ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ-ಪುತ್ತೂರು ಉಪವಿಭಾಗದ ನಾಲ್ಕು ಸ್ಥಾನಗಳೂ ಸಹಕಾರ ಭಾರತಿಗೆ

0

ಪುತ್ತೂರು:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಗೆ ನೂತನ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಪುತ್ತೂರು ಉಪವಿಭಾಗದಲ್ಲಿ ನಾಲ್ಕು ಸ್ಥಾನಗಳಲ್ಲಿಯೂ ಸಹಕಾರ ಭಾರತಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಒಕ್ಕೂಟದ ಒಟ್ಟು 16 ಸ್ಥಾನಗಳ ಪೈಕಿ 10ರಲ್ಲಿ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಬಳಗದ ಅಭ್ಯರ್ಥಿಗಳು ಹಾಗೂ 6 ಸ್ಥಾನಗಳಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಈ ಬಾರಿ ಸಹಕಾರ ಭಾರತಿ ಅಧಿಕಾರ ಕಳೆದುಕೊಂಡಿದೆ.ಚುನಾವಣೆ ಏ.26ರಂದು ನಡೆಯಿತು.

ಪುತ್ತೂರು ಉಪವಿಭಾಗದಿಂದ ಸಹಕಾರ ಭಾರತಿ ಅಭ್ಯರ್ಥಿಗಳಾದ ಎಸ್.ಬಿ.ಜಯರಾಮ ರೈ, ಕೆ.ಚಂದ್ರಶೇಖರ್ ರಾವ್ ನಿಧಿಮುಂಡ, ಭರತ್ ನೆಕ್ರಾಜೆ ಹಾಗೂ ಬೆಳ್ತಂಗಡಿಯ ಪ್ರಭಾಕರ್ ಅವರು ಗೆಲುವು ಸಾಧಿಸಿದ್ದಾರೆ.

LEAVE A REPLY

Please enter your comment!
Please enter your name here