ಚೆಂದುಳ್ಳಿ ಚೆಲುವೆಯರ ನಯವಾದ ಕೈಗೊಂದು ಸ್ಟೈಲೀಶ್ ನೈಲ್ ಆರ್ಟ್

0


ಈಗ ಏನಿದ್ದರೂ ಕೂಡ ಸ್ಟೈಲೀಶ್ ಜಾಯಮಾನ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಒಂದಿಲ್ಲೊಂದು ವಿಚಾರದಲ್ಲಿ ಫ್ಯಾಷನ್ ಲೋಕ ಸೆಳೆಯುತ್ತಲೆ ಇರುತ್ತದೆ. ಅದರಲ್ಲೂ ಕಾಲಕ್ಕೆ ಸರಿಯಾಗಿ ಬದಲಾಗೂ ಈ ಸ್ಟೈಲ್‌ಗೆ ಹದಿಹರೆಯದ ಮನಸ್ಸುಗಳು ಹೆಚ್ಚಾಗಿ ಮನಸೇಲುತ್ತವೆ, ಟ್ರೆಂಡ್ ಹಿಂದೆ ಬೀಳ್ತಾರೆ.. ಇತ್ತೀಚೆಗೆ ಹತ್ತಾರು ಸ್ಟೈಲ್‌ಗಳ ನಡುವೆ ಚೆಂದುಳ್ಳಿ ಚೆಲುವೆಯರ ನಯವಾದ ಕೈ ಬೆರಳುಗಳ ಉಗುರುಗಳು ಬಣ್ಣ ಬಣ್ಣದ, ವಿನೂತನ ಡಿಸೈನ್ ಮಯವಾಗುತ್ತಿದೆ.


ಹೌದು, ನೈಲ್ ಆರ್ಟ್ ಅನ್ನೋದು ಇತ್ತೀಚೆಗೆ ಹೆಚ್ಚು ಟ್ರೆಂಡ್ ಕ್ರಿಯೇಟ್ ಮಾಡ್ತಿದೆ. ಮೊದಲು ಉದ್ದುದ್ದ ಉಗುರು ಬಿಟ್ಟಿರುವ ಸುಂದರಿಯರ ಕೋಮಲ ಕೈ ಉಗುರುಗಳಲ್ಲಿ ಪ್ಲೇನ್ ನೈಲ್ ಪಾಲಿಶ್‌ಗಳು ರಾರಾಜಿಸ್ತಾ ಇತ್ತು. ಆದ್ರೆ ಈಗ ಪ್ಲೇನ್ ನೈಲ್ ಪಾಲಿಶ್ ಬದಲಿಗೆ ನೈಲ್ ಆರ್ಟ್ ಫ್ಯಾಷನ್ ಕಮಾಲ್ ಮಾಡ್ತಾ ಇದೆ. ಹಿಂದೆಲ್ಲ ಕಾಸ್ಮೆಟಿಕ್ಸ್ ಶಾಪ್‌ಗಳು, ಫ್ಯಾನ್ಸಿ ಸ್ಟೋರ್ಸ್‌ಗಳಲ್ಲಿ ಬಣ್ಣ ಬಣ್ಣದ ನೈಲ್ ಪಾಲಿಶ್‌ಗಳು ಸಿಗುತ್ತಿತ್ತು. ಆದ್ರೆ ಈಗ ಬಣ್ಣ ಬಣ್ಣದ ನೈಲ್ ಪಾಲಿಶ್‌ಗಳ ಜೊತೆಗೆ ಸ್ಟೋನ್ಸ್, ಸ್ಟಿಕ್ಕರ್ಸ್, ಮೋಲ್ಸ್ ಹೀಗೆ ಉಗುರಿನ ಅಂದ ಹೆಚ್ಚಿಸೋದಿಕ್ಕೆ ನೈಲ್ ಆರ್ಟ್ ಸಲಕರಣೆಗಳು ಎಂಟ್ರಿಕೊಟ್ಟಿದೆ.


