ಕಾಡೂರು ತರವಾಡಿನಲ್ಲಿ ವಾರ್ಷಿಕ ತಂಬಿಲ,ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ

0

ಪುತ್ತೂರು : ತುಳುನಾಡಿನ ದೈವಗಳನ್ನು ಶ್ರದ್ಧಾಭಕ್ತಿಯಿಂದ ಆರಾಧನೆ ಮಾಡಿದರೆ ನಮ್ಮನ್ನು ಯಾವತ್ತು ಕೈ ಬಿಡುವುದಿಲ್ಲ. ಕೇವಲ ಹಣದ ಹಿಂದೆ ಹೋಗದೆ,ತರವಾಡಿನಲ್ಲಿ ನಡೆಯುವ ಸಂಕ್ರಮಣ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಬಂದು ಶ್ರದ್ಧೆ ,ನಿಷ್ಠೆಯಿಂದ ಸೇವೆ ಮಾಡಿದ್ದಲ್ಲಿ ಅವರ ಕಷ್ಟಗಳು ದೂರವಾಗಿ ಕುಟುಂಬದಲ್ಲಿ ಸುಖ ನೆಮ್ಮದಿ ಸಿಗುತ್ತದೆ ಎಂದು ಅರುವಾರು ಗುತ್ತಿನ ಆಡಳಿತದಾರ ,ವಕೀಲ ಮನೋಹರ ಎ ನುಡಿದರು.

ಅವರು ಎ. 30ರಂದು ಪೈವಳಿಕೆ,ಕಾಡೂರು ತರವಾಡಿನಲ್ಲಿ ನಡೆದ ವಾರ್ಷಿಕ ತಂಬಿಲದ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸಕರಾಗಿ ಮಾತನಾಡಿದರು. ಪ್ರತಿಯೊಬ್ಬ ಕುಟುಂಬದ ಸದಸ್ಯರು ತರವಾಡಿನ ಮೇಲೆ ಗೌರವ ನಂಬಿಕೆ ಬೆಳೆಸಿದಾಗ ನಮ್ಮೊಳಗಿನ ಬಾಂಧವ್ಯ,ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಮನೋಹರ ಎ
ರವರನ್ನು ಗೌರವಹಿಸಲಾಯಿತು.


ಕಾಡೂರು ತರವಾಡಿನ ಟ್ರಸ್ಟ್ ನ ಅಧ್ಯಕ್ಷ ಗಂಗಾಧರ ಕಲಾಯಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಶ್ರೀಧರ ಕುಲಾಲ ಕೋಡಿ,ಜತೆ ಕಾರ್ಯದರ್ಶಿ ಕಿಶೋರ್ ಮಿಯಾಪದವು,ಕೋಶಾಧಿಕಾರಿ ಗಣೇಶ್ ದೇಲಂತಬೆಟ್ಟು,ಟ್ರಸ್ಟಿ ಶ್ರೀನಿವಾಸ ಬಾರ್ದೆ ಉಪಸ್ಥಿತರಿದ್ದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ವಕೀಲ ಮಹೇಶ್ ಕೆ ಸವಣೂರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here