ಪುತ್ತೂರು: ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಉಪವಿಭಾಗ ಹಾಗೂ ಶಾಖಾ ಕಛೇರಿ ಮಟ್ಟದಲ್ಲಿ ಗ್ರಾಹಕರ ಸಲಹಾ ಸಮಿತಿಗಳ ರಚನೆಗೆ ಇಂಧನ ಸಚಿವರು ಸೂಚನೆ ನೀಡಿದ್ದು,ಅದರಂತೆ ಗ್ರಾಹಕ ಸಲಹಾ ಸಮಿತಿ ಸದಸ್ಯರ ನೇಮಕ ಮಾಡಿ ಮೆಸ್ಕಾಂ ಪ್ರಧಾನ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪೆನಿ(ಮೆಸ್ಕಾಂ)ವ್ಯಾಪ್ತಿಗೆ ಬರುವ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉಪವಿಭಾಗ ಮತ್ತು ಶಾಖಾ ಕಛೇರಿ ಮಟ್ಟದಲ್ಲಿ ಸದಸ್ಯರುಗಳನ್ನು ಸಲಹಾ ಸಮಿತಿಗೆ ನೇಮಕ ಮಾಡಲಾಗಿದೆ.
ಕಾರ್ಯಪಾಲನಾ ಗ್ರಾಮಾಂತರ ಉಪವಿಭಾಗ ಪುತ್ತೂರು, ಕುಂಬ್ರ: ಪುತ್ತೂರು, ಕುಂಬ್ರ ಕಾರ್ಯಪಾಲನಾ ಗ್ರಾಮಾಂತರ ಉಪವಿಭಾಗದ ಗ್ರಾಹಕ ಸಲಹಾ ಸಮಿತಿ ಅಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಸದಸ್ಯರುಗಳಾಗಿ ಪುತ್ತೂರು ಗ್ರಾಮಾಂತರ ಉಪವಿಭಾಗದ ಸಹಕಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಕವಿಪ್ರನಿನಿ ಪ್ರಸರಣ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಂಚಾಲಕರಾಗಿ ಗ್ರಾಮಾಂತರ ಉಪವಿಭಾಗದ ಸಹಾಯಕ ಇಂಜಿನಿಯರ್, ರೈತ ಪ್ರತಿನಿಧಿಯಾಗಿ ಸಾರ್ಥಕ್ ರೈ,ಪ.ಜಾತಿ/ಪ.ಪಂಗಡದ ಪ್ರತಿನಿಧಿಯಾಗಿ ತಿಮ್ಮಯ್ಯ, ಮಹಿಳಾ ಪ್ರತಿನಿಽಯಾಗಿ ಚಂದ್ರಾವತಿ, ಹಿಂದುಳಿದ ವರ್ಗಗಳ ಪ್ರತಿನಿಽಯಾಗಿ ಇಕ್ಬಾಲ್ ಹುಸೇನ್, ವಾಣಿಜ್ಯ ಪ್ರತಿನಿಧಿಯಾಗಿ ಹಮೀದ್ ಬೆಟ್ಟಂಪಾಡಿರವರನ್ನು ನೇಮಕ ಮಾಡಲಾಗಿದೆ.
