ಪುತ್ತೂರು: ಎಸ್ಎಸ್ಎಲ್ ಪರೀಕ್ಷೆಯಲ್ಲಿ 621 ಅಂಕ ಪಡೆದ ಚಿಕ್ಕಮುಡ್ನೂರು ಗ್ರಾಮದ ಕಂಚಲಗುರಿ ಚಂದುಕೂಡ್ಲು ಶ್ರೀಜಿತ್ ಅವರ ಮನೆಗೆ ಬಿಜೆಪಿ ಪ್ರಮುಖರು ತೆರಳಿ ಅಭಿನಂದಿಸಿದರು.
ಚಿಕ್ಕಮುಡ್ನೂರು ಗ್ರಾಮದ ಚಂದುಕೋಡ್ಲು ನಿವಾಸಿ ಗಣೇಶ್ ಭಟ್ ಸಿ.ಎಚ್ ಮತ್ತು ರವಿಕಲಾ ದಂಪತಿ ಪುತ್ರ ವಿವೆಕಾನಂದ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಶ್ರೀಜಿತ್ ಅವರು ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಅವರನ್ನು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ನಗರಸಭೆ ಸದಸ್ಯೆ ದೀಕ್ಷಾ ಪೈ, ಜಯಲಕ್ಷ್ಮೀ ಶಗ್ರಿತ್ತಾಯ, ಅಶೋಕ್ ಭಂಡಾರಿ ಸಹಿತ ಹಲವಾರು ಮಂದಿ ಅಭಿನಂದಿಸಿದರು. ಈ ಸಂದರ್ಭ ಶ್ರೀಜೀತ್ ಅವರ ಸಹೋದರಿ ಶಮಾ ಉಪಸ್ಥಿತರಿದ್ದರು.