ಪುತ್ತೂರು: ಬದ್ರಿಯಾ ಜುಮ್ಮಾ ಮಸ್ಜಿದ್ ಹಾಗೂ ರಿಫಾಯಿಯ್ಯಾ ದಫ್ ಕಮಿಟಿ ಚಾಪಲ್ಲ, ಸವಣೂರು ಇದರ ಆಶ್ರಯದಲ್ಲಿ ಈ ಬಾರಿಯ ಪವಿತ್ರ ಹಜ್ ಯಾತ್ರೆಯನ್ನು ಕೈಗೊಳ್ಳಲಿರುವ ದಫ್ ಕಮಿಟಿಯ ಮಾಜಿ ಅಧ್ಯಕ್ಷರಾದ ಹಂಝ ಅತ್ತಿಕೆರೆಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಸವಣೂರು ಚಾಪಲ್ಲ ಬದ್ರಿಯಾ ಜುಮಾ ಮಸ್ಜಿದ್ ವಠಾರದದಲ್ಲಿ ನಡೆಯಿತು. ಸ್ಥಳೀಯ ಮುದರ್ರಿಸ್ ಅಶ್ರಫ್ ಬಾಖವಿ ದುವಾ ನೆರವೇರಿಸಿದರು.
ಚಾಪಲ್ಲ ಮಸೀದಿಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಮಹಮದ್ ಬಿ ಎಂ, ಮಾಜಿ ಅಧ್ಯಕ್ಷ ಉಮ್ಮರ್ ಹಾಜಿ ಅತ್ತಿಕೆರೆ, ಸದಸ್ಯ ಖಾಸಿಂ ಹಾಜಿ, ಜೊತೆ ಕಾರ್ಯದರ್ಶಿ ರಝಾಕ್ ಕೆನರಾ, ಮಾಜಿ ಸದಸ್ಯರಾದ ಮೊಹಮ್ಮದ್ ಕುರ್ತಲ, ಇಬ್ರಾಹಿಂ ಎಸ್.ಆರ್, ಸೌದಿ ಕಮಿಟಿಯ ಗೌರವಾಧ್ಯಕ್ಷ ಅಬ್ದುಲ್ ಖಾದರ್ ಸಹಲ್, ಅಲ್ನೂರ್ ಮುಸ್ಲಿಂ ಯೂತ್ ಫೆಡರೇಷನ್ ಉಪಾಧ್ಯಕ್ಷ ಬಶೀರ್ ಕಾಯರ್ಗ, ಸದಸ್ಯರಾದ ಇಕ್ಬಾಲ್ ಕೆನರಾ, ಮಜೀದ್ ಸೋಂಪಾಡಿ, ರಿಫಾಯಿಯ್ಯಾ ದಫ್ ಕಮಿಟಿಯ ಉಸ್ತಾದರಾದ ಹಂಝ ಬಡಕ್ಕೋಡಿ, ಅಧ್ಯಕ್ಷ ಮೊಹಮ್ಮದ್ ಕೆ ಎಂ, ಉಪಾಧ್ಯಕ್ಷ ರಝಾಕ್ ಚಾಪಲ್ಲ, ಖಜಾಂಜಿ ಆದಂ ಆರಿಗಮಜಲು, ಜೊತೆ ಕಾರ್ಯದರ್ಶಿ ಯಾಕೂಬ್ ಸವಣೂರು, ಫಾರೂಕ್ ಸೋಂಪಾಡಿ, ಆಸಿಫ್ ಶಾಂತಿನಗರ ಉಪಸ್ಥಿತರಿದ್ದರು. ಅಶ್ರಫ್ ಬಿ.ಎಂ ಸ್ವಾಗತಿಸಿದರು. ಅಶ್ರಫ್ ಎಂ.ಕೆ ವಂದಿಸಿದರು.