ಪುತ್ತೂರು: ಮೇ.15 ರ ತನಕ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 30 ಮಂದಿ ಸರ್ವೆಯರ್ ಗಳಿಂದ ಫ್ಲಾಟಿಂಗ್ ನಡೆಯಲಿದ್ದು ,ಫ್ಲಾಟಿಂಗ್ ಸರ್ವೆಗೆ ಬರುವ ಸರ್ವೆಯರ್ ಗಳಿಗೆ ಅರ್ಜಿದಾರರು ಸಹಕಾರ ನೀಡುವಂತೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಶಾಸಕರು ” ಕಳೆದ 20 ವರ್ಷಗಳಿಂದ ಫ್ಲಾಟಿಂಗ್ ಅರ್ಜಿಗಳು ಬಾಕಿ ಇದೆ. ಈ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ. 20 ವರ್ಷಗಳ ಹಿಂದೆ ಅಕ್ರಮ ಸಕ್ರಮದಲ್ಲಿ ಮಂಜೂರಾದ ಭೂಮಿ ಇನ್ನೂ ಫ್ಲಾಟಿಂಗ್ ಆಗಿಲ್ಲ. ಫ್ಲಾಟಿಂಗ್ ಆಗದ ಕಾರಣ ಜನರಿಗೆ ತೊಂದರೆಯಾಗಿದೆ. ಈ ಬಗ್ಗೆ ಸರಕಾರದ ಗಮನ ಸೆಳೆದು ಇದೀಗ ಏಕಕಾಲದಲ್ಲಿ 30 ಮಂದಿ ಸರ್ವೆಯರ್ ಗಳನ್ನು ಪುತ್ತೂರಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಳುಹಿಸಿಕೊಡಲಾಗಿದೆ. ಎಲ್ಲಾ ಗ್ರಾಮಗಳಲ್ಲಿ ಫ್ಲಾಟಿಂಗ್ ಕಾರ್ಯ ನಡೆಯಲಿದ್ದು ,ನಿಮ್ಮ ಜಾಗದ ಸರ್ವೆಗೆ ಬರುವಾಗ ಅವರ ಜೊತೆ ಸಹಕರಿಸಿದರೆ ಕೆಲಸದಲ್ಲಿ ವೇಗತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.ಪ್ರತೀಯೊಬ್ಬ ಅರ್ಜಿದಾರರು ಸರ್ವೆಯರ್ ಹಾಗೂ ಇತರೆ ಅಧಿಕಾರಿಗಳ ಜೊತೆ ಸಹಕಾರ ನೀಡುವಂತೆ ಮನವಿ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.