ಸವಣೂರು: ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಎ.22ರಿಂದ ಎ.24ರವರೆಗೆ ಶ್ರೀಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ ನಡೆಯಿತು.
ಎ.22ರಂದು ಪೂರ್ವಾಹ್ನ ಮುಂಡ್ಯೆ ಆರೋಹಣ ನಡೆಯಿತು.ಎ.23ರಂದು ಬೆಳಿಗ್ಗೆ ತಳಿರು ತೋರಣ,ರಾತ್ರಿ ದೈವಗಳ ಭಂಡಾರ ತೆಗೆದು, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಪಾಲ್ತಾಡಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಇದರ 16ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ನಡೆಯಿತು. ಬಳಿಕ ಪಾಲ್ತಾಡಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಪ್ರಾಯೋಜಿತ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾ ಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ ಭಂಡಾರ ಚಾವಡಿ ತುಳು ಯಕ್ಷಗಾನ ಬಯಲಾಟ ನಡೆಯಿತು. ಎ.24ರಂದು ಬೆಳಿಗ್ಗೆ ಉಳ್ಳಾಕುಲು ದೈವದ ನೇಮ ನಡೆದು ಸಿರಿಮುಡಿ ಗಂಧಪ್ರಸಾದ, ನಂತರ ಕೊಳ್ಳಿ ಕುಮಾರ ದೈವದ ನೇಮ,ಮಹಿಷಂತಾಯ ದೈವದ ನೇಮ,ಕೊಡಮಣಿತ್ತಾಯ ದೈವದ ಒಲಸರಿ ನೇಮೋತ್ಸವ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ,ಪುರುಷ ದೈವದ ನೇಮೋತ್ಸವ ,ಪಂಜುರ್ಲಿ ದೈವದ ನೇಮೋತ್ಸವ ,ಸಂಜೆ ವ್ಯಾಘ್ರ ಚಾಮುಂಡಿ ದೈವದ ಒಲಸರಿ ನೇಮೋತ್ಸವ ನಡೆದು ರಾತ್ರಿ ಮುಂಡ್ಯೆ ಅವರೋಹಣ ನಡೆಯಿತು.

ಈ ಸಂದರ್ಭದಲ್ಲಿ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗೌರವಾಧ್ಯಕ್ಷ, ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು,ಅಧ್ಯಕ್ಷ ವಿನಯಚಂದ್ರ ಕೆಳಗಿನಮನೆ, ಉಪಾಧ್ಯಕ್ಷರಾದ ರಘುನಾಥ ರೈ ನಡುಕೂಟೇಲು, ವಿಠಲ ಶೆಟ್ಟಿ ಪಾಲ್ತಾಡಿ, ದಿವಾಕರ ಬಂಗೇರ ಬೊಳಿಯಾಲ, ಪದ್ಮಪ್ರಸಾದ್ ಕಲಾಯಿ,ಕೃಷ್ಣಪ್ರಸಾದ್ ಪಾರ್ಲ,ಪ್ರವೀಣ್ ರೈ ನಡುಕೂಟೇಲು, ಕಾರ್ಯದರ್ಶಿ ಜಯರಾಮ ಗೌಡ ದೊಡ್ಡ ಮನೆ,ಜತೆ ಕಾರ್ಯದರ್ಶಿಗಳಾದ ತಾರಾನಾಥ ಬೊಳಿಯಾಲ,ಖಜಾಂಚಿ ಪುರುಷೋತ್ತಮ ಅಂಗಡಿಹಿತ್ಲು, ಆರು ಮನೆಯ ಪ್ರಮುಖರಾದ ಪಾಲ್ತಾಡು ವಿನೋದ್ ರೈ ಪಾಲ್ತಾಡಿ ಗುತ್ತಿನಮನೆ,ಜನಾರ್ದನ ಗೌಡ ಕೆಳಗಿನಮನೆ,ಮೋನಪ್ಪ ಗೌಡ ದೊಡ್ಡಮನೆ,ಅಶೋಕ್ ಗೌಡ ಖಂಡಿಗೆ,ರಾಮಕೃಷ್ಣ ಗೌಡ ಅಂಗಡಿಹಿತ್ಲು, ಜನಾರ್ದನ ಬಂಗೇರ ಬೊಳಿಯಾಲ, ಪಾಲ್ತಾಡಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ತಾರಾನಾಥ, ಕಾರ್ಯದರ್ಶಿ ಗಣೇಶ್ ಗೌಡ ಅಮೆಚ್ಚೋಡು ಹಾಗೂ ಪದಾಧಿಕಾರಿಗಳು, ಸದಸ್ಯರು, ದೈವಸ್ಥಾನದ ಆಡಳಿತ ಸಮಿತಿ ಸದಸ್ಯರು ಊರವರು ಉಪಸ್ಥಿತರಿದ್ದರು.