ಕಲ್ಲಡ್ಕದಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 15ನೇ ಶಾಖೆ ಉದ್ಘಾಟನೆ

0

ಪುತ್ತೂರು: ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ, ದ.ಕ,ಜಿಲ್ಲಾ ಮಟ್ಟದಲ್ಲಿ ಕಾರ್ಯಾಚರಿಸುತ್ತಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 15ನೇ ಶಾಖೆಯು ಎ. 26ರಂದು ಕಲ್ಲಡ್ಕದ ಪ್ರೀತಿ ಟವರ್‍ಸ್‌ನ ಪ್ರಥಮ ಮಹಡಿಯಲ್ಲಿ ಉದ್ಘಾಟನೆಗೊಂಡಿತು.

ದಕ್ಷಿಣ ಕನ್ನಡ ಜಿಲ್ಲೆಯ ಜನರ ಸಹಕಾರಿ ಗುಣದಿಂದ ಇಲ್ಲಿನ ಸಹಕಾರ ರಂಗ ಯಶಸ್ಸು- ಕ್ಯಾ| ಬ್ರಿಜೇಶ್ ಚೌಟ
ಆದರ್ಶ ಸಹಕಾರ ಸಂಸ್ಥೆಯ ಕಲ್ಲಡ್ಕ ಶಾಖೆಯನ್ನು ಹಾಗೂ ಸಂಸ್ಥೆಯ ಭದ್ರತಾ ಕೊಠಡಿಯನ್ನು ಸಂಸದ ಕ್ಯಾ| ಬ್ರಿಜೇಶ್ ಚೌಟ ಉದ್ಘಾಟಿಸಿ ಮಾತನಾಡಿ ದ.ಕ.ಜಿಲ್ಲೆ ಸಹಕಾರ ಕ್ಷೇತ್ರದಲ್ಲಿ ಅತ್ಯಂತ ಮುಂದುವರಿದ ಜಿಲ್ಲೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜನರ ಸಹಕಾರಿ ಗುಣದಿಂದ ಇಲ್ಲಿನ ಸಹಕಾರ ರಂಗ ಯಶಸ್ಸು ಕಾಣಲು ಸಾಧ್ಯವಾಗಿದೆ. ತುಳುನಾಡಿನ ಮಣ್ಣಿನ ಗುಣ, ಇಲ್ಲಿನ ಸಂಸ್ಕೃತಿ ಅತ್ಯಂತ ಶ್ರೇಷ್ಠವಾಗಿದೆ, ನಮ್ಮ ಊರಿನ ಸಾವಿರಾರು ಮಂದಿ ಬೇರೆ ರಾಜ್ಯಕ್ಕೆ ತೆರಳಿ, ಭಾಷೆ ಗೊತ್ತಿಲ್ಲದಿದ್ದರೂ ಆ ಊರಲ್ಲಿ ಉದ್ಯಮ ಕ್ಷೇತ್ರದಲ್ಲಿ ಯಶ್ಸಸ್ವು ಪಡೆದಿದ್ದಾರೆ ಎಂದು ಹೇಳಿದ ಅವರು, ಕೇಂದ್ರ ಸರಕಾರವು ಸಹಕಾರ ರಂಗಕ್ಕೆ ಮಹತ್ವವನ್ನು ನೀಡುತ್ತಿದೆ. ಸಹಕಾರ ಕ್ಷೇತ್ರವನ್ನು ಬಲಪಡಿಸುವ ದೃಷ್ಟಿಯಿಂದ ಸಹಕಾರಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗಿದೆ. ನಮ್ಮ ಜಿಲ್ಲೆಯಲ್ಲೂ ಅಮೂಲ್ ಮಾದರಿಯ ಸಂಸ್ಥೆ ಸ್ಥಾಪನೆಯಾಗಬೇಕು. ಆಮೂಲಕ ಉದ್ಯೋಗ ಸೃಷ್ಠಿಯಾಗಬೇಕು ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಸಹಕಾರ ಸಂಸ್ಥೆಗಳು ಮುಂದೆ ಬರಬೇಕು ಎಂದರು. ಸವಣೂರು ಕೆ.ಸೀತಾರಾಮ ರೈಯವರು ಆದರ್ಶ ಸಂಸ್ಥೆಯನ್ನು ಆದರ್ಶಯುತವಾಗಿ ಬೆಳೆಸುತ್ತಿದ್ದಾರೆ. ಕಲ್ಲಡ್ಕದಲ್ಲಿ ಸಂಸ್ಥೆಯ 15 ನೇ ಶಾಖೆಯನ್ನು ಆರಂಭಿಸಿದ್ದಾರೆ ಇವರ ನೇತ್ರತ್ವದಲ್ಲಿ ಸಂಸ್ಥೆಯು ಮತ್ತಷ್ಟು ಹೆಸರನ್ನು ಪಡೆಯಲಿ ಎಂದು ಶುಭಹಾರೈಸಿದರು.

