
ಪುತ್ತೂರು: ಪಡೀಲು ಬಾಳಪ್ಪ ಕಾಂಪ್ಲೆಕ್ಸ್ ನಲ್ಲಿರುವ ಎಸ್ ಆರ್ ಹಾರ್ಡ್ ವೇರ್ಸ್ ನ ಮತ್ತು ಸಮೃದ್ಧಿ ಕಾಂಪ್ಲೆಕ್ಸ್ ನ ಮಾಲಕ ಸೀತಾರಾಮ ಗೌಡ(52ವ) ರವರು ಅನಾರೋಗ್ಯದಿಂದಾಗಿ ಏ.25 ರ ನಸುಕಿನ ಜಾವ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತಃ ಆಲಂಕಾರು ಪಟ್ಟೆ ನಿವಾಸಿಯಾಗಿದ್ದ ಸೀತಾರಾಮ ಗೌಡ ಅವರು ಕಳೆದ ಸುಮಾರು 20 ವರ್ಷಗಳಿಂದ ಪುತ್ತೂರಿನಲ್ಲಿ ಉದ್ಯಮ ನಡೆಸುತ್ತಿದ್ದು, ಬನ್ನೂರು ಶಾಲಾ ಬಳಿ ವಾಸ್ತವ್ಯ ಹೊಂದಿದ್ದರು. ಇತ್ರೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾಗಿದ್ದಾರೆ. ಮೃತರು ಪತ್ನಿ ಶೋಭಾ, ಪುತ್ರ ಶ್ರೇಯಸ್, ಪುತ್ರಿ ಮನಸ್ವಿ, ನಾಲ್ವರು ಸಹೋದರರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಸೀತಾರಾಮ ಅವರ ಮೃತ ದೇಹವನ್ನು ಬೆಳಿಗ್ಗೆ ಪುತ್ತೂರು ಬನ್ನೂರಿನ ಮನೆಗೆ ತಂದು ಬಳಿಕ ಆಂಲಕಾರು ತರವಾಡು ಮನೆಗೆ ಕೊಂಡೊಯ್ಯಲಾಗುವುದು. ಅಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.