ಪುತ್ತೂರು: 2024- 25ನೇ ಸಾಲಿನ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಮೇ.2ರಂದು ಪ್ರಕಟಗೊಂಡಿದ್ದು ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯು ಸತತ 9 ವರ್ಷಗಳಿಂದ 100 ಶೇಕಡಾ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.

ಈ ಬಾರಿ ಪಡ್ರೆ ಚಾಕಟ ಕುಮೇರಿ ಬಾಲಚಂದ್ರ ಬಿ.ವಿ ಮತ್ತುಪ್ರಿಯಾ ವಿ ದಂಪತಿಗಳ ಪುತ್ರ ವರುಣ್ 616 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿರುತ್ತಾನೆ. ನಿಡ್ಪಳ್ಳಿ ಆನಂದ ರೈ ಮತ್ತು ಬೇಬಿ ದಂಪತಿಗಳ ಪುತ್ರಿ ಅನ್ವಿತಾ ಮತ್ತು ಬಡಗನ್ನೂರು ಪಾದೆಕರಿಯ ಬಾಲಸುಬ್ರಮಣ್ಯ ಮತ್ತು ಸೌಮ್ಯ ಎಸ್ ದಂಪತಿಗಳ ಪುತ್ರಿ ಶರಣ್ಯ ಎಸ್ 615 ಅಂಕಗಳೊಂದಿಗೆ ದ್ವಿತೀಯ ಸ್ಥಾನಗಳನ್ನು ಹಂಚಿಕೊಂಡಿರುತ್ತಾರೆ. ಪಡ್ರೆ ಎಡಮಲೆ ಶ್ರೀಹರಿ ಆರ್ ಭರಣೇಕರ್ ಮತ್ತು ಜಯಮಾಲಾ ಕೆ ದಂಪತಿ ಪುತ್ರಿ ಪೂರ್ವಿ ಎಸ್ ಭರಣೇಕರ್ 612 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿರುವುದು ಪ್ರಿಯದರ್ಶಿನಿ ಎಂಬ ಗ್ರಾಮೀಣ ವಿದ್ಯಾಸಂಸ್ಥೆಯ ಹೆಗ್ಗಳಿಕೆಗೊಂದು ಗರಿ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಗುರುತಿಸಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು, ಕೋಶಾಧಿಕಾರಿಗಳಾದ ಕರುಣಾಕರ ಶೆಟ್ಟಿ ಕೊಮ್ಮಂಡ, ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷರೂ, ಡಿ.ಸಿ.ಸಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಆಡಳಿತ ಮಂಡಳಿ ಸದಸ್ಯರಾದ ಅರವಿಂದ ಭಟ್ ದರ್ಬೆ, ಶಾಲಾ ಮುಖ್ಯಗುರು ರಾಜೇಶ್ ನೆಲ್ಲಿತಡ್ಕ ಹಾಗೂ ಶಿಕ್ಷಕ ವೃಂದ ಸಾಧಕ ವಿದ್ಯಾರ್ಥಿಗಳ ಮನೆ ಭೇಟಿ ಮಾಡಿ ಪೋಷಕರ ಪ್ರೋತ್ಸಾಹ, ಹಾಗೂ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿರುತ್ತಾರೆ.