ಪುಣ್ಚಪ್ಪಾಡಿ: ಧರ್ಮ ಶಿಕ್ಷಣ ಗ್ರಾಮ ಸಮಿತಿಗಳ ರಚನಾ ಸಭೆ 

0

ಸವಣೂರು: ಹಿಂದೂ ಧಾರ್ಮಿಕ ಶಿಕ್ಷಣ ತರಗತಿಗಳನ್ನು ನಡೆಸುವ ಮಹತ್ವಾಕಾಂಕ್ಷಿ ಯೋಜನೆಯ ಅಂಗವಾಗಿ ವಿವಿಧ ಕಡೆಗಳಲ್ಲಿ ಗ್ರಾಮ ಸಮಿತಿಗಳನ್ನು ರಚಿಸಿ, ಶ್ರದ್ಧಾ ಕೇಂದ್ರಗಳ ಸಹಯೋಗದೊಂದಿಗೆ ಗ್ರಾಮ ಗ್ರಾಮಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ ಎಂದು ಪುತ್ತೂರು ತಾಲೂಕು ಹಿಂದು ಧರ್ಮ ಶಿಕ್ಷಣ ಸಮಿತಿ ಅಧ್ಯಕ್ಷ ದಂಬೆಕ್ಕಾನ ಸದಾಶಿವ ರೈ ಹೇಳಿದರು.

ಅವರು ಪುಣ್ಚಪ್ಪಾಡಿ ಗ್ರಾಮದ ನೇರೋಲ್ತಡ್ಕ ಗೌರಿಸದನದಲ್ಲಿ ನಡೆದ ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ ಗ್ರಾಮ ಸಮಿತಿ ರಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೇ.5ರಂದು ಹಿಂದೂ ಧರ್ಮ ಶಿಕ್ಷಣ ತರಗತಿಗೆ ಶೃಂಗೇರಿಯಲ್ಲಿ ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ಸನ್ನಿಧಾನಂಗಳು ಅವರು ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರತೀ ಗ್ರಾಮಗಳಿಂದ ಜನರು ಬರಬೇಕು ಎಂದರು.

ಸಭೆಯಲ್ಲಿ ಸವಣೂರು,ಪುಣ್ಚಪ್ಪಾಡಿ, ಪಾಲ್ತಾಡಿ ಗ್ರಾಮ ಸಮಿತಿಗಳನ್ನು ರಚಿಸಲಾಯಿತು. ವೇದಿಕೆಯಲ್ಲಿ ನಾಗರಾಜ ನಿಡ್ವಣ್ಣಾಯ, ಗಿರಿಶಂಕರ ಸುಲಾಯ ಉಪಸ್ಥಿತರಿದ್ದರು.

ಸಭೆಯಲ್ಲಿ ಶೀನಪ್ಪ ಶೆಟ್ಟಿ ನೆಕ್ರಾಜೆ, ಮಹೇಶ್ ಕೆ.ಸವಣೂರು, ರಾಜೇಶ್ವರಿ ಕನ್ಯಾಮಂಗಲ,ದಯಾನಂದ ಮೆದು,ಶ್ರೀಧರ ಇಡ್ಯಾಡಿ, ರಕ್ಷಿತ್ ನೂಜಾಜೆ,ಯತೀಶ್ ಪಲ್ಲತಡ್ಕ,ಪ್ರವೀಣ್ ಕುಮಾರ್ ಪಾಲ್ತಾಡಿ, ಸುಬ್ರಾಯ ಗೌಡ ಪಾಲ್ತಾಡಿ, ಸುಬ್ರಹ್ಮಣ್ಯ ಪಾರ್ಲ,ಜಯಪ್ರಶಾಂತ್ ಪಲ್ಲತಡ್ಕ,ಪ್ರಕಾಶ್ ರೈ ಸಾರಕರೆ,ಸೂರಪ್ಪ ಗೌಡ ಬದಿಯಡ್ಕ, ಧನರಾಜ್ ಓಡಂತರ್ಯ,ಪದ್ಮಪ್ರಸಾದ್ ರೈ ಕಲಾಯಿ,ಚೇತನ್ ಕುಮಾರ್ ಕೋಡಿಬೈಲು, ಹರಿಪ್ರಸಾದ್ ನೆಕ್ರಾಜೆ, ಪ್ರಶಾಂತ್ ಗುಂಡ್ಯಡ್ಕ,ಹರಿಪ್ರಸಾದ್ ಬಿ.,ಗಂಗಾಧರ ಪೆರಿಯಡ್ಕ, ರಾಜೇಶ್ ಇಡ್ಯಾಡಿ, ಜಗದೀಶ್ ಕೆ.,ರಾಜೇಶ್ ರೈ ಮೊಗರು,ಆಶಾ ರೈ ಕಲಾಯಿ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here