ಸೀತಾರಾಮ ರೈ ಸಹಕಾರ ಕ್ಷೇತ್ರದ ಅನುಭವಿ-ಡಾ. ಪ್ರಭಾಕರ್ ಭಟ್ ಕಲ್ಲಡ್ಕ
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕರವರು ಕಂಪ್ಯೂಟರ್ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿ ಕಲ್ಲಡ್ಕ ಅತ್ಯಂತ ಅಭಿವೃದ್ಧಿಯನ್ನು ಹೊಂದಿರುವ ಊರಾಗಿದ್ದು, ಕಲ್ಲಡ್ಕ ಹಲವು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದ್ದು, ಇಲ್ಲಿ ಈಗಾಗಲೇ 12 ಸಹಕಾರ ಸಂಘಗಳು ಇದ್ದು, ಪ್ರಸ್ತುತ ಸವಣೂರು ಸೀತಾರಾಮ ರೈಯವರು ತಮ್ಮ ಅದರ್ಶ ಸಹಕಾರ ಸಂಸ್ಥೆಯ ಶಾಖೆಯನ್ನು ಪ್ರಾರಂಭಿಸಿದ್ದಾರೆ. ಸೀತಾರಾಮ ರೈಯವರು ಕಳೆದ 35 ವರುಷಗಳಿಂದ ಸಹಕಾರ ಕ್ಷೇತ್ರದಲ್ಲಿ ಅನುಭವಿಯಾಗಿದ್ದಾರೆ. ಸಹಕಾರ ಸಂಸ್ಥೆಗಳು ಜನರಿಗೆ ಸುಲಭವಾಗಿ ಆರ್ಥಿಕ ವ್ಯವಹಾರವನ್ನು ಕೊಡುವುದರಿಂದ ಜನರಿಗೆ ಸಹಕಾರ ಸಂಸ್ಥೆಗಳ ಮೇಲೆ ನಂಬಿಕೆ ಜಾಸ್ತಿಯಾಗಿದೆ ಎಂದು ಹೇಳಿ, ಕಲ್ಲಡ್ಕದಲ್ಲಿ ಆದರ್ಶ ಸಹಕಾರ ಸಂಸ್ಥೆ ಉಜ್ವಲವಾಗಿ ಬೆಳೆಯಲಿ ಎಂದು ಶುಭಹಾರೈಸಿದರು.

2.೦1 ಕೋ.ರೂ, ಲಾಭ- ಸವಣೂರು ಕೆ.ಸೀತಾರಾಮ ರೈ
ಸಂಘದ ಅಧ್ಯಕ್ಷ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘವು 2024-25ನೇ ಸಾಲಿನಲ್ಲಿ 828.79 ಕೋ.ರೂ, ವ್ಯವಹಾರವನ್ನು ನಡೆಸಿ, 2.01 ಕೋ.ರೂ, ಲಾಭ ಗಳಿಸಿರುತ್ತದೆ. ಪ್ರಸ್ತುತ 8,917 ಸದಸ್ಯರನ್ನು ಹೊಂದಿ. 3.39 ಕೋ.ರೂ, ಪಾಲು ಬಂಡವಾಳ, 150 ಕೋ.ರೂ,ಠೇವಣಾತಿ ಸಂಗ್ರಹಿಸಿ, 133 ಕೋ, ರೂ.ಗಳಷ್ಟು ವಿವಿಧ ರೀತಿಯ ಸಾಲಗಳನ್ನು ವಿತರಿಸಲಾಗಿದೆ. 23 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಂಘವು 15 ಶಾಖೆಗಳನ್ನು ಹೊಂದಿದ್ದು, ಮುಂದೆ ಮಂಗಳೂರಿನ ಪಡೀಲ್ ನಲ್ಲಿ ಶಾಖೆಯನ್ನು ತೆರೆಯಲಿ‌ದ್ದೇವೆ ಎಂದು ಸೀತಾರಾಮ ರೈ ತಿಳಿಸಿದರು.


