ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಸಹಶಿಕ್ಷಕರಿಗೆ ಉಪನ್ಯಾಸಕ ಹುದ್ದೆಗೆ ಭಡ್ತಿಗೆ ಜೇಷ್ಠತಾ ಪಟ್ಟಿಯನ್ನು ತಯಾರಿಸಲು ಕರಡು ಪಟ್ಟಿ ಪ್ರಕಟ

0

ಪುತ್ತೂರು: ಪದವಿ ಪೂರ್ವ ಕಾಲೇಜಿಗೆ ಉಪನ್ಯಾಸಕರಾಗಿ ಭಡ್ತಿ ನೀಡುವ ನಿಟ್ಟಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಸಹಶಿಕ್ಷಕರ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿ ತಯಾರಿಸಲು ಇಲಾಖಾ ತಂತ್ರಾಂಶದಲ್ಲಿ ಕರಡು ಪಟ್ಟಿಗಳನ್ನು ಪ್ರಕಟಿಸಲಾಗಿದೆ ಮತ್ತು ಕಚೇರಿ ವ್ಯಾಟ್ಸಪ್ ಗುಂಪುಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.


ಸದರಿ ಪಟ್ಟಿಗಳನ್ನು ತಾಲೂಕಿನ ಎಲ್ಲಾ ಸ್ನಾತಕೋತ್ತರ ಪದವಿ ಪಡೆದಿರುವ ಪ್ರೌಢಶಾಲಾ ಶಿಕ್ಷಕರು ಪರಿಶೀಲಿಸಿ, ತಪ್ಪುಗಳು ಇದ್ದಲ್ಲಿ, ಪೂರಕ ದಾಖಲೆಗಳು ಮತ್ತು ಮುಖ್ಯ ಶಿಕ್ಷಕರ ದೃಡೀಕರಣದ ಸಹಿತ ನಿಗದಿತ ನಮೂನೆಯಲ್ಲಿ ಹಾರ್ಡ್ ಪ್ರತಿ ಮತ್ತು ಸಾಫ್ಟ್ ಪ್ರತಿಗಳನ್ನು ಮೇ. 8 ರ ಸಂಜೆ 5.00 ಗಂಟೆಯ ಒಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತಲುಪಿಸುವುದು. ನಂತರ ಬರುವ ಯಾವುದೇ ಮನವಿಗಳನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here