ಯಾವುದೇ ಕಾರ್ಯಕ್ರಮ ಇದೆ. ಪಾರ್ಟಿ ಇದೆ ಅಂದಾಗ ಸುಂದರವಾಗಿ ಕಾಣಿಸಿಕೊಳ್ಳೊ ಎಲ್ಲಾ ತಯಾರಿಯೆನೋ ಮಾಡುತ್ತೇವೆ.. ಹಾಗೆನೆ ನಮ್ಮ ನೈಲ್‌ಗಳ ಸೌಂದರ್ಯವೂ ಮುಖ್ಯ ಅಲ್ವಾ.. ನಿಮ್ಮ ಉಗುರು ಚೆಂದ ಇದ್ದರೆ ನಿಮ್ಮ ಲುಕ್ ಸೂಪರ್ ಆಗಿ ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಮ್ಮ ನೈಲ್‌ಗೆ ಯಾವ ಆರ್ಟ್ ಮಾಡಿಸಿಕೊಂಡ್ರೆ ಬೆಸ್ಟ್ ಅನ್ನೋದನ್ನ ನೀವೇ ನೋಡಿ..


ಕ್ಲಾಸಿಕ್ ಫ್ರೆಂಚ್ : ನೈಲ್‌ಆರ್ಟ್ ಮಾಡಲು ಉಗುರು ಹೆಚ್ಚು ಉದ್ದವಿಲ್ಲ ಎಂದು ಹಲವರಿಗೆ ಚಿಂತೆ ಕಾಡುತ್ತಿರುತ್ತದೆ. ಅದಕ್ಕೆಂದೆ ಮೈಕ್ರೋ ಫ್ರೆಂಚ್ ನೈಲ್ ಆರ್ಟ್ ಪ್ರಯತ್ನಿಸುವುದು ಉತ್ತಮ. ಉಗುರುಗಳಿಗೆ ಕೇವಲ ಒಂದು ಬಣ್ಣವನ್ನು ಹಚ್ಚಿ, ಆ ಉಗುರುಗಳ ತುದಿಗೆ ಬಿಳಿ ಬಣ್ಣದ ನೈಲ್ ಪಾಲಿಶ್ ಹಚ್ಚಿದರೆ ಉಗುರು ಸುಂದರವಾಗಿ, ಆಕಸ್ಮಿಕವಾಗಿ ಕಾಣಿಸುತ್ತದೆ.


ಮಲ್ಟಿಕಲರ್ ಫ್ರೆಂಚ್ ಮೆನಿಕ್ಯೂರ್ : ಫ್ರೆಂಚ್ ಮೆನಿಕ್ಯೂರ್‌ಗಳು ಯಾವಾಗಲೂ ಕ್ಲಾಸಿಕ್ ನೈಲ್ ಆರ್ಟ್ ಆಯ್ಕೆಯಾಗಿರುತ್ತವೆ. ಆದರೆ ಇದು ಸರಳವಾದ ಬಿಳಿ ಬಣ್ಣಗಳ ಮೇಲೆ ಬಹುವರ್ಣಗಳ ಅಲಂಕಾರವಾಗಿದೆ. ಇದರಲ್ಲಿ ಉಗುರುಗಳಿಗೆ ವಾಟರ್ ಕಲರ್ ನೈಲ್ ಪಾಲಿಶ್ ಅನ್ನು ಹಚ್ಚಿ ಬಳಿಕ ಒಂದೊಂದು ಉಗುರಿನ ಮೇಲೆ ವಿವಿಧ ಬಣ್ಣಗಳನ್ನು ಅರ್ಧ ಚಂದ್ರನ ಆಕಾರದಲ್ಲಿ ಹಚ್ಚುವುದಾಗಿದೆ. ಇದರಿಂದಾಗಿ ಉಗುರುಗಳು ಆಕಸ್ಮಿಕವಾಗಿ ಕಾಣುತ್ತದೆ.


ಗೋಲ್ಡ್ ಆಕ್ಸೆಂಟ್ ಜೆಲ್ ನೈಲ್ಸ್: ಉಗುರಿಗೆ ಗೋಲ್ಡ್ ಬಣ್ಣ ಹಚ್ಚುವುದು ಸುಂದರವಾಗಿ ಕಾಣುತ್ತದೆ ಅದರ ಜೊತೆಗೆ ರಾಯಲ್ಲುಕ್ ಸಹ ನೀಡುತ್ತದೆ. ಕೇವಲ ಒಂದು ಜೆಲ್ ನೈಲ್ ಪಾಲಿಶ್ ಹಚ್ಚಿ ಅದರ ಮೇಲೆ ಗೋಲ್ಡನ್ ಬಣ್ಣದ ಹರಳುಗಳನ್ನು ಅಥವಾ ಸ್ಟಿಕರ್ ಹಚ್ಚಿದರೆ ಸೂಪರ್ ಆಗಿ ಕಾಣುತ್ತದೆ.


