ಇಂದಿನ ಕಾರ್ಯಕ್ರಮ (09-05-2025)

0

ಪುತ್ತೂರು ಮುಳಿಯ ಗೋಲ್ಸ್ & ಡೈಮಂಡ್ಸ್‌ನ ಅಪರಂಜಿ ರೂಫ್ ಗಾರ್ಡನ್, ೩ನೇ ಮಹಡಿ, ಸುಲೋಚನಾ ಟವರ್ಸ್‌ನಲ್ಲಿ ಸಂಜೆ ೬.೩೦ರಿಂದ “ಪುದರ್ ದೀತಿಜಿ” ತುಳು ನಾಟಕ
ಕರ್ಮಲ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಚಂಡಿಕಾಹವನ, ಮಹಾಗಣಪತಿ ಹೋಮ, ಕಲಶಪೂಜೆ, ಶ್ರೀ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ೮ರಿಂದ ಸಭಾ ಕಾರ್ಯಕ್ರಮ, ೧೦ರಿಂದ ಸಾಂಸ್ಕೃತಿಕ ಕಾರ್ಯಕ್ರಮ
ಆಲಂಕಾರು ಗ್ರಾ.ಪಂ ಕಚೇರಿ ಸಭಾಭವನದಲ್ಲಿ ಬೆಳಿಗ್ಗೆ ೧೧ಕ್ಕೆ ಸಾಮಾನ್ಯ ಸಭೆ
ಸಂಟ್ಯಾರ್ ಸರಸ್ವತಿ ಪುರಂನ ಸರಸ್ವತಿ ಸದನದಲ್ಲಿ ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ, ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ದರ್ಬೆ ವತಿಯಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಮಂಥನ-೨೦೨೫ ಉಚಿತ ವ್ಯಕ್ತಿತ್ವ ವಿಕಸನ ಕಾರ್ಯಾಗಾರ
ನರಿಮೊಗರು ಗ್ರಾಮದ ಎಲಿಕ ಶ್ರೀ ವೆಂಕಟ್ರಮಣ ಮಠದಲ್ಲಿ ಬೆಳಿಗ್ಗೆ ೭ರಿಂದ ಗಣಹೋಮ, ಕಲಶಪೂಜೆ, ೮.೩೩ಕ್ಕೆ ದೇವರ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೫ಕ್ಕೆ ರಕ್ತೇಶ್ವರೀ, ಮಹಿಷಂದಾಯ, ಕಲ್ಲುರ್ಟಿ ದೈವಗಳ ಭಂಡಾರ ತೆಗೆಯುವುದು, ರಾತ್ರಿ ೭ರಿಂದ ಮಹಿಷಂದಾಯ ನೇಮ, ೯ರಿಂದ ರಕ್ತೇಶ್ವರೀ, ಕಲ್ಲುರ್ಟಿ ದೈವಗಳ ನೇಮ
ತಿಂಗಳಾಡಿ ಬೊಲ್ಪುಗುಡ್ಡೆ ಕಿದೆವೂರು ಬಾರಿಕೆ ತರವಾಡು ಮನೆಯಲ್ಲಿ ಬೆಳಿಗ್ಗೆ ೧೦ಕ್ಕೆ ಹೊರೆಕಾಣಿಕೆ ಸಮರ್ಪಣೆ, ಸಂಜೆ ನಾಗ ಸಾನಿಧ್ಯದಲ್ಲಿ ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಆಶ್ಲೇಷ ಬಲಿ ಪೂಜೆ, ಧ್ಯಾನಾಧಿವಾಸ, ಕಲಶಾಧಿವಾಸ
ಸಂಪ ಶ್ರೀ ಅಣ್ಣಪ್ಪ ಪಂಜುರ್ಲಿ ಕಲ್ಲುರ್ಟಿ ದೈವಸ್ಥಾನದಲ್ಲಿ ಬೆಳಿಗ್ಗೆ ೬ರಿಂದ ಶ್ರೀ ಗಣಹೋಮ, ೮.೩೩ರಿಂದ ಶ್ರೀ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ೧೦ಕ್ಕೆ ಆಶ್ಲೇಷ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ೬.೩೦ರಿಂದ ಶ್ರೀ ರಕ್ತೇಶ್ವರಿ ದೈವದ ನೇಮೋತ್ಸವ, ರಾತ್ರಿ ಅನ್ನಸಂತರ್ಪಣೆ, ೧೦.೩೦ಕ್ಕೆ ಶ್ರೀ ಮೂಕಾಂಬಿಕ ಗುಳಿಗ ದೈವದ ನೇಮೋತ್ಸವ, ೧೨ಕ್ಕೆ ಶ್ರೀ ಕಲ್ಲುರ್ಟಿ ದೈವದ ನೇಮೋತ್ಸವ, ೨ಕ್ಕೆ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ
ಪಾಲ್ತಾಡಿ ಗ್ರಾಮದ ಬಂಬಿಲ ಕುಂಜಾಡಿ ಕೊಡತ್ತೋಡಿ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಜೀರ್ಣೋದ್ದಾರ ಕುರಿತು ತಾಂಬೂಲ ಪ್ರಶ್ನೆ
ಚಾರ್ವಾಕ ದೈಪಿಲ ಶ್ರೀ ತೀರ್ಥಕೇರಿ ರಕ್ತೇಶ್ವರಿ ದೈವಸ್ಥಾನದಲ್ಲಿ ಬೆಳಿಗ್ಗೆ ೮.೩೩ರಿಂದ ಶ್ರೀ ರಕ್ತೇಶ್ವರಿ, ಗುಳಿಗ ದೈವಗಳ ಪುನಃ ಪ್ರತಿಷ್ಠೆ
ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಬೆಳಿಗ್ಗೆ ೭ರಿಂದ ಗಣಪತಿ ಹವನ, ತತ್ವಕಲಶ ಪೂಜೆ, ತತ್ವಹೋಮ, ಮಧ್ಯಾಹ್ನ ಮಹಾಪೂಜೆ, ಯಕ್ಷಗಾನ ತಾಳಮದ್ದಳೆ, ಅನ್ನಸಂತರ್ಪಣೆ, ಅಪರಾಹ್ನ ಬ್ರಹ್ಮಕಲಶ ಮಂಟಪ ಸಂಸ್ಕಾರ, ಸಂಜೆ ೫ಕ್ಕೆ ಶ್ರೀಚಕ್ರ ಪೂಜೆ, ದುರ್ಗಾನಮಸ್ಕಾರ ಪೂಜೆ, ಅಂಕುