ಉಪ್ಪಿನಂಗಡಿ : ಮಾತೃ ಭಾಷಾ ಶಿಕ್ಷಣದ ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀರಾಮ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.90 ಫಲಿತಾಂಶ ದಾಖಲಾಗಿದ್ದು, ಪರೀಕ್ಷೆ ಬರೆದ 50 ವಿದ್ಯಾರ್ಥಿಗಳ ಪೈಕಿ 45 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಶಾಲೆಯ ಕಾರ್ತಿಕ್ (೬೧೨ ಅಂಕ ) , ಶಿವಾನಿ (೬೦೪) ಅಂಕ ಗಳಿಸಿ ಗಮನ ಸೆಳೆದಿದ್ದರೆ, ಒಟ್ಟು ೧೨ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ , ೨೨ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ೬ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ, ೫ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.