ಸ್ಟಡ್ ನೇಲ್ ಆರ್ಟ್: ನಿಮಗೆ ಇಷ್ಟವಾಗುವ ಬಣ್ಣದ ನೈಲ್ ಪಾಲಿಶ್ ಹಚ್ಚಿ, ಅದರ ಮೇಲೆ ವಿವಿಧ ಡಿಸೈನ್ ಗಳ ಹರಳನ್ನು ಅಂಟಿಸಬಹುದು. ಕೇವಲ ಅರ್ಧ ಉಗುರಿಗೆ ನೈಲ್ ಪಾಲಿಶ್ ಹಚ್ಚಿ ಉಳಿದ ಕಡೆ ಈ ಹರಳು ಹಚ್ಚುವುದು ಸಹ ಸುಂದರವಾಗಿ ಕಾಣುತ್ತದೆ.


ಗ್ಲಿಟರ್ ನೇಲ್ ಆರ್ಟ್: ಈ ಗ್ಲಿಟರ್ ನಿಮ್ಮ ಉಗುರಿನ ಅಂದವನ್ನು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನೈಲ್ ಪಾಲಿಶ್ ಹಚ್ಚಿ, ಅದರ ಮೇಲೆ ಗ್ಲಿಟರ್ ಹಾಕುವುದು ಒಳ್ಳೆಯದು.


ಮಾರ್ಬಲ್ ನೈಲ್ಸ್: ಮಾರ್ಬಲ್ ಶೈಲಿಯೂ ಬಹಳ ವಿಭಿನ್ನವಾಗಿರುತ್ತದೆ. ಇದನ್ನು ನೀವು 2 ರಿಂದ 3 ನೈಲ್ ಪಾಲಿಶ್ ಬಳಸಿ ಮಾಡಬಹುದು. ರಿಸೆಪ್ಷನ್ ಸಮಯದಲ್ಲಿ ಈ ಆರ್ಟ್ ಬಹಳ ಸುಂದರವಾಗಿ ಕಾಣುತ್ತದೆ.


ಟು ಟೋನ್ ನೈಲ್ ಆರ್ಟ್: ನಿಮ್ಮ ಒಂದು ಉಗುರಿನ ಮೇಲೆ ಎರಡು ವಿಭಿನ್ನ ರೀತಿಯ ಬಣ್ಣಗಳನ್ನು ಅಂದರೆ ನೈಲ್ ಪಾಲಿಶ್ ಅನ್ನು ಉಪಯೋಗಿಸಿ ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸುವುದಾಗಿದೆ. ವಿಶೇಷವಾಗಿ ಇದು ನೀವು ಹಾಕುವ ಬಟ್ಟೆಗಳಿಗೆ ಹೋಲುವಂತೆಯೂ ನೈಲ್ ಪಾಲಿಶ್ ಗಳನ್ನು ಬಳಸಿಕೊಂಡು ವಿನ್ಯಾಸಗೊಳಿಸಬಹುದಾಗಿದೆ. ಇದು ವಿಶೇಷವಾಗಿ ನಿಮ್ಮ ಉಗುರುಗಳಿಗೆ ಗ್ರ್ಯಾಂಡ್ ಲುಕ್ ನೀಡುತ್ತದೆ.


ಕ್ಲಾಸಿಕ್ ಸ್ಟ್ರೀಪ್ಸ್: ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ ನೀವು ಸಾಮಾನ್ಯವಾಗಿ ಉಗುರುಗಳಿಗೆ ಬಣ್ಣ ಹಚ್ಚಿದ್ದ ಬಳಿಕ, ಅದು ಒಣಗಿದ ಮೇಲೆ ಬೇರೆ ಬೇರೆ ಬಣ್ಣಗಳ ನೈಲ್ ಪಾಲಿಶ್ ಉಪಯೋಗಿಸಿ ಕ್ರಿಯೇಟಿವ್ ಗೆರೆಗಳನ್ನು ಎಳೆಯಿರಿ.


