ಚೆನ್ನಾವರ: ಎಸ್ಸೆಸ್ಸೆಫ್ ಧ್ವಜ ದಿನಾಚರಣೆ

0

ಪುತ್ತೂರು: ಎಸ್ಸೆಸ್ಸೆಫ್ ಧ್ವಜ ದಿನ ಕರ್ನಾಟಕ ಮುಸ್ಲಿಂ ಜಮಾಅತ್ ಎಸ್‌ವೈಎ, ಎಸ್ಸೆಸ್ಸೆಫ್ ಚೆನ್ನಾವರ ಶಾಖಾ ವತಿಯಿಂದ ಚೆನ್ನಾವರ ಮಸೀದಿ ಬಳಿ ನಡೆಯಿತು. ಎಸ್ಸೆಸ್ಸೆಫ್, ಎಸ್‌ವೈಎಸ್, ಕರ್ನಾಟಕ ಮುಸ್ಲಿಂ ಜಮಾಅತ್ ಚೆನ್ನಾವರ ಶಾಖೆಯ ಮೂರೂ ಸಂಘಟನೆಯ ಸ್ಥಾಪಕಾಧ್ಯಕ್ಷರಾಗಿದ್ದ ಮರ್‌ಹೂಂ ಅಬ್ದುಲ್ ಕರೀಂ ಹಾಜಿಯವರ ಖಬರ್ ಝಿಯಾರತ್‌ನೊಂದಿಗೆ ಚಾಲನೆ ನೀಡಲಾಯಿತು.
ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ ಧ್ವಜಾರೋಹಣ ನೆರವೇರಿಸಿದರು. ಎಸ್ಸೆಸ್ಸೆಫ್‌ನ ಹಿರೀಯ ನಾಯಕ ಹಂಝ ಮದನಿ ಮಿತ್ತೂರು, ಎಸ್‌ವೈಎಸ್ ಕೋಶಾಧಿಕಾರಿ ನಸೀರ್ ನಿಝಾಮಿ ಸಂದೇಶ ಭಾಷಣ ಮಾಡಿದರು. ರೈನ್ ಬೋ ವಿದ್ಯಾರ್ಥಿಗಳ ರ‍್ಯಾಲಿ ಹಾಗೂ ಸಿಹಿತಿಂಡಿ ವಿತರಿಸಲಾಯಿತು.

ಎಸ್‌ವೈಎಸ್ ಅಧ್ಯಕ್ಷ ಮುಹಮ್ಮದ್ ಕುಂಡಡ್ಕ, ಮುತ್ತಲಿಬ್ ಹಾಜಿ, ಅಬ್ದುಲ್ ಸತ್ತಾರ್, ಅಬ್ದುಲ್ ರಹ್ಮಾನ್ ಮುಕ್ಕೂರು, ಅಬ್ದುಲ್ಲ, ಎಸ್‌ವೈಎಸ್ ಪುತ್ತೂರು ಝೋನ್ ಕಾರ್ಯದರ್ಶಿ ಅಬ್ದುಲ್ ಅಝೀಝ್ ಚೆನ್ನಾರ್, ಎಸ್ಸೆಸ್ಸೆಫ್ ಶಾಖೆಯ ಹಿರಿಯ ನಾಯಕರಾದ ಜಮಾಲುದ್ದೀನ್ ಎ.ಪಿ, ಖಾಸಿಮ್ ಮುಕ್ಕೂರು, ಅಹ್ಮದ್ ಕುಂಡಡ್ಕ, ಸಿದ್ದೀಕ್ ಚೆನ್ನಾರ್, ಯೂಸುಫ್ ಬಿಸ್ಮಿಲ್ಲ, ಅಮೀನ್ ಮಿಸ್ಬಾಹಿ, ಎಸ್ಸೆಸ್ಸೆಫ್ ಅಧ್ಯಕ್ಷ ವಫೀಕ್ ಅಹ್ಮದ್, ಅಬ್ದುಲ್ ಜಲೀಲ್ ಮಾಸ್ತಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಹಾಫಿಳ್ ಮಶ್ಹೂದ್ ಸ್ವಾಗತಿಸಿದರು. ಹಾಫಿಳ್ ಮುಹಮ್ಮದ್ ತ್ವಾಹಿರ್ ವಂದಿಸಿದರು.

LEAVE A REPLY

Please enter your comment!
Please enter your name here