ವಿಟ್ಲ: ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶ್ರೀ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ.ಯಲ್ಲಿ 100% ಫಲಿತಾಂಶ ಲಭಿಸಿದೆ.
ಒಟ್ಟು 33 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 15 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಶರಣ್ಯ ಒ. ಇವರು 595 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಉಳಿದಂತೆ ಶಮಾ.ಕೆ 593, ವಿಶುದ್ಧಲಕ್ಷ್ಮೀ.ಎಸ್ 584, ಹೃಶಿಕಾ 574, ತೃಪ್ತಿ ಕಣಿಯೂರು 564, ಲಕ್ಷ್ಮೀಪ್ರಿಯ .ಎಸ್.ಬಿ 564, ಪ್ರಾಪ್ತಿ 562, ಶ್ರಾವ್ಯ ಎಸ್ ರೈ 559, ಮಂಜುಶ್ರೀ .ಎಸ್.ಸುವರ್ಣ 552, ಸೌಜನ್ಯ ಶೀಲ 543, ದಿಶಾ 540, ಬಿ.ಆರ್.ಸುಷ್ಮಾ 531, ವಂಶಿ ಜಿ. 517 ಅಂಕಗಳನ್ನು ಪಡೆದುಕೊಡಿದ್ದಾರೆ.