ಚೆರಿ ನೈಲ್ಸ್: ನಿಮ್ಮ ಉಗುರುಗಳಿಗೆ ಕ್ಯೂಟ್ ಲುಕ್ ನೀಡುತ್ತದೆ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ ನೀವು ಸಾಮಾನ್ಯವಾಗಿ ಉಗುರುಗಳಿಗೆ ಬಣ್ಣ ಹಚ್ಚಿದ್ದ ಬಳಿಕ, ಅದು ಒಣಗಿದ ಮೇಲೆ ಕೆಂಪು ಮತ್ತು ಹಸಿರು ಬಣ್ಣದ ನೈಲ್ ಪಾಲಿಶ್ ಬಳಸಿ ಅದರ ಮೇಲೆ ಚೆರಿ ಹಣ್ಣಿನ ಚಿತ್ರವನ್ನು ಬಿಡಿಸಿ.


ವೆರೈಟಿ ಡಿಸೈನ್: ನೀವು ನಿಮ್ಮ ಉಗುರಿನ ಬೇರೆ ನಿಮಗೆ ಬೇಕಾದ ಚಿತ್ರವನ್ನು ಬಿಡಿಸಬಹುದು, ಹೂವುಗಳು, ಹಾರ್ಟ್? ಹೀಗೆ. ಒಂದೊಂದು ಉಗುರಿಗೆ ಒಂದೊಂದು ಬಣ್ಣವನ್ನು ಸಹ ಹಚ್ಚಬಹುದು.


ನಕಲಿ ಉಗುರುಗಳು : ನಿಮ್ಮ ಉಗುರು ಚಿಕ್ಕದಾಗಿದೆ, ಹಾಗಾಗಿ ಬೇರೆಯೇ ನಕಲಿ ಉಗುರು ಬೇಕು ಅಂದ್ರೆ ಅದು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಮ್ಮ ಬಟ್ಟೆಗೆ ಸರಿ ಹೊಂದುವ ನಕಲಿ ಉಗುರುಗಳು ನಿಮಗೆ ಸಿಗುತ್ತದೆ. ಇದು ನಿಮಗೆ ಯಾವ ಸೈಝ್‌ನಲ್ಲಿ ಬೇಕು ಆದು ಕೂಡ ಲಭ್ಯವಿರುತ್ತದೆ.

ಉಗುರಿನ ಮೇಲೆ ಅದ್ಭುತ ಚಿತ್ತಾರವನ್ನ ಬಿಡಿಸಿ, ಕೈ ಅಂದ ಹೆಚ್ಚಿಸುವ ಕೆಲಸ ಸುಲಭದ್ದಲ್ಲ. ಹಾಗಾಗಿ ಈ ನೈಲ್ ಆರ್ಟ್‌ಗಳನ್ನ ನೀವೇ ಮಾಡಿಕೊಳ್ಳೋದು ಕಷ್ಟ ಅನ್ನೋದಾದ್ರೆ ಬ್ಯೂಟಿ ಪಾರ್ಲರ್‌ಗಳಲ್ಲಿ ನೈಲ್ ಆರ್ಟ್ ಕರಗತ ಮಾಡಿಕೊಂಡ ಆರ್ಟಿಸ್ಟ್‌ಗಳು ಇರುತ್ತಾರೆ. ಅಲ್ಲಿ ನೀವು ನಿಮ್ಮ ನೈಲ್‌ನ ಬ್ಯೂಟಿಯನ್ನ ಹೆಚ್ಚಿಸಿಕೊಳ್ಳಬಹುದು.. ನಿಮ್ಮ ಬಟ್ಟೆಗೆ ನಿಮ್ಮ ಸ್ಟೈಲ್‌ಗೆ ಸರಿಹೊಂದುವ ರೀತಿಯಲ್ಲೆ ನಿಮ್ಮ ಉಗುರಿಗೆ ವಿನೂತನ ಚಿತ್ತಾರವನ್ನ ಬಿಡಿಸಿ. ಸ್ಟೈಲೀಶ್ ಲುಕ್ ನಿಮ್ಮದಾಗಲಿ…

LEAVE A REPLY

Please enter your comment!
Please enter your name here