ಪುತ್ತೂರು: ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ.ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ 25.4.2025 ರಿಂದ 1.5.2025ರ ವರೆಗೆ ಘಟಕದ ಅಧ್ಯಕ್ಷ ವೇದವ್ಯಾಸ ರಾಮಕುಂಜ ಇವರ ಶ್ರೀಮಾ ಮನೆಯಲ್ಲಿ ಗಮಕ ಸಪ್ತಾಹ ಕಾರ್ಯಕ್ರಮ ನಡೆಯಿತು.
ಕರ್ನಾಟಕ ಗಮಕ ಕಲಾ ಪರಿಷತ್ ದ.ಕ.ಜಿಲ್ಲೆ, ಪುತ್ತೂರು ಘಟಕದ ವತಿಯಿಂದ ಮನೆ ಮನೆ ಗಮಕ ಕಾರ್ಯಕ್ರಮ ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ.ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ 25.4.2025 ರಿಂದ 1.5.2025ರವರೆಗೆ ಘಟಕದ ಅಧ್ಯಕ್ಷರಾದ ವೇದವ್ಯಾಸ ರಾಮಕುಂಜ ಇವರ ಶ್ರೀಮಾ ಮನೆಯಲ್ಲಿ ಪ್ರತಿ ಸಂಜೆ ಗಮಕ ಸಪ್ತಾಹ ಕಾರ್ಯಕ್ರಮವು ನಡೆಯಿತು.
25.4.2025ರಂದು ಶ್ರೀಕೃಷ್ಣ ಜನನ ಕಥಾಭಾಗವನ್ನು ಗಮಕಿ ಜಯಂತಿ ಸುರೇಶ್ ಹೆಬ್ಬಾರ್ ವಾಚಿಸಿ, ಶ್ರೀ ಕಯ್ಯೂರು ನಾರಾಯಣ ಭಟ್ಟ ವ್ಯಾಖ್ಯಾನಗೈದರು. 26.4.2025ರಂದು ಪೂತನಿ ಸಂಹಾರ ಕಥಾಭಾಗವನ್ನು ಗಮಕಿ ಅಪೂರ್ವ ಕಿಜೆಕ್ಕಾರು ವಾಚಿಸಿ, ಗುಂಡ್ಯಡ್ಕ ಈಶ್ವರ ಭಟ್ಟ ವ್ಯಾಖ್ಯಾನಗೈದರು.

27.4.2025ರಂದು ಕಾಳಿಂಗ ಮರ್ದನ ಕಥಾಭಾಗವನ್ನು ಗಮಕಿ ಉಮಾ ಚಕ್ರಕೋಡಿ ವಾಚಿಸಿ, ಕವಿತಾ ಅಡೂರು ವ್ಯಾಖ್ಯಾನಗೈದರು. 28.4.2025ರಂದು ಯಜ್ಞ ಫಲ ಕಥಾಭಾಗವನ್ನು ಗಮಕಿ ಉಮಾ ಚಕ್ರಕೋಡಿ ವಾಚಿಸಿ, ಕವಿತಾ ಅಡೂರು ವ್ಯಾಖ್ಯಾನಗೈದರು. 29.4.2025ರಂದು ಗೋವರ್ಧನೋದ್ಧರಣ ಕಥಾಭಾಗವನ್ನು ಗಮಕಿ ಅಪೂರ್ವ ಕಿಜೆಕ್ಕಾರು ವಾಚಿಸಿ, ಗುಂಡ್ಯಡ್ಕ ಈಶ್ವರ ಭಟ್ಟ ವ್ಯಾಖ್ಯಾನಗೈದರು.
30.4.2025ರಂದು ಹರಿ ಸರ್ವೋತ್ತಮ ಕಥಾಭಾಗವನ್ನು ಗಮಕಿ ಗಣಪತಿ ಪದ್ಯಾಣ ವಾಚಿಸಿ, ಮುಳಿಯ ಶಂಕರ ಭಟ್ಟ ವ್ಯಾಖ್ಯಾನಗೈದರು. 1.5.2025ರಂದು ದೇವಕಿ ಮೃತ ಪುತ್ರರ ದರ್ಶನ ಕಥಾಭಾಗವನ್ನು ಗಮಕಿ ಗಣಪತಿ ಪದ್ಯಾಣ ವಾಚಿಸಿ, ಮುಳಿಯ ಶಂಕರ ಭಟ್ಟ ವ್ಯಾಖ್ಯಾನಗೈದರು.
ಘಟಕದ ಸದಸ್ಯರೆಲ್ಲರು ಉಪಸ್ಥಿತರಿದ್ದ ಈ ಕಾರ್ಯಕ್ರಮಗಳ ಪ್ರಾಯೋಜಕತ್ವವನ್ನು ಅಧ್ಯಕ್ಷರಾದ ವೇದವ್ಯಾಸ ರಾಮಕುಂಜ ವಹಿಸಿದರು. ಅವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿ, ಕಲಾವಿದರಿಗೆಲ್ಲರಿಗೂ ಬೆಳಗಿದ ದೀಪಗಳನ್ನು ನೀಡಿ ಗೌರವಿಸಿದರು. ಘಟಕದ ಕಾರ್ಯದರ್ಶಿ ಶಂಕರಿ ಶರ್ಮ ವಂದನಾರ್ಪಣೆಗೈದರು.