ಉದ್ಯಮಿ ಹಾಜಿ ಸುಲೈಮಾನ್ ಪ್ರಥಮ ಠೇವಣಿ ಪತ್ರ ಬಿಡುಗಡೆಗೊಳಿದರು. ಕೃಷಿಕ ಹಾಗೂ ಆದರ್ಶ ಸಹಕಾರ ಸಂಘದ ನಿರ್ದೇಶಕ ಬಿ.ಮಹಾಬಲ ರೈ ಬೋಳಂತೂರು ಅತಿಥಿಯಾಗಿ ಭಾಗವಹಿಸಿದರು. ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ, ನಿರ್ದೇಶಕರುಗಳಾದ ರವೀಂದ್ರನಾಥ ಶೆಟ್ಟಿ ಕೇನ್ಯ, ಚಿಕ್ಕಪ್ಪ ನಾಕ್ ಅರಿಯಡ್ಕ, ಸೀತಾರಾಮ ಶೆಟ್ಟಿ ಮಂಗಳೂರು, ಜಯಪ್ರಕಾಶ್ ರೈ ಸುಳ್ಯ, ಎಸ್.ಎಂ.ಬಾಪು ಸಾಹೇಬ್ ಸುಳ್ಯ, ವಿ.ವಿ.ನಾರಾಯಣ ಭಟ್ ನರಿಮೊಗರು, ಮಹಾದೇವ ಎಂ. ಮಂಗಳೂರು, ಅಶ್ವಿನ್ ಎಲ್ ಶೆಟ್ಟಿ ಸವಣೂರು, ಎನ್.ರಾಮಯ್ಯ ರೈ ತಿಂಗಳಾಡಿ.ಪೂರ್ಣಿಮ ಎಸ್ ಆಳ್ವ ಮಂಗಳೂರು, ಯಮುನಾ ಎಸ್ ರೈ ಗುತ್ತುಪಾಲ್, ಸಂಘದ ಮಹಾಪ್ರಬಂಧಕ ವಸಂತ್ ಜಾಲಾಡಿ, ಎಜಿಎಂ ಸುನಾದರಾಜ್ ಶೆಟ್ಟಿ, ಕಲ್ಲಡ್ಕ ಶಾಖಾ ವ್ಯವಸ್ಥಾಪಕ ಭರತ್‌ರಾಜ್ ಕೆ ಹಾಗೂ ಆದರ್ಶ ಸಹಕಾರ ಸಂಸ್ಥೆಯ ಎಲ್ಲಾ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅದರ್ಶ ಸಹಕಾರ ಸಂಸ್ಥೆಯ ಪಂಜ ಶಾಖೆಯ ವ್ಯವಸ್ಥಾಪಕರಾದ ರಕ್ಷಾ ಪ್ರಾರ್ಥನೆಗೈದರು, ಆದರ್ಶ ಸಹಕಾರ ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ನೋಣಾಲು ವಂದಿಸಿದರು. ನಿವೃತ್ತ ವ್ಯವಸ್ಥಾಪಕ ಪರಮೇಶ್ವರ ಗೌಡ ಕಾರ್‍ಯಕ್ರಮ ನಿರೂಪಿಸಿದರು.

ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕರಾದ ರುಕ್ಮಯ್ಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಉದ್ಯಮಿ ಜಗನ್ನಾಥ ಚೌಟ ಬದಿಗುಡ್ಡೆ, ಶಾಂತರಾಮ್ ಶೆಟ್ಟಿ ಬೋಳಂತೂರು, ಸುಧಾಕರ್ ರೈ ಮೈಸೂರು, ಬಂಟ್ವಾಳ ಎಪಿಎಂಸಿ ಮಾಜಿ ಅಧ್ಯಕ್ಷ ನೇಮಿರಾಜ್ ರೈ ಬೋಳಂತೂರು, ಗಂಗಾಧರ್ ರೈ ಪಡ್ಡಂಬೈಲು, ಬಾಲಕೃಷ್ಣ ಆಳ್ವ ಸಹಿತ ನೂರಾರು ಮಂದಿ ಆಗಮಿಸಿ, ಸಂಸ್ಥೆಗೆ ಶುಭಕೋರಿದರು.

ಆದರ್ಶ ಸಹಕಾರ ಸಂಘವು ಆರಂಭದಿಂದಲ್ಲೂ ಶಾಖಾ ವ್ಯಾಪ್ತಿಯ ಸರಕಾರಿ ಶಾಲೆಯಲ್ಲಿ 7 ರಿಂದ 10 ನೇ ತರಗತಿಯಲ್ಲಿ ಕಲಿಯುತ್ತಿರುವ ಬಡ ಕುಟುಂಬದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ವಿದ್ಯಾನಿಧಿ ಸಹಾಯಧನವನ್ನು ನೀಡುತ್ತಿದ್ದು, ಈವರೆಗೆ ಒಟ್ಟು 1,295 ಮಕ್ಕಳಿಗೆ 26,29,೦೦೦ ರೂಗಳಷ್ಟು ಮೊತ್ತ ನೀಡಲಾಗಿದೆ ಎಂದು ಸೀತಾರಾಮ ರೈ ತಿಳಿಸಿದರು.


ಕೇಂದ್ರ ಕಚೇರಿಗೆ ಸ್ವಂತ ಕಟ್ಟಡ
ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡ, ಶಾಖೆ ಮತ್ತು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಉದ್ದೇಶದಿಂದ ಸವಣೂರಿನಲ್ಲಿ ೦.75 ಸೆಂಟ್ಸ್ ಪರಿವರ್ತಿತ ಭೂಮಿಯನ್ನು ಖರೀದಿಸಿ, ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲಾಗಿದ್ದು, 25ನೇ ವರ್ಷಕ್ಕೆ ಮೊದಲು ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಗುವುದು.
-ಸವಣೂರು ಕೆ.ಸೀತಾರಾಮ ರೈ
ಅಧ್ಯಕ್ಷರು- ಆದರ್ಶ ವಿವಿಧೋದ್ದೇಶ ಸಹಕಾರ ಸಂಘ

LEAVE A REPLY

Please enter your comment!
Please enter your name here