ಬಡಗನ್ನೂರು : ಇತಿಹಾಸ ಪ್ರಸಿದ್ಧ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮುಂದಿನ ಮೂರು ವರ್ಷಗಳ ಅವಧಿಗೆ ಶಾಸಕ ಅಶೋಕ್ ಕುಮಾರ್ ರೈ ಶಿಫಾರಸ್ಸಿನಂತೆ ನೂತನ ಸದಸ್ಯರನ್ನು ನೇಮಕಗೊಳಿಸಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕಾರ್ಯದರ್ಶಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಆದೇಶಿಸಿದ್ದಾರೆ.
ಸಿ ಗ್ರೇಡ್‌ಗೆ ಸೇರಿದ ದೇವಸ್ಥಾನದಲ್ಲಿ ಅರ್ಚಕ ಸ್ಥಾನದಿಂದ ಮಹಾಲಿಂಗ ಭಟ್ ಬಿ, ಪ.ಜಾತಿ, ಪ,ಪಂಗಡದಿಂದ ಗೋಪಾಲ ನಾಯ್ಕ ದೊಡ್ಡಡ್ಕ, ಮಹಿಳಾ ಸ್ಥಾನದಿಂದ ಶ್ರೀಮತಿ ಕನ್ನಡ್ಕ, ಶಂಕರಿ ನಾರಾಯಣ ಪಾಟಾಳಿ ಪಟ್ಸೆ, ಸಾಮಾನ್ಯ ಸ್ಥಾನದಿಂದ ಉದಯ ಕುಮಾರ್ ಪಡುಮಲೆ, ಶ್ರೀನಿವಾಸ ಗೌಡ ಕನ್ನಯ ಜನಾರ್ದನ ಪೂಜಾರಿ ಪಧಡ್ಕ, ಸತೀಶ್ ರೈ ಕಟ್ಟಾವು, ಹಾಗೂ ಪುರಂದರ ರೈ ಕುದ್ಕಾಡಿ ರವರ ನೇಮಕ ಮಾಡಲಾಗಿದೆ.