ಪುತ್ತೂರು : ಪೌರಕಾರ್ಮಿಕರ ಮಹಾ ಸಂಘದ ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ ವಿಭಾಗೀಯ ಅಧ್ಯಕ್ಷರಾಗಿ ಸಂಘದ ಕರಾವಳಿ ವಿಭಾಗ ಸಂಚಾಲಕ ಪುತ್ತೂರು ನಗರಸಭೆ ಪೌರಕಾರ್ಮಿಕ ರಾಧಾಕೃಷ್ಣ ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ.
ದಾವಣಗೆರೆ ಲೀಲಾವತಿ ಪ್ಯಾಲೇಸ್ ಸಭಾಂಗಣದಲ್ಲಿ ಮೇ.2ರಂದು ನಡೆದ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನಗರಸಭೆ ಪುರಸಭೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಕ್ಲೀನರ್, ಲೋಡರ್, ಹೆಲ್ಪರ್, ವಾಹನ, ಒಳಚರಂಡಿ ಸಹಾಯಕರ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ಮೈಸೂರ್ ನಾರಾಯಣರವರು ಘೋಷಣೆ ಮಾಡಿದರು. ಸಭೆಯಲ್ಲಿ ಕಾರ್ಮಿಕ ಜೊತೆ ನೇರ ಸಂವಾದವನ್ನು ನಡೆಸಿ ಕಾರ್ಮಿಕರ ಸಮಸ್ಯೆಗಳು ಮತ್ತು ಮುಂದಿನ ದಿನದಲ್ಲಿ ನೇರ ಪಾವತಿ ಮುಖಾಂತರವಾಗಿ ಹಂತ ಹಂತವಾಗಿ ಖಾಯಂಗೊಳ್ಳುವ ವಿಚಾರವನ್ನು ಚರ್ಚಿಸಲಾಯಿತು.
ಸಭೆಯಲ್ಲಿ ಕರ್ನಾಟಕ ರಾಜ್ಯ ಮಹಾ ಸಂಘದ ಕಾರ್ಯಾಧ್ಯಕ್ಷ ಎಲ್.ಎಂ. ಹನುಮಂತಪ್ಪ, ದಾವಣಗೆರೆ ಮಹಾನಗರ ಪಾಲಿಕೆಯ ನಾಮನಿರ್ದೇಶಿತದ ಸದಸ್ಯ ಸಾಗರ್, ಪೌರಕಾರ್ಮಿಕರ ಮಹಾಸಂಘದ ಕಾರ್ಮಿಕರ ಸಂಘಟನೆಯ ಯತಿರಾಜ್, ನಾಗರಾಜ್, ಚಕ್ರವರ್ತಿ, ದಾಸ್ ಕಾರ್ಯದರ್ಶಿಗಳು, ಟಿ ಸಿ ಬಸವರಾಜ್, ವಾಹನ ಚಾಲಕರ ಸಂಘದ ರಾಜ ಕಾರ್ಯಧ್ಯಕ್ಷ ಮದ್ದೂರು ಶ್ರೀನಿವಾಸ್, ದಾವಣಗೆರೆ ಕಾರ್ಮಿಕ ಸಂಘಟನೆಯ ಹುಲಿಗೇಶ್ ಎಚ್, ಸುರೇಶ್ ಬಿ ಪಿ, ಉಮೇಶ್ ಎಂ, ರವಿವರ್ಧನ್, ಶಿವರಾಜ್ ಅದಪುರ್, ಚೇತನ್ ಕುಮಾರ್, ಪರಶುರಾಮ್. ಶಿವುಕುಮಾರ್, ಮುತ್ತುರಮ್ಮ, ರೇಣುಕಮ್ಮ, ಶಿವಳ್ಳಿ ಕಾಂತರಾಜ್, ಮಂಜುನಾಥ್, ಮಹಾಂತೇಶ್, ಬಸವರಾಜ್, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದಂತಹ ಕಾರ್ಮಿಕ ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು. ಇದೇ ಸಂದಭಘ ಮಹಾ ಸಂಘದ ಅಧ್ಯಕ್ಷರು ರಾಧಾಕೃಷ್ಣ ಪೂಜಾರಿ ಅವರನ್ನು ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ ಜಿಲ್ಲೆಗೆ ವಿಭಾಗೀಯ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದ್ದಾರೆ.