ಪುತ್ತೂರು: ಭಾರತೀಯ ಮಾನವ ಹಕ್ಕುಗಳ ಪ್ರಾಧಿಕಾರ ಇದರ ಪುತ್ತೂರು ತಾಲೂಕು ಅಧ್ಯಕ್ಷರಾಗಿ ಅಬ್ಬಾಸ್ ಗೂನಡ್ಕ ಕುಂಬ್ರರವರನ್ನು ಪ್ರಾಧಿಕಾರವು ನೇಮಕ ಮಾಡಿದೆ. ಪ್ರಾಧಿಕಾರದ ಅಧ್ಯಕ್ಷ ಹಾಜಿ ಎಸ್.ಶೇಖ್‌ರವರು ಈ ನೇಮಕವನ್ನು ಮಾಡಿದ್ದಾರೆ.
ಅಬ್ಬಾಸ್ ಗೂನಡ್ಕರವರು ಹಯಾತುಲ್ ಇಸ್ಲಾಂ ದರ್ಶ್ ಕಮಿಟಿ ಇದರ ಮಾಜಿ ಉಪಾಧ್ಯಕ್ಷರಾಗಿ, ಮೊಯುದ್ದೀನ್ ದಫ್ ಅಸೋಸಿಯೇಶನ್ ಗೂನಡ್ಕ ಇದರ ಮಾಜಿ ಕಾರ್ಯದರ್ಶಿಯಾಗಿ, ಕುಂಬ್ರ ಕೆಪಿಎಸ್ ಸ್ಕೂಲ್ ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾಗಿ, ವಲ್ಡ್ ಅಸೆಂಬ್ಲಿ ಆಫ್ ಮುಸ್ಲಿಂ ಯೂತ್ ಸೌದಿ ಅರೇಬಿಯಾ ಇದರ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಇವರು ಒಳಮೊಗ್ರು ಗ್ರಾಮದ ಕುಂಬ್ರ ಪೇಟೆಯಲ್ಲಿ ಆಪೆ ರಿಕ್ಷಾ ಚಾಲಕ ಮಾಲಕರಾಗಿ ಸೇವೆ ಸಲ್ಲಿಸುತ್ತಿದ್ದು ಕುಂಬ್ರದ ‘ಆಪತ್ಭಾಂಧವ’ ಎಂದೇ ಪ್ರಸಿದ್ದಿಯನ್ನು ಪಡೆದುಕೊಂಡಿದ್ದಾರೆ. ಎಲ್ಲಿ ಯಾವುದೇ ಅಪಘಾತ ಸಂಭವಿಸಿದರೂ ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸುತ್ತಿದ್ದಾರೆ. ಪ್ರಸ್ತುತ ಪತ್ನಿ ಸಫಿಯಾ ಹಾಗೂ ಮಕ್ಕಳೊಂದಿಗೆ ಕುಂಬ್ರದಲ್ಲಿ ವಾಸವಾಗಿದ್ದಾರೆ.