ಉಪ್ಪಿನಂಗಡಿ: ಪುತ್ತೂರಿನಿಂದ ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಾಲಯಕ್ಕೆ ಆಗಮಿಸಿದ ಪರಮಪೂಜ್ಯ ಸದ್ಗುರು ಶ್ರೀ ಸುಧೀಂದ್ರತೀರ್ಥ ಗುರುಗಳ ಪಾದುಕಯಾತ್ರೆಯನ್ನು ದೇವಾಲಯದ ರಥ ಬೀದಿಯಲ್ಲಿ ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ಬಳಿಕ ಪಾದುಕ ಪೂಜೆ ನೆರವೇರಿತು. ಮಂಗಳೂರಿನ ಗುರುದತ್ ಕಾಮತ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮದ ವಿವರ ನೀಡಿದರು. ರಾತ್ರಿ ಏಕಾದಶಿ ಭಜನೆ, ರಾತ್ರಿ ಪೂಜೆ ನೆರವೇರಿತು. ಈ ಸಂದರ್ಭ ಪುತ್ತೂರಿನ ಪ್ರಮುಖರಾದ ಅಶೋಕ್ ಪ್ರಭು, ಚಂದ್ರಕಾಂತ ಭಟ್, ರವಿಶಂಕರ್ ಪೈ, ಕೇದಾರ್ ಕುಡ್ವ, ಪ್ರಕಾಶ್ ಶೆಣೈ, ದೇವಾಲಯದ ಆಡಳಿತ ಮೊಕ್ತೇಸರರಾದ ಬಿ. ಗಣೇಶ ಶೆಣೈ ಮೊಕ್ತೇಸರರಾದ ಯು.ನಾಗರಾಜ ಭಟ್, ಪಾಣೆಮಂಗಳೂರು ದೇವಿದಾಸ ಭಟ್, ಕೆ.ಅನಂತರಾಯ ಕಿಣಿ, ಡಾ. ಯಂ.ಆರ್ ಶೆಣೈ, ಜಿಎಸ್ಬಿ ಸಮಾಜ ಬಾಂಧವರಾದ ಉಪೇಂದ್ರ ಪೈ, ಕರಾಯ ಗಣೇಶ ನಾಯಕ್, ಪಿ. ಹರೀಶ ಪೈ, ನರಸಿಂಹ ಪಡಿಯಾರ್, ವೈ. ವೆಂಕಟೇಶ ಶೆಣೈ, ಎಂ. ಉಮೇಶ ಶೆಣೈ, ಯಂ. ಸತ್ಯಪ್ರಸಾದ್ ಭಟ್ ಲಕ್ಷ್ಮೀನಗರ, ಕೆ. ಶ್ರೀನಿವಾಸ ಪಡಿಯಾರ್, ನಾಗೇಶ ಪ್ರಭು, ವಾಸುದೇವ ಪ್ರಭು ಎಚ್, ಕೆ, ನರಸಿಂಹ ನಾಯಕ್, ಕೆ. ಗಿರಿಧರ್ ನಾಯಕ್, ಕರಾಯ ಗಿರೀಶ ನಾಯಕ್, ವ್ಯವಸ್ಥಾಪಕರಾದ ಕೆ.ರಾಮಕೃಷ್ಣ ಪ್ರಭು, ಕೆ.ಮಂಜುನಾಥ ನಾಯಕ್ ಉಪಸ್ಥಿತರಿದ್ದರು. ಧಾರ್ಮಿಕ ವಿಧಿ- ವಿಧಾನವನ್ನು ಅರ್ಚಕರಾದ ರವೀಂದ್ರ ಭಟ್, ಸಂದೀಪ್ ಭಟ್, ಕೆ.ಸುಬ್ರಹ್ಮಣ್ಯ ಭಟ್ ನಡೆಸಿಕೊಟ್ಟರು. ಶ್ರೀನಿವಾಸ ಭಟ್ ಸಹಕರಿಸಿದರು.