ಕುಂಬ್ರ ಶಾಖೆ: ಕುಂಬ್ರ ಶಾಖೆಯ ಗ್ರಾಹಕ ಸಲಹಾ ಸಮಿತಿ ಅಧ್ಯಕ್ಷರಾಗಿ ಪುತ್ತೂರು ಗ್ರಾಮಾಂತರ ಉಪವಿಭಾಗದ ಸಹಕಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸದಸ್ಯರಾಗಿ ಕವಿಪ್ರನಿನಿ ಪ್ರಸರಣ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್,ಸಂಚಾಲಕರಾಗಿ ಪುತ್ತೂರು ಗ್ರಾಮಾಂತರ ಉಪವಿಭಾಗದ ಸಹಾಯಕ ಇಂಜಿನಿಯರ್, ರೈತ ಪ್ರತಿನಿಧಿಗಳಾಗಿ ದಶರತ್ ರೈ, ಜನಾರ್ದನ ಪೂಜಾರಿ, ಪ.ಜಾತಿ/ಪ.ಪಂಗಡ ಪ್ರತಿನಿಽಯಾಗಿ ಅರುಣಾ, ಮಹಿಳಾ ಪ್ರತಿನಿಽಯಾಗಿ ನವೀನ ಕುಮಾರಿ, ಹಿಂದುಳಿದ ವರ್ಗಗಳ ಪ್ರತಿನಿಽಯಾಗಿ ರವೀಂದ್ರ ಪೂಜಾರಿ, ವಾಣಿಜ್ಯ ಪ್ರತಿನಿಧಿಯಾಗಿ ಮೋನಪ್ಪ ಪೂಜಾರಿರವರನ್ನು ನೇಮಕ ಮಾಡಲಾಗಿದೆ.
ಬೆಟ್ಟಂಪಾಡಿ ಶಾಖೆ: ಬೆಟ್ಟಂಪಾಡಿ ಶಾಖೆಯ ಗ್ರಾಹಕ ಸಲಹಾ ಸಮಿತಿ ಅಧ್ಯಕ್ಷರಾಗಿ ಪುತ್ತೂರು ಗ್ರಾಮಾಂತರ ಉಪವಿಭಾಗದ ಸಹಕಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸದಸ್ಯರಾಗಿ ಕವಿಪ್ರನಿನಿ ಪ್ರಸರಣ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಂಚಾಲಕರಾಗಿ ಪುತ್ತೂರು ಗ್ರಾಮಾಂತರ ಉಪವಿಭಾಗದ ಸಹಾಯಕ ಇಂಜಿನಿಯರ್, ರೈತ ಪ್ರತಿನಿಧಿಯಾಗಿ ರಾಕೇಶ್ ರೈ, ಪ್ರಕಾಶ್ ಕೊಯಿಲ, ಪ.ಜಾತಿ/ಪ.ಪಂಗಡ ಪ್ರತಿನಿಽಯಾಗಿ ಐತ್ತಪ್ಪ ಪೇರಲ್ತಡ್ಕ, ಮಹಿಳಾ ಪ್ರತಿನಿಽಯಾಗಿ ಸೀತಾ ಭಟ್, ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಕೆ.ಆಲಿ, ವಾಣಿಜ್ಯ ಪ್ರತಿನಿಧಿಯಾಗಿ ಬಾಬು ರೈ ಕೋಟೆರವರನ್ನು ನೇಮಕ ಮಾಡಲಾಗಿದೆ.
ಈಶ್ವರಮಂಗಲ ಶಾಖೆ: ಈಶ್ವರಮಂಗಲ ಶಾಖೆಯ ಗ್ರಾಹಕ ಸಲಹಾ ಸಮಿತಿ ಅಧ್ಯಕ್ಷರಾಗಿ ಪುತ್ತೂರು ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸದಸ್ಯರಾಗಿ ಕವಿಪ್ರನಿನಿ ಪ್ರಸರಣ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಂಚಾಲಕರಾಗಿ ಪುತ್ತೂರು ಗ್ರಾಮಾಂತರ ಉಪವಿಭಾಗದ ಸಹಾಯಕ ಇಂಜಿನಿಯರ್, ಗ್ರಾಹಕ ಪ್ರತಿನಿಧಿಯಾಗಿ ಅಬ್ದುಲ್ ಕುಂಞಿ ಪಲ್ಲತ್ತೂರು, ಗಿರೀಶ್ ಕುಮಾರ್ ರೈ, ಪ.ಜಾತಿ/ಪ.ಪಂಗಡ ಪ್ರತಿನಿಽಯಾಗಿ ವಿಜಯ ಕರ್ನೂರುಗುತ್ತು, ಮಹಿಳಾ ಪ್ರತಿನಿಽಯಾಗಿ ಅನ್ನಪೂರ್ಣೇಶ್ವರಿ, ಹಿಂದುಳಿದ ವರ್ಗಗಳ ಪ್ರತಿನಿಽಯಾಗಿ ಅಬೀದ್, ವಾಣಿಜ್ಯ ಪ್ರತಿನಿಽಯಾಗಿ ದೀಕ್ಷಿತ್ ರೈರವರನ್ನು ನೇಮಕ ಮಾಡಲಾಗಿದೆ.
ಸವಣೂರು ಶಾಖೆ: ಸವಣೂರು ಶಾಖೆಯ ಅಧ್ಯಕ್ಷರಾಗಿ ಪುತ್ತೂರು ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸದಸ್ಯರಾಗಿ ಕವಿಪ್ರನಿನಿ ಪ್ರಸರಣ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಂಚಾಲಕರಾಗಿ ಪುತ್ತೂರು ಗ್ರಾಮಾಂತರ ಉಪವಿಭಾಗದ ಸಹಾಯಕ ಇಂಜಿನಿಯರ್, ರೈತ ಪ್ರತಿನಿಧಿಯಾಗಿ ಕಮಲೇಶ್, ಪ.ಜಾತಿ/ಪ.ಪಂಗಡ ಪ್ರತಿನಿಧಿಯಾಗಿ ಪದ್ಮಯ್ಯ ನಾಯ್ಕ, ಮಹಿಳಾ ಪ್ರತಿನಿಧಿಯಾಗಿ ಯೋಗಿನಿ ರೈ ಮೇಗಿನಗುತ್ತು, ಹಿಂದುಳಿದ ವರ್ಗಗಳ ಪ್ರತಿನಿಽಯಾಗಿ ಅಝೀಜ್, ವಾಣಿಜ್ಯ ಪ್ರತಿನಿಧಿಯಾಗಿ ಸುಪ್ರೀತ್ ಕಣ್ಣರಾಯರವರನ್ನು ನೇಮಕ ಮಾಡಲಾಗಿದೆ.
ಕಾರ್ಯಪಾಲನಾ ಉಪವಿಭಾಗ ವಿಟ್ಲ: ಕಾರ್ಯಪಾಲನಾ ಉಪವಿಭಾಗ ವಿಟ್ಲ ಗ್ರಾಹಕ ಸಲಹಾ ಸಮಿತಿ ಅಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಸದಸ್ಯರುಗಳಾಗಿ ವಿಟ್ಲ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಕವಿಪ್ರನಿನಿ ಪ್ರಸರಣ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಂಚಾಲಕರಾಗಿ ವಿಟ್ಲ ಉಪವಿಭಾಗದ ಸಹಾಯಕ ಇಂಜಿನಿಯರ್, ರೈತ ಪ್ರತಿನಿಧಿಯಾಗಿ ಸಿರಾಜ್ ಮಾಣಿಲ, ಪ.ಜಾತಿ/ಪ.ಪಂಗಡ ಪ್ರತಿನಿಽಯಾಗಿ ರಶ್ಮಿ ಪೆರುವಾಯಿ, ಮಹಿಳಾ ಪ್ರತಿನಿಧಿಯಾಗಿ ಲೀಲಾ ಲೋಬೋ ಪೆರುವಾಯಿ, ಹಿಂದುಳಿದ ವರ್ಗಗಳ ಪ್ರತಿನಿಽಯಾಗಿ ತನಿಯ ಪೂಜಾರಿ ಪೆರ್ನೆ, ವಾಣಿಜ್ಯ ಪ್ರತಿನಿಧಿಯಾಗಿ ಅಬ್ದುಲ್ ಕರೀಮ್‌ರವರನ್ನು ನೇಮಕ ಮಾಡಲಾಗಿದೆ.
ವಿಟ್ಲ ಶಾಖೆ: ವಿಟ್ಲ ಶಾಖೆಯ ಗ್ರಾಹಕ ಸಲಹಾ ಸಮಿತಿ ಅಧ್ಯಕ್ಷರಾಗಿ ವಿಟ್ಲ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸದಸ್ಯರಾಗಿ ಕವಿಪ್ರನಿನಿ ಪ್ರಸರಣ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಂಚಾಲಕರಾಗಿ ವಿಟ್ಲ ಉಪವಿಭಾಗದ ಸಹಾಯಕ ಇಂಜಿನಿಯರ್, ರೈತ ಪ್ರತಿನಿಧಿಗಳಾಗಿ ಎಂ.ಎಸ್.ಡಿ ಅಶೋಕ್ ಕುಮಾರ್, ಎಲ್ಯಣ್ಣ ಪೂಜಾರಿ, ಪ.ಜಾತಿ/ಪ.ಪಂಗಡ ಪ್ರತಿನಿಧಿಯಾಗಿ ಗಿರಿಧರ ಪುಚ್ಚೆಗುತ್ತು, ಮಹಿಳಾ ಪ್ರತಿನಿಽಯಾಗಿ ಶಿವಾಣಿ ಬಿ.ಶೆಟ್ಟಿ, ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ರವಿ ಪೂಜಾರಿ, ವಾಣಿಜ್ಯ ಪ್ರತಿನಿಧಿಯಾಗಿ ಶೇಖ್ ಅಲಿ ಸೇರಾಜೆರವರನ್ನು ನೇಮಕ ಮಾಡಲಾಗಿದೆ.
ಉಕ್ಕುಡ ಶಾಖೆ: ಉಕ್ಕುಡ ಶಾಖೆಯ ಗ್ರಾಹಕ ಸಲಹಾ ಸಮಿತಿ ಅಧ್ಯಕ್ಷರಾಗಿ ವಿಟ್ಲ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸದಸ್ಯರಾಗಿ ಕವಿಪ್ರನಿನಿ ಪ್ರಸರಣ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಂಚಾಲಕರಾಗಿ ವಿಟ್ಲ ಉಪವಿಭಾಗದ ಸಹಾಯಕ ಇಂಜಿನಿಯರ್, ರೈತ ಪ್ರತಿನಿಧಿಗಳಾಗಿ ಬಾಲಕೃಷ್ಣ ಪುಣಚ, ರಾಜೇಂದ್ರ ರೈ ಪುಣಚ, ಪ.ಜಾತಿ/ಪ.ಪಂಗಡ ಪ್ರತಿನಿಧಿಯಾಗಿ ನಯನ ಪುಣಚ, ಮಹಿಳಾ ಪ್ರತಿನಿಽಯಾಗಿ ಪ್ರತಿಭಾ ಶೆಟ್ಟಿ, ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಪ್ರವೀಣ್ ಅಳಿಕೆ, ವಾಣಿಜ್ಯ ಪ್ರತಿನಿಧಿಯಾಗಿ ಬಾಲಕೃಷ್ಣ ಶೆಟ್ಟಿ ಕೇಪುರವರನ್ನು ನೇಮಕ ಮಾಡಲಾಗಿದೆ.
ಕಾರ್ಯಪಾಲನಾ ನಗರ ಉಪವಿಭಾಗ ಪುತ್ತೂರು: ಕಾರ್ಯಪಾಲನಾ ನಗರ ಉಪವಿಭಾಗ ಪುತ್ತೂರು ಗ್ರಾಹಕ ಸಲಹಾ ಸಮಿತಿ ಅಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಸದಸ್ಯರುಗಳಾಗಿ ಪುತ್ತೂರು ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಕವಿಪ್ರನಿನಿ ಪ್ರಸರಣ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಂಚಾಲಕರಾಗಿ ಪುತ್ತೂರು ನಗರ ಉಪವಿಭಾಗದ ಸಹಾಯಕ ಇಂಜಿನಿಯರ್, ರೈತ ಗ್ರಾಹಕ ಪ್ರತಿನಿಽಯಾಗಿ ಚಂದ್ರಶೇಖರ ಕಲ್ಲುಗುಡ್ಡೆ, ಪ.ಜಾತಿ/ಪ.ಪಂಗಡ ಪ್ರತಿನಿಧಿಯಾಗಿ ಶಿವಪ್ಪ ನಾಯ್ಕ, ಮಹಿಳಾ ಪ್ರತಿನಿಧಿಯಾಗಿ ಶೋಭಾ ಮಯ್ಯ, ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಮೋಹನ್ ಗುರ್ಜಿನಡ್ಕ, ಕೈಗಾರಿಕಾ ವಾಣಿಜ್ಯ ಪ್ರತಿನಿಽಯಾಗಿ ಪ್ರವೀಣ್ ಶೆಟ್ಟಿ ಅಳಕೆಮಜಲುರವರನ್ನು ನೇಮಕ ಮಾಡಲಾಗಿದೆ.
ಪುತ್ತೂರು ಶಾಖೆ-1: ಪುತ್ತೂರು ಶಾಖೆ-1 ಗ್ರಾಹಕ ಸಲಹಾ ಸಮಿತಿ ಅಧ್ಯಕ್ಷರಾಗಿ ಪುತ್ತೂರು ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸದಸ್ಯರಾಗಿ ಕವಿಪ್ರನಿನಿ ಪ್ರಸರಣ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಂಚಾಲಕರಾಗಿ ಪುತ್ತೂರು ನಗರ ಉಪವಿಭಾಗದ ಸಹಾಯಕ ಇಂಜಿನಿಯರ್, ರೈತ ಪ್ರತಿನಿಧಿಗಳಾಗಿ ಜಾನಕಿ ಶೇವಿರೆ, ಬೇಬಿ ಗೌಡ, ಪ.ಜಾತಿ/ಪ.ಪಂಗಡ ಪ್ರತಿನಿಧಿಯಾಗಿ ಬಾಬು ಮರಿಕೆ, ಮಹಿಳಾ ಪ್ರತಿನಿಧಿಯಾಗಿ ಜಯಂತಿ ಬಲ್ನಾಡು, ಹಿಂದುಳಿದ ವರ್ಗಗಳ ಪ್ರತಿನಿಽಯಾಗಿ ಕೇಶವ ಸುವರ್ಣ, ಕೈಗಾರಿಕಾ ವಾಣಿಜ್ಯ ಪ್ರತಿನಿಽಯಾಗಿ ಜಯಂತ ಕಬಕರವರನ್ನು ನೇಮಕ ಮಾಡಲಾಗಿದೆ.
ಪುತ್ತೂರು ಶಾಖೆ-2: ಪುತ್ತೂರು ಶಾಖೆ-2 ಗ್ರಾಹಕ ಸಲಹಾ ಸಮಿತಿ ಅಧ್ಯಕ್ಷರಾಗಿ ಪುತ್ತೂರು ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸದಸ್ಯರಾಗಿ ಕವಿಪ್ರನಿನಿ ಪ್ರಸರಣ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಂಚಾಲಕರಾಗಿ ಪುತ್ತೂರು ನಗರ ಉಪವಿಭಾಗದ ಸಹಾಯಕ ಇಂಜಿನಿಯರ್, ರೈತ ಪ್ರತಿನಿಧಿಗಳಾಗಿ ದಿನೇಶ್ ಕರ್ಕೇರ, ಶಿವಪ್ರಸಾದ್ ಆರ್ಯಾಪು, ಪ.ಜಾತಿ/ಪ.ಪಂಗಡ ಪ್ರತಿನಿಧಿಯಾಗಿ ಹರಿಣಾಕ್ಷಿ ಬೊಳ್ಳಾಡಿ, ಮಹಿಳಾ ಪ್ರತಿನಿಧಿಯಾಗಿ ಚಂದ್ರಕಲಾ ನರಿಮೊಗರು, ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ರಾಘವೇಂದ್ರ, ವಾಣಿಜ್ಯ ಪ್ರತಿನಿಧಿಯಾಗಿ ಪ್ರವೀಣ್‌ರವರನ್ನು ನೇಮಕ ಮಾಡಲಾಗಿದೆ.
ಉಪ್ಪಿನಂಗಡಿ ಶಾಖೆ: ಉಪ್ಪಿನಂಗಡಿ ಶಾಖೆಯ ಗ್ರಾಹಕ ಸಲಹಾ ಸಮಿತಿ ಅಧ್ಯಕ್ಷರಾಗಿ ಪುತ್ತೂರು ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸದಸ್ಯರಾಗಿ ಕವಿಪ್ರನಿನಿ ಪ್ರಸರಣ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಂಚಾಲಕರಾಗಿ ಪುತ್ತೂರು ನಗರ ಉಪವಿಭಾಗದ ಸಹಾಯಕ ಇಂಜಿನಿಯರ್, ರೈತ ಪ್ರತಿನಿಧಿಗಳಾಗಿ ಪದ್ಮ ಪೆಲತ್ತಾಡಿ, ಜಯಶೀಲಾ, ಪ.ಜಾತಿ/ಪ.ಪಂಗಡ ಪ್ರತಿನಿಧಿಯಾಗಿ ಶೇಷಪ್ಪ ನೆಕ್ಕಿಲು, ಮಹಿಳಾ ಪ್ರತಿನಿಧಿಯಾಗಿ ಗೀತಾ ದಾಸರಮೂಲೆ, ಹಿಂದುಳಿದ ವರ್ಗಗಳ ಪ್ರತಿನಿಽಯಾಗಿ ಖಾದರ್ ನೆಕ್ಕಿಲಾಡಿ, ವಾಣಿಜ್ಯ ಪ್ರತಿನಿಧಿಯಾಗಿ ರವೀಂದ್ರರವರನ್ನು ನೇಮಕ ಮಾಡಲಾಗಿದೆ.
ಬನ್ನೂರು ಶಾಖೆ: ಬನ್ನೂರು ಶಾಖೆಯ ಗ್ರಾಹಕ ಸಲಹಾ ಸಮಿತಿ ಅಧ್ಯಕ್ಷರಾಗಿ ಪುತ್ತೂರು ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸದಸ್ಯರಾಗಿ ಕವಿಪ್ರನಿನಿ ಪ್ರಸರಣ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್,ಸಂಚಾಲಕರಾಗಿ ಪುತ್ತೂರು ನಗರ ಉಪವಿಭಾಗದ ಸಹಾಯಕ ಇಂಜಿನಿಯರ್, ರೈತ ಪ್ರತಿನಿಧಿಗಳಾಗಿ ಯೋಗೀಶ್ ಸಾಮಾನಿ, ಮೋನಪ್ಪ ಗೌಡ, ಪ.ಜಾತಿ/ಪ.ಪಂಗಡ ಪ್ರತಿನಿಧಿಯಾಗಿ ಶ್ರೀನಿವಾಸ ನಾಯ್ಕ, ಮಹಿಳಾ ಪ್ರತಿನಿಽಯಾಗಿ ರಶ್ಮಿ ರೈ, ಹಿಂದುಳಿದ ವರ್ಗಗಳ ಪ್ರತಿನಿಽಯಾಗಿ ಅಕ್ಷಯ, ವಾಣಿಜ್ಯ ಪ್ರತಿನಿಧಿಯಾಗಿ ಯತೀಶ್ ಶೆಟ್ಟಿರವರನ್ನು ನೇಮಕ ಮಾಡಲಾಗಿದೆ.
ಸಮಿತಿಯ ಕಾರ್ಯನಿರ್ವಹಣೆ
ಉಪವಿಭಾಗ ಮಟ್ಟದ ಸಮಿತಿಯು ಕನಿಷ್ಠ 3 ತಿಂಗಳಿಗೊಮ್ಮೆ ಹಾಗೂ ಶಾಖಾ ಕಛೇರಿ ಮಟ್ಟದ ಸಮಿತಿಯು ಕನಿಷ್ಟ 2 ತಿಂಗಳಿಗೊಮ್ಮೆ ಸಭೆ ನಡೆಸಬೇಕು.ಸಮಿತಿಯು ವಿದ್ಯುತ್ ಸರಬರಾಜು ಸೇವೆ ಸಂಬಂಧವಾಗಿ ಸಾರ್ವಜನಿಕರು,ಗ್ರಾಹಕರಿಂದ ಅಹವಾಲು, ಸಲಹೆ-ಸೂಚನೆಗಳನ್ನು ಸ್ವೀಕರಿಸುವುದು,ಗ್ರಾಹಕರಿಗೆ ನೀಡುತ್ತಿರುವ ಸೇವೆಯನ್ನು ಮತ್ತಷ್ಟು ಉತ್ತಮಪಡಿಸಲು ಸ್ವೀಕರಿಸಿದ ಅಹವಾಲು,ಸಲಹೆ-ಸೂಚನೆಗಳ ಬಗ್ಗೆ ಚರ್ಚೆ ನಡೆಸಿ, ಅಂತಹ ಅಂಶಗಳನ್ನು ದೈನಂದಿನ ಕಾರ್ಯನಿರ್ವಹಣೆಯಲ್ಲಿ ಅಳವಡಿಸಿಕೊಳ್ಳುವುದು.ವಿದ್ಯುತ್ ಕಳ್ಳತನ, ದುರ್ಬಳಕೆ,ಅನಧಿಕೃತ ಬಳಕೆ ಇಂತಹ ಕಾನೂನುಬಾಹಿರ ಪ್ರಕರಣಗಳ ಬಗ್ಗೆ ಗ್ರಾಹಕರು ಸಮಿತಿಯ ಗಮನಕ್ಕೆ ತರುವಂತೆ ತಿಳಿಸುವುದು.ಸಲಹೆ ಸೂಚನೆಗಳ ರೂಪದಲ್ಲಿ ಸ್ವೀಕರಿಸಿದ ಅತ್ಯಮೂಲ್ಯ ಅಂಶಗಳನ್ನು ನಡವಳಿ ರೂಪದಲ್ಲಿ ಆಯಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ)ಇವರಿಗೆ ಸಲ್ಲಿಸುವುದು. ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ಗಳು(ವಿ) ಅವರವರ ವ್ಯಾಪ್ತಿಗೆ ಒಳಪಡುವ ಸಮಿತಿಗಳ ನಡವಳಿಗಳನ್ನು ಕ್ರೋಢೀಕರಿಸಿ ಕೂಡಲೇ ವೃತ್ತ ಮುಖ್ಯಸ್ಥರ ಮೂಲಕ ವಲಯ ಮುಖ್ಯಸ್ಥರಿಗೆ ಸಲ್ಲಿಸುವುದು.ವಲಯದ ಮುಖ್ಯಸ್ಥರು ವಿಭಾಗಗಳಿಂದ ಸ್ವೀಕರಿಸಿದ ವರದಿಗಳನ್ನು ಹಾಗೂ ಕೈಗೊಂಡ ಕ್ರಮಗಳನ್ನು ಸೂಕ್ತವಾಗಿ ಪರಿಶೀಲಿಸಿ ಸಂಬಂಧಪಟ್ಟ ವಿದ್ಯುತ್ ಸರಬರಾಜು ಕಂಪೆನಿಗಳ ನಿಗಮ ಕಛೇರಿಗೆ 7 ದಿನಗಳಲ್ಲಿ ಸಲ್ಲಿಸುವುದು. ವಿದ್ಯುತ್ ಸರಬರಾಜು ಕಂಪೆನಿಗಳ ನಿಗಮ ಕಛೇರಿಯಲ್ಲಿ ಸ್ವೀಕೃತವಾದ ವರದಿಗಳನ್ನು ಅವಲೋಕಿಸಿ, ನಿಯಮಾನುಸಾರ ವಹಿಸಿರುವ ಕ್ರಮದ ಬಗ್ಗೆ ಸರ್ಕಾರಕ್ಕೆ 7 ದಿನದೊಳಗೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.