ಪುತ್ತೂರು: ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯ ಅಂಬ್ರೋಸ್ ಎಂ ಸಿ ರವರಿಗೆ ಅವರು ಮಂಡಿಸಿದ A critical Analysis of Displacement Space and Identity in The Name Sake by Jhumpa Lahiri, The Immigrant by Manju Kapur and A Fine Balance by Rohinton Mistry ಎಂಬ ಶೀರ್ಷಿಕೆಯ ಮಹಾಪ್ರಬಂದಕ್ಕೆ ಪಿ.ಎಚ್.ಡಿ ಪದವಿ ನೀಡಿದೆ.
ಸಂಶೋಧನಾ ಪ್ರಾಧ್ಯಾಪಕ ಡಾ.ಎ ಲೂರ್ದುಸಾಮಿ ಮಾರ್ಗದರ್ಶನ ನೀಡಿದ್ದರು. ಪ್ರಸ್ತುತ ಅಂಬ್ರೋಸ್ ಎಂ ಸಿ ರವರು ಮಂಗಳೂರು ಬಲ್ಮಠದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕ ಹಾಗೂ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅಂಬ್ರೋಸ್ ಎಂ.ಸಿ, ಪತ್ನಿ ಅನಿತಾ, ಪುತ್ರರಾದ ಮೆರ್ವಿನ್ ಜೋಸೆಫ್ ಮತ್ತು ಬೆವನ್ ಮ್ಯಾಥ್ಯೂರೊಂದಿಗೆ ಸೈಂಟ್ ಆಂಟೋನಿ ವಿಲ್ಲಾ, ಲಕ್ಷ್ಮಿಪ್ರಸನ್ನ ಲೇಔಟ್ ಮರೀಲು ಇಲ್ಲಿ ವಾಸಿಸುತ್ತಿದ್ದಾರೆ.