ರಾಮಕುಂಜ: ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ನಡೆದ 2024-25ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದ್ದು ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ.99.22 ತೇರ್ಗಡೆ ಫಲಿತಾಂಶ ಬಂದಿದೆ.
ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 145 ವಿದ್ಯಾರ್ಥಿಗಳಲ್ಲಿ 144 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. 45 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 96 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲ್ಲಿ ತೇರ್ಗಡೆಯಾಗಿದ್ದಾರೆ. ಓರ್ವ ವಿದ್ಯಾರ್ಥಿ ಒಂದು ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದಾರೆ. ಧನುಶ್ ಪಿ.615, ಪ್ರತೀಕ್ಷಾ ಕೆ.614, ರಶ್ಮಿ ಕೆ. 603, ಶಾರ್ವರಿ ರೈ ಎಂ. 603, ಲೋಚನ್ ವಿ.ಎ.602, ಜಿತೇಶ್ ಎಸ್ 602, ಹೇಮಂತ್ ಡಿ.601, ಕೆ.ವಿನಯ್ 600, ಅಕ್ಷಯ್ ಜಿ. 599, ಈಶಾನ್ ಕೆ. 599, ವರ್ಷ ಪಿ.ಎನ್. 598, ಪ್ರೀತಿ ಆರ್.ಎಸ್. 598, ಅಭಿನವ್ ಮಂಜುನಾಥ್ ಸೆಟ್ಟರ್ 594, ಚರಣ್ ಎ.591, ಪ್ರೀತಮ್ ಸಂಜೀವ್ ಮೊರಬಾದ್ 589, ರಕ್ಷಾ 588, ಆರ್ಯ ಬಿ.ಟಿ. 587, ರಾಕೇಶ್ ನಂದನ್ ಬಿ. 583, ನಿಶಾಂತ್ 582, ಪ್ರೀತಮ್ ಎಸ್ ಆರ್ 582, ಹರ್ಷಿತ್ ಕೆ.ಎಸ್.580, ವಿನುತ್ ಎಂ.570, ಸ್ಪೂರ್ತಿ ಕುಪ್ಲಾಜೆ 570, ಚಿರಾಗ್ ಪಿ ಗೌಡ 566, ಸುಜನ್ ಸಿ.566, ವರ್ಷಾ ಕೆ 565, ಸುಜನ್ ಆರ್ 564, ಆಕಾಂಕ್ಷ್ ಬಿ ವೈ 562, ಅಮೃತ್ ಜಿ 562, ರಶ್ಮಿ 561, ಮಿತಾಶ್ರೀ 560, ನಿಖಿಲ್ ಡಿ. 558, ದೀಪಾನಿಧಿ ಎಸ್ 557, ಸುಹಾಸ್ ರಾಮ್ ಎಂ. 554, ಹೇಮಂತ್ 554, ಧನುಶ್ ಆರ್.ಬಿ 553, ರಿತ್ವಿಕ್ ಎಂ 551, ಭರತೇಶ್ ಗೌಡ ಎಂ.ಎಸ್.549, ಬಿ.ಧನ್ಯಶ್ರೀ 545, ಸಮೃದ್ ಎ.ಎಲ್.540, ಹರ್ಷಿತ್ ಎಚ್.ಎನ್ 540, ನೂತನ್ ಎಚ್ 539, ಧನುಷ್ ಎಸ್ 538, ಎಚ್.ಎ ಮೊಹಮದ್ ಅಲ್ಫಾನ್ 537, ಶ್ರೇಯಾ 536 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.