ಎರಡು ದಿನದ ಅಂತರದಲ್ಲಿ ಈರ್ವರು ಸಹೋದರರು ಮೃತ್ಯು
ಸವಣೂರು: ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಚೆನ್ನಾವರ ನಿವಾಸಿ ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಝೋನ್ ಅಧ್ಯಕ್ಷ ಅಬ್ದುಲ್ ಕರೀಂ ಹಾಜಿ(54.ವ) ಎ.24ರಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಸುನ್ನೀ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕರೀಂ ಅವರು ಸಾಮಾಜಿಕವಾಗಿ, ಧಾರ್ಮಿಕವಾಗಿ ತೊಡಗಿಸಿಕೊಳ್ಳುತ್ತಿದ್ದರು.ಮೂರು ದಿನದ ಅಂತರದಲ್ಲಿ ಸಹೋದರರಿಬ್ಬರು ನಿಧನ ಹೊಂದಿದ ಘಟನೆ ವರದಿಯಾಗಿದೆ. ಅಬ್ದುಲ್ ಕರೀಂ ಹಾಜಿ(54.ವ) ಎ.24ರಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಬ್ದುಲ್ ಕರೀಂ ಹಾಜಿಯವರ ಅಣ್ಣ ಫಯಾಜ್ ಹಾಜಿ ಅವರು ಎ.22ರಂದು ಸೌದಿ ಅರೇಬಿಯಾದಲ್ಲಿ ನಿಧನ ಹೊಂದಿದ್ದು ಎ.24ರಂದು ಅವರ ದಫನ ಕಾರ್ಯ ಅಲ್ಲೇ ನಡೆದಿತ್ತು. ಎ.24ರಂದು ಸಂಜೆ ಕರೀಂ ಹಾಜಿಯವರೂ ನಿಧನ ಹೊಂದಿದ್ದು ಕುಟುಂಬಕ್ಕೆ ಒಂದರ ಮೇಲೊಂದು ಆಘಾತ ಉಂಟಾಗಿದೆ.
ಮೃತರು ಪತ್ನಿ ಅಸ್ಮಾ, ಐವರು ಮಕ್ಕಳು, ಸಹೋದರರಾದ ಹಾಫಿಲ್ ಅಬ್ದುಲ್ ಸಲಾಮ್ ನಿಝಾಮಿ ಚೆನ್ನಾರ್, ಅಬ್ದುಲ್ ಮುತ್ತಲಿಬ್ ಚೆನ್ನಾರ್, ಅಬ್ದುಲ್ ಅಝೀಝ್ ಚೆನ್ನಾರ್ ಅವರನ್ನು ಅಗಲಿದ್ದಾರೆ.
ರಿಯಾದ್ನಲ್ಲಿ ಫಯಾಝ್ ದಫನ ಕಾರ್ಯ
ಅಬ್ದುಲ್ ಕರೀಂ ಹಾಜಿ ಅವರ ಸಹೋದರ ಫಯಾಜ್ ಹಾಜಿ ಎ.22ರಂದು ಮಂಗಳವಾರ ರಿಯಾದ್ ಪ್ರೊವಿನ್ಸ್ ಅಲ್ ಕುವಯ್ಯಾ ಎಂಬಲ್ಲಿ ನಿಧನರಾದರು. ಮೃತರು ಕೆಸಿಎಫ್ ಅಲ್ ಕಸೀಮ್ ಝೂನ್ ವಾದ್ಮ ಸೆಕ್ಟರ್ ಸದಸ್ಯರಾಗಿದ್ದರು. ಅಲ್ ಕಸೀಮ್ ಝೋನ್ ನಾಯಕರಾದ ಯಾಕೂಬ್ ಸಖಾಫಿ, ಸಾಲಿಹ್ ಬೆಳ್ಳಾರೆ, ಅಬ್ದುಲ್ ಖಾದರ್ ಕಣ್ಣಂಗಾರ್, ತಾಜುದ್ದೀನ್ ಕೆಮ್ಮಾರ ಬುರೈದದಿಂದ ತೆರಳಿ ಮೃತರ ದಫನ ಕಾರ್ಯಕ್ಕೆ ಬೇಕಾದ ಎಲ್ಲಾ ದಾಖಲೆ ಪತ್ರಗಳನ್ನು ಸರಿಪಡಿಸಿ ಎ.24ರಂದು ಮಸ್ಜಿದ್ ಇಬ್ ಬಾಝ್ ಗುವಾಯ, ಖಬರ್ ಸ್ಥಾನದಲ್ಲಿ ದಫನ ಮಾಡಲಾಯಿತು.
ಫಯಾಜ್ ಅವರ ಸ್ನೇಹಿತರು, ಕುಟುಂಬಸ್ಥರು ದಫನ ಕಾರ್ಯದಲ್ಲಿ ಪಾಲ್ಗೊಂಡರು.