಥೆಯ ಪ್ರಮುಖರು,ಹಿಂದೂ ಜಾಗರಣ ವೇದಿಕೆಯ ಪ್ರಮುಖರು,ಸದಸ್ಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here