ಕಡಬ: ಇಲ್ಲಿನ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.100 ಫಲಿತಾಂಶ ಲಭಿಸಿದೆ. ಶಾಲೆಯಿಂದ ಒಟ್ಟು 42 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 10 ಮಂದಿ ಡಿಸ್ಟಿಂಕ್ಷನ್, 27 ಮಂದಿ ಪ್ರಥಮ ಶ್ರೇಣಿ, 5 ದ್ವಿತೀಯ ಶ್ರೇಣಿಯೊಂದಿಗೆ ಉತ್ತೀರ್ಣಗೊಂಡು ಶಾಲಾ ಫಲಿತಾಂಶ ಶೇ 100% ದಾಖಲಾಗಿದೆ.
ಬಳ್ಪ ಗ್ರಾಮದ ಸಂಪ್ಯಾಡಿ ಮನೆ ನಾರಯಣ ಮಡಿವಾಳ ಹಾಗೂ ರೇಖಾ ದಂಪತಿಗಳ ಪುತ್ರಿ ವರ್ಷಾ ಎಸ್ 601(96.16%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ, ಐವತ್ತೊಕ್ಲು ಗ್ರಾಮದ ಬೊಳ್ಳಾಜೆ ಮನೆ ಸತೀಶ್ ಹಾಗೂ ಕಲಾವತಿ ಬಿ ದಂಪತಿಗಳ ಪುತ್ರ ಮೋಕ್ಷಿತ್ ಬಿ 589 (94.24%) ಅಂಕ ಪಡೆದು ವಿಶಿಷ್ಟ ಶ್ರೇಣಿಯೊಂದಿಗೆ ಶಾಲೆಗೆ ದ್ವಿತೀಯ ಸ್ಥಾನಿಯಾಗಿದ್ದು, ಯೇನೆಕಲ್ಲು ಗ್ರಾಮದ ಪರಮಲೆ ಮನೆ ರಾಧಾಕೃಷ್ಣ ಹಾಗೂ ಲೀಲಾವತಿ ದಂಪತಿಗಳ ಪುತ್ರ ಭವಿಶ್ ಪಿ ಆರ್ 578 (92.48%) ಮತ್ತು ಬಳ್ಪ ಗ್ರಾಮದ ನೀರಜರಿ ಮನೆ ಮೇದಪ್ಪ ಗೌಡ ಹಾಗೂ ಲಿವ್ಯಕ್ಷಿ ದಂಪತಿಗಳ ಪುತ್ರಿ ಯಶ್ವಿತಾ ತೃತೀಯ ಸ್ಥಾನಿಯಾಗಿರುತ್ತಾರೆ. ರೆಂಜಿಲಾಡಿ ಗ್ರಾಮದ ಪಾಡ್ಲಮನೆ ಟಿ ಲೋಕೇಶ್ ಹಾಗೂ ವಿನಯಕುಮಾರಿ ದಂಪತಿಗಳ ಪುತ್ರಿ ಜಶ್ಮಿ 541(86.56%), ಕೊಣಾಜೆ ಗ್ರಾಮದ ಮನೆಜಾಲು ಮನೆಯ ಯಶೋಧರ ಎಂ ಹಾಗೂ ಉಮಾವತಿ ದಂಪತಿಗಳ ಪುತ್ರಿ ಲಾವಣ್ಯ 559(89.44%), ಬಲ್ಯಗ್ರಾಮದ ಗುತ್ತುಮನೆ ಶಿವರಾಮ ರೈ ಹಾಗೂ ಲಲಿತಾ ಎಸ್ ರೈ ದಂಪತಿಗಳ ಪುತ್ರ ಪ್ರತೀಕ್ ಜಿ 559(89.44%), ಇಚಿಲಂಪಾಡಿ ಗ್ರಾಮದ ಒಡ್ಯತ್ತಡ್ಕಮನೆ ಹರಿಶ್ಚಂದ್ರ ಗೌಡ ಹಾಗೂ ವನಿತಾ ದಂಪತಿಗಳ ಪುತ್ರಿ ರಶ್ಮಿ 539(86.24%), ಕಡಬ ಗ್ರಾಮದ ಹೊಯಿಗೆಕೆರೆ ಮನೆ ಕೃಷ್ಣಯ್ಯ ಆಚಾರ್ಯ ಹಾಗೂ ಶೋಭಾ ದಂಪತಿಗಳ ಪುತ್ರಿ ವಂದನಾ ಕೆ 544(87.04%), ಬಂಟ್ರಗ್ರಾಮದ ಕಾಯಂದೂರು ಮನೆ ಮೋನಪ್ಪ ಗೌಡ ಹಾಗೂ ರುಕ್ಮಿಣಿ ದಂಪತಿಗಳ ಪುತ್ರಿ ಯಶಶ್ವಿನಿ 532 (85.12%) ಅಂಕಗಳನ್ನು ಪಡೆದಿರುತ್ತಾರೆ. ಒಟ್ಟು 42 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 10 ಮಂದಿ ವಿದ್ಯಾರ್ಥಿಗಳು ಅತ್ಯನ್ನುತ ಶ್ರೇಣಿ, 27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 05 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ್ದಾರೆ.