ಸಾಹಿತ್ಯ ಜನ ಜೀವನದ ಗತಿಬಿಂಬ: ಡಾ.ರಮಾನಂದ ಬನಾರಿ
ಪೆರ್ಲ: ಕಾವ್ಯ ಆದಿಯಲ್ಲಿ ಜನಜೀವನದ ಪ್ರತಿಬಿಂಬವೂ ಗತಿಬಿಂಬವೂ ಆಗಿದ್ದು ಯೋಧ, ವ್ಯಾಧ ನ್ಯಾಯಗಳ ಸಮ್ಮಿಲನವೇ ಕವಿತೆ. ಜೀವಗಳು ಹುಟ್ಟುವ ಹಾಗೆ ಪ್ರಕೃತಿ -ಪುರುಷ ಸಂಯೋಗದಂತೆ ಪಾಂಡಿತ್ಯ ಪ್ರತಿಭಾ ಸಂಪನ್ನತೆಯಿಂದ ಕಾವ್ಯ ಸಮೃದ್ಧತೆ ಪಡೆಯುತ್ತದೆ ಎಂದು ಹಿರಿಯ ಸಾಹಿತಿ, ಕಾಸರಗೋಡು ಜಿಲ್ಲಾಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಹೇಳಿದರು .ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶಯದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ, ಸವಿ ಹೃದಯದ ಕವಿ ಮಿತ್ರರು ಪೆರ್ಲ ಇವರ ಸಹಕಾರದೊಂದಿಗೆ ಪೆರ್ಲದ ವ್ಯಾಪಾರಿ ಭವನದಲ್ಲಿ ನಡೆದ ಕವಿತಾ ಕೌತುಕ ಸರಣಿ 3 -ಕವಿ ಕಾವ್ಯ ಸಂವಾದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತ ಶಿಕ್ಷಕ ಉಮೇಶ ಕೆ. ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ , ಪೆರ್ಲ ವ್ಯಾಪಾರಿ ವ್ಯವಸಾಯ ಏಕೋಪನ ಸಮಿತಿ ಅಧ್ಯಕ್ಷ ರಾಜಾರಾಮ ಶೆಟ್ಟಿ ಕಾಟುಕುಕ್ಕೆ ಮುಖ್ಯ ಅತಿಥಿಗಳಾಗಿದ್ದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ.ಪಿ.ಎನ್ ಮೂಡಿತ್ತಾಯ,ನಿವೃತ್ತ ಪ್ರಾಂಶುಪಾಲ ಬೇ.ಸೀ ಗೋಪಾಲಕೃಷ್ಣ,ಉಪನ್ಯಾಸಕ ಬಾಲಕೃಷ್ಣ ಬೇರಿಕೆ,ಮುಹಮ್ಮದಾಲಿ ಪೆರ್ಲ ಉಪಸ್ಥಿತರಿದ್ದರು.

ಕವಿಗಳಾದ ಎಸ್ .ಎನ್ ಭಟ್ ಸೈಪಂಗಲ್ಲು, ಹರೀಶ್ ಪೆರ್ಲ, ನಳಿನಿ ಸೈಪಂಗಲ್ಲು ,ಗ್ರೀಷ್ಮ ಬಳ್ಳ, ವೆಂಕಟ್ ಭಟ್ ಎಡನೀರು ,ದಯಾನಂದ ರೈ ಕಳ್ವಾಜೆ, ಹರೀಶ್ ನಾಯಕ್ ಮೀಯಪದವು, ನಿರ್ಮಲಾ ಶೇಷಪ್ಪ ಖಂಡಿಗೆ, ಆನಂದ ರೈ ಅಡ್ಕಸ್ಥಳ, ಸುಂದರ ಬಾರಡ್ಕ, ವಿಜಯ ಕಾನ, ದೀಕ್ಷಾ ಎಸ್. ಪಿ ,ಹರ್ಷಿತಾ.ಪಿ, ಪ್ರೇಮಾ ಶೆಟ್ಟಿ ಮೂಲ್ಕಿ, ದೀಕ್ಷಾ ಕೆಜಕ್ಕಾರು ,ವನಜಾಕ್ಷಿ ಚಂಬ್ರಕಾನ,ದಿಯಾ ಮೂಲ್ಕಿ,ಮಂಜುಶ್ರೀ ನಲ್ಕ ಕವಿ ಕಾವ್ಯ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ, ಮಡಿದವರಿಗೆ ಸಂತಾಪ ಸೂಚಿಸಲಾಯಿತು. ದೀಕ್ಷಾ ,ಗ್ರೀಷ್ಮಾ, ಹರ್ಷಿತಾ ಪ್ರಾರ್ಥನೆ ಹಾಡಿದರು . ಸವಿ ಹೃದಯದ ಕವಿ ಮಿತ್ರರು ಪೆರ್ಲ ಇದರ ಸಂಚಾಲಕ ಸುಭಾಷ್ ಪೆರ್ಲ ಪ್ರಾಸ್ತಾವಿಕ ಭಾಷಣ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರು. ಖ್ಯಾತ ವಾಗ್ಮಿ ಆಯಿಶಾ ಎ.ಎ ಪೆರ್ಲ ವಂದಿಸಿದರು. ಕ.ಸಾ.ಪ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ,ಕವಯತ್ರಿ ಮಂಜುಶ್ರೀ ನಲ್ಕ ಕಾರ್ಯಕ್ರಮ ನಿರೂಪಿಸಿದರು.