ಪುತ್ತೂರು: ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯ ಪ್ರ.ಕಾರ್ಯದರ್ಶಿ ಜೆ.ಎಸ್ ಝೈನುದ್ದೀನ್ ಅವರಿಗೆ ಜಮಾಅತ್ ಕಮಿಟಿ ಮತ್ತು ಆದರ್ಶ ಸೇವಾ ಸಂಘದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಎ.25ರಂದು ರೆಂಜಲಾಡಿ ಮಸೀದಿಯಲ್ಲಿ ನಡೆಯಿತು.
ಜಮಾಅತ್ ಖತೀಬ್ ನಾಸಿರ್ ಫೈಝಿ ಬೀಳ್ಕೊಡುಗೆ ಕುರಿತು ಮಾತನಾಡಿದರು. ಆರ್.ಐ.ಸಿ ಸಂಚಾಲಕ ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆವೈಎಂಎ ಹಾಗೂ ಎಸ್‌ಕೆಎಸ್‌ಬಿವಿ ವತಿಯಿಂದಲೂ ಇದೇ ವೇಳೆ ಬೀಳ್ಕೊಡಲಾಯಿತು.
ಜಮಾಅತ್ ಅಧ್ಯಕ್ಷ ಎಂ ಅಲಿ ಹಾಜಿ, ಆದರ್ಶ ಸೇವಾ ಸಂಘದ ಅಧ್ಯಕ್ಷ ಇಮ್ರಾನ್ ಮಲ್ನಾಡ್, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಅಝೀಝ್ ರೆಂಜಲಾಡಿ, ಕೆವೈಎಂಎ ಅಧ್ಯಕ್ಷ ರಝಾಕ್ ಬಿ.ಜಿ, ಮುಅಲ್ಲಿಮ್ ಅಬೂಬಕ್ಕರ್ ಮುಸ್ಲಿಯಾರ್ ಹಾಗೂ ಜಮಾಅತರು ಉಪಸ್ಥಿತರಿದ್ದರು.