ಬೆಟ್ಟಂಪಾಡಿ: ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ 39 ವಿದ್ಯಾರ್ಥಿಗಳು ಹಾಜರಾಗಿದ್ದು, 38 ವಿದ್ಯಾರ್ಥಿಗಳು ಉತ್ತೀರ್ಣರಾಗಿ, 97.44% ಫಲಿತಾಂಶ ಲಭಿಸಿದೆ. ಈ ಪೈಕಿ 07 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ,02 ವಿದ್ಯಾರ್ಥಿಗಳು 500 ಕ್ಕಿಂತ ಹೆಚ್ಚು ಅಂಕ ಪಡೆದು A ಶ್ರೇಣಿಯಲ್ಲಿ, 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ,06 ವಿದ್ಯಾರ್ಥಿಗಳ ದ್ವಿತೀಯ ಶ್ರೇಣಿಯನ್ನು ಪಡೆದು ತೇರ್ಗಡೆಯಾಗಿರುತ್ತಾರೆ.A ಗ್ರೇಡ್ ಗುಣಮಟ್ಟದ ಫಲಿತಾಂಶವೂ ಶಾಲೆಗೆ ಲಭಿಸಿರುತ್ತದೆ.
ಯತಿನ್ 593 (94.88% A+ ಶ್ರೇಣಿ ) ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ (ಮಾಯಿಲಕೋಟೆಯ ದಿ.ಎಂ ಚೋಮಣ್ಣ ನಾಯ್ಕ ಮತ್ತು ಪಾರ್ವತಿ ಇವರ ಪುತ್ರ), ಜ್ಯೋತ್ಸ್ನಾ 585 (93.6% A+ಶ್ರೇಣಿ)ಅಂಕಗಳನ್ನು ಪಡೆದು ಶಾಲೆಗೆ ದ್ವಿತೀಯ ಸ್ಥಾನ(ಚೂರಿಪದವಿನ ಮಂಜುನಾಥ ಮತ್ತು ಮಂಜುಳಾ ಇವರ ಪುತ್ರಿ), ಮಹಮ್ಮದ್ ನವಾಜ್ 573 (91.68% A+) ಅಂಕಗಳೊಂದಿಗೆ ಶಾಲೆಗೆ ತೃತೀಯ ಸ್ಥಾನ ( ದಿ. ಮಹಮ್ಮದ್ ಶರೀಫ್ ಮತ್ತು ದಿ.ದಿಲ್ ಶಾಬಾನು ಇವರ ಪುತ್ರ ), ನವ್ಯಶ್ರೀ 553 (88.48%) ಕಕ್ಕೂರಿನ ಲಕ್ಷ್ಮೀಶ್ ರೈ ಮತ್ತು ಜನಿತಾ ಇವರ ಪುತ್ರಿ, ತನ್ವಿತ್ ಗೌಡ 552 (88.32%) ನಾಕಪ್ಪಾಡಿಯ ದೇವಪ್ಪಗೌಡ ಎನ್. ಮತ್ತು ಮೀನಾಕ್ಷಿ ಎಸ್ ಇವರ ಪುತ್ರ, ಭವಿತಾ 547 (87.52%) ಕಂಪತ್ತಡ್ಕದ ಕೃಷ್ಣಪ್ಪ ಪೂಜಾರಿ ಮತ್ತು ಯಶೋದ ಇವರ ಪುತ್ರಿ, ಬೀಬಿ ಮೈಮುನಾ 534 (85.44%) ಕೊನಡ್ಕದ ಅಬ್ದುಲ್ ಗನಿ ಮತ್ತು ಫಾತಿಮತ್ ಝೋಹರಾ ಇವರ ಪುತ್ರಿ, ಮೊಹಮ್ಮದ್ ಮಿರ್ಶಾದ್ 529 (84.64%) ಕೀಲಂಪಾಡಿಯ ಅಲಿ.ಬಿ ಮತ್ತು ಮುಮ್ತಾಜ್ ಇವರ ಪುತ್ರ, ಮಶ್ ಹೂದ್ ಜುನೈದ್ 525 (84%) ಪೆರಲ್ತಡ್ಕದ ಮೊಹಮ್ಮದ್ ಮತ್ತು ಆಯಿಷಾ ಇವರಪುತ್ರ, ಉತ್ತಮ ಅಂಕಗಳೊಂದಿಗೆ ಸಾಧನೆ ಮಾಡಿರುತ್ತಾರೆ ಎಂದು ಮುಖ್ಯ ಗುರು ಪುಷ್ಪಾವತಿ ಎಸ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.