ಬಜರಂಗದಳ ಮುಖಂಡ ಭರತ್ ಕುಮ್ಡೇಲುಗೆ ಕೊಲೆ ಬೆದರಿಕೆ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ವೈರಲ್!

0

ಪುತ್ತೂರು: ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಬಂಟ್ವಾಳ ತಾಲೂಕಿನ ಕಾರಿಂಜ ನಿವಾಸಿ ಸುಹಾಸ್‌ ಶೆಟ್ಟಿ(31ವ) ಅವರನ್ನು ಮೇ.1ರಂದು ಮಂಗಳೂರಿ‌ನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆಯ ಬೆನ್ನಲ್ಲಿಯೇ ಮತ್ತೊಬ್ಬ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಜೀವ ಬೆದರಿಕೆ ಹಾಕಲಾದ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಬಜರಂಗದಳದ ಮುಖಂಡ ಭರತ್ ಕುಮ್ಡೇಲು ಎಂಬವರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮೂಲಕ ಜೀವ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.


ಮೇ 5 ರಂದು ರಾತ್ರಿ 9:30ಕ್ಕೆ ನಿನ್ನ ಸ್ಥಳದಲ್ಲೇ ಬಂದು ಕೊಲೆ ಮಾಡುತ್ತೇವೆ ಎಂದು ಜೀವ ಬೆದರಿಕೆವುಳ್ಳ ಬರಹ ಹಾಕಿ ಪೋಸ್ಟ್‌ ಮಾಡಲಾಗಿದ್ದು ಸುಹಾಸ್ ಶೆಟ್ಟಿ ಫೋಟೋಗೆ ರೈಟ್ ಮಾರ್ಕ್ ಹಾಕಿ ಪೋಸ್ಟ್ ಹಾಕಲಾಗಿದೆ. ಅದರ ಬದಿಯಲ್ಲಿ ಭರತ್‌ ಕುಮ್ಡೇಲು ಅವರ ಫೋಟೋವನ್ನು ಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆಯ ಪೋಸ್ಟ್‌ ವೈರಲ್‌ ಆಗುತ್ತಿದೆ.


ಬಜರಂಗದಳದ ಪುತ್ತೂರು ಜಿಲ್ಲಾ ಘಟಕದ ಮುಖಂಡರಾಗಿರುವ ಭರತ್ ಕುಮ್ಡೇಲು ಎಸ್‌ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆಯ ಆರೋಪಿಯಾಗಿದ್ದಾರೆ.

LEAVE A REPLY

Please enter your comment!
Please enter your name here