ಶ್ರೀಶಾ ಆರ್.ಎಸ್. 604 ಅಂಕ ಪಡೆದು ಶಾಲೆಗೆ ಪ್ರಥಮ
ಪುತ್ತೂರು: 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರಲ್ಲಿ ದರ್ಬೆ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಗೆ ಶೇ.83 ಫಲಿತಾಂಶ ಲಭಿಸಿದೆ.
191 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 16 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ, 98 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 39 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಕುಮಾರಿ ಶ್ರೀಶಾ ಆರ್.ಎಸ್. 604 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ. ವಿದ್ಯಾರ್ಥಿಗಳಾದ ಧ್ಯಾನ್ ಬಿ (597), ಅನಿಶಾ ಸಿಸಿಲಿಯ ಮಿನೇಜಸ್ (596), ಆಯುಷತ್ ತಸ್ರಿನಾ (590), ಜಸ್ಮಿ ಎಂ. (587), ಜಮೀಲ ಆಯಿಸಾತುಲ್ ಆನ್ಪಾ (572), ಲಕ್ಷಿತ್ ಬಿ. ಆರ್ (570), ಪ್ರತಿಕ್ಷಾ (567), ಜೆಡನ್ ಕುಟಿನ್ನ (561), ಮೊಹಮ್ಮದ್ ಶಾಝಿಲ್ (550), ಶ್ರಾವ್ಯ ವೈ (548), ಆದಿಶ್ ಕೆ. (542), ಫಾತಿಮಾತ್ ಝುಲ್ಪ (541), ಮನ್ವಿತ್ ಜೈಸನ್ ನೊರೊನ್ಹಾ (539), ಶ್ರೇಯಸ್ ಶ್ರೀಕಾಂತ್ ತೋರತ್ (539), ಕ್ಲಿಪ್ಸನ್ ಮೊರಾಸ್ (536) ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.