ಕೃಷಿ ವಿಜ್ಞಾನಿಗಳಿಂದ ಕಾರ್ಯಾಗಾರ ,ಆರೋಗ್ಯ ತಪಾಸಣಾ ಶಿಬಿರ ,ಆಧಾರ್ ನೊಂದಣಿ ಮತ್ತು ತಿದ್ದುಪಡಿ ಶಿಬಿರ
ಸವಣೂರು: ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ,ತೋಟಗಾರಿಕೆ ಇಲಾಖೆ ದ.ಕ. ಮತ್ತು ಐಸಿಸಿಒಎ ಸಂಪನ್ಮೂಲ ಸಂಸ್ಥೆ ಬೆಂಗಳೂರು ಇದರ ಸಹಕಾರದಲ್ಲಿ ಆರಂಭಗೊಂಡ ಕಾಣಿಯೂರು ಸವಣೂರು ರೈತ ಉತ್ಪಾದಕ ಕಂಪನಿ ಲಿ.ನ ವಾರ್ಷಿಕ ಮಹಾಸಭೆಯು ಡಿ.13ರಂದು ಬೆಳಿಗ್ಗೆ 10ರಿಂದ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಠಾರದಲ್ಲಿ ನಡೆಯಲಿದೆ.
ಸಭೆಯ ಅಧ್ಯಕ್ಷತೆಯನ್ನು ಕಾಣಿಯೂರು ಸವಣೂರು ರೈತ ಉತ್ಪಾದಕ ಕಂಪನಿ ಲಿ.ನ ಅಧ್ಯಕ್ಷ ಗಿರಿಶಂಕರ ಸುಲಾಯ ವಹಿಸುವರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ಸವಣೂರು ಪ್ರಾ.ಕೃ.ಪ.ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಚಾರ್ವಾಕ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ರಾಜ್ಯ ರೈತ ಉತ್ಪಾದಕ ಸಂಸ್ಥೆಗಳ ಸಹಕಾರಿ ಸಂಘದ ನಿರ್ದೇಶಕ ವೀರಪ್ಪ ಗೌಡ,ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ರಶ್ಮಿ ಗೌರವ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಅಡಿಕೆ, ಕಾಳುಮೆಣಸು, ಕಾಫಿ ಬೆಳೆಗಳ ರೋಗ ಮತ್ತು ಗೊಬ್ಬರ ನಿರ್ವಹಣೆ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂದ ಕಾರ್ಯಾಗಾರ ನಡೆಯಲಿದೆ. ಕಾಫಿ, ಕಾಳುಮೆಣಸು, ಶ್ರೀಗಂಧದ ಗಿಡ, ಹೂವಿನ ಗಿಡಗಳು, ಹಣ್ಣಿನ ಗಿಡಗಳು ಮಾರಾಟಕ್ಕೆ ಲಭ್ಯವಿದೆ. ಯಂತ್ರೋಪಕರಣ ಇನ್ನಿತರ ಮಾರಾಟ ಮಳಿಗೆಗಳಿವೆ.ಪ್ರಾಥಮಿಕ ಆರೋಗ್ಯ ಕೇಂದ್ರ ಪಾಲ್ತಾಡಿ ಇದರ ವತಿಯಿಂದ ಉಚಿತ ಬಿ.ಪಿ., ಶುಗರ್ ಮತ್ತು ಆರೋಗ್ಯ ತಪಾಸಣೆ ನಡೆಯಲಿದೆ. ಅಂಚೆ ಇಲಾಖೆ ಪುತ್ತೂರು ಉಪವಿಭಾಗ ಇದರ ವತಿಯಿಂದ ಉಚಿತ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.