ಪುತ್ತೂರು: ನೆಹರುನಗರದಲ್ಲಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಏ.29ರಂದು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ, ತಮ್ಮ ಸ್ಕೌಟ್ ಗೈಡ್ ಶಿಕ್ಷಕರ ಸಹಕಾರದೊಂದಿಗೆ, ಇತ್ತೀಚೆಗೆ ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿ ಮತ್ತು ಹತ್ಯೆಯನ್ನು ಖಂಡಿಸಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ, 10ನೇ ತರಗತಿಯ ವಿದ್ಯಾರ್ಥಿನಿ ಗೈಡ್ ಆಪ್ತ ಚಂದ್ರಮತಿ ಮುಳಿಯ, ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಉಗ್ರರು ಅಮಾಯಕ ಪ್ರವಾಸಿಗರ ಮೇಲೆ ನಡೆಸಿದ ಕ್ರೂರ ಕೃತ್ಯದ ಕುರಿತು ಮಾತನಾಡಿದರು. ನಂತರ ಸ್ಕೌಟ್/ಗೈಡ್ ವಿದ್ಯಾರ್ಥಿಗಳು ಮೌನ ಪ್ರಾರ್ಥನೆಯನ್ನು ಸಲ್ಲಿಸುವುದರ ಮೂಲಕ ಹುತಾತ್ಮರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರಾದ ವಿದ್ಯಾ ಸರಸ್ವತಿ, ವೀಣಾ, ಮಮತಾ, ಶ್ಯಾಮಲ, ಅಪೂರ್ವ ಹಾಗೂ ಲೇಡಿ ಸ್ಕೌಟ್ ಮಾಸ್ಟರ್ ಪೂರ್ಣಿಮಾ, ಗೈಡ್ ಕ್ಯಾಪ್ಟನ್ ಲತಾ, ಫ್ಲಾಕ್ ಲೀಡರ್ ಸುನಯನ ಮತ್ತು ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿಯಾದ ಗೈಡ್ ಕ್ಯಾಪ್ಟನ್ ಪ್ರಫುಲ್ಲ. ಕೆ ಸ್ವಾಗತಿಸಿ, ನಿರೂಪಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.10ನೇ ತರಗತಿಯ ವಿದ್ಯಾರ್ಥಿ ಸ್ಕೌಟ್ ಅಭಯ್ ಕೃಷ್ಣ ವಂದಿಸಿದರು.