ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ವಿಜೃಂಭಣೆಯಿಂದ ಜರಗಿತು.
ಬುಧವಾರ ಸಂಜೆ ಶ್ರೀ ದೇವರ ದಿಬ್ಬಣ ಹೊರಟು ಸ್ವಾಗತ ಬಳಿಕ ಕಲ್ಯಾಣೋತ್ಸವ ವಿಧಿ ವಿಧಾನದಂತೆ ನಡೆದು ರಾತ್ರಿ ಪೂಜೆ, ಶ್ರೀ ದೇವರ ದಶಮಿ ದಿಂಡಿ ಉತ್ಸವ, ವಸಂತ ಪೂಜೆ, ಎಕಾಂತ ಸೇವೆಗಳು ನಡೆದವು.
ಈ ಸಂದರ್ಭದಲ್ಲಿ ಶ್ರೀ ದೇವಾಲಯದ ಅಡಳಿತ ಮೊಕ್ತೇಸರರಾದ ಗಣೇಶ ಶೆಣೈ, ಮೊಕ್ತೇಸರರಾದ ಯು. ನಾಗರಾಜ ಭಟ್, ಡಾ. ಯಂ ರತ್ನಾಕರ ಶೆಣೈ, ಕೆ. ಅನಂತರಾಯ ಕಿಣ, ಪಿ.ದೇವಿದಾಸ ಭಟ್, ವಿಶೇಷ ಸೇವಾಕರ್ತರಾದ ಉಜಿರೆ ಪ್ರಭಾತ್ ಭಟ್ ಜಿ., ಯು. ಕೃಷ್ಣ ಭಟ್ ಪ್ರಮುಖರಾದ ಕರಾಯ ಗಣೇಶ ನಾಯಕ್, ಎಚ್.ವಾಸುದೇವ ಪ್ರಭು, ಕರಾಯ ರಾಘವೇಂದ್ರ ನಾಯಕ್, ಯೆಳ್ತಿಮಾರ್ ಅನಂತ ಶೆಣೈ ಜುಪಿಟರ್, ವೈ. ವೆಂಕಟೇಶ್ ಶೆಣೈ, ಕೆ. ದಾಮೋದರ ಪ್ರಭು, ಸುಜೀರ್ ಗಣಪತಿ ನಾಯಕ್, ಗಿರಿಧರ್ ನಾಯಕ್ ಪಾಣೆ ಮಂಗಳೂರು, ಹರೀಶ ಪೈ, ಕೆ. ರಾಜೇಶ ಪೈ, ಕೆ. ಸತೀಶ ಶೆಣೈ, ಹರೀಶ ಕಿಣಿ, ಕೆ. ಶ್ರೀಕಾಂತ್ ಪ್ರಭು ಯಂ., ಶ್ರೀನಿವಾಸ ಭಟ್ ಯಂ., ಸತ್ಯಪ್ರಸಾದ್ ಭಟ್ ಲಕ್ಷೀನಗರ, ಕರಾಯ ನಾಗೇಶ ನಾಯಕ್, ಕೆ. ಸುರೇಶ ಕಿಣಿ ಕೆ. ಮಹೇಶ ಕಿಣಿ, ವಿದ್ಯಾಧರ ಮಲ್ಯ, ಕೆ. ರವಿಂದ್ರ ಪೈ, ಶಾಂತರಾಮ ಶೆಣೈ ಕೆ., ಗಣೇಶ ಭಟ್ ಎನ್., ಸುರೇಶ ಪೈ, ಸರ್ವೇಶ್ ಭಟ್, ದೇವಾಲಯದ ವ್ಯವಸ್ಥಾಪಕರಾದ ಕೆ.ರಾಮ ಕೃಷ್ಣ ಪ್ರಭು, ಕೆ ಮಂಜುನಾಥ ನಾಯಕ್ ಉಪಸ್ಥಿತರಿದ್ದರು. ಪೂಜಾ ವಿಧಿವಿಧಾನವನ್ನು ತ್ರಿವಿಕ್ರಮ್ ಭಟ್, ರವೀಂದ್ರ ಭಟ್ ಪಿ. ನರಸಿಂಹ ಭಟ್, ಸುಬ್ರಹ್ಮಣ್ಯ ಭಟ್, ಎಸ್. ಶ್ರೀನಿವಾಸ ಭಟ್ ನಡೆಸಿಕೊಟ್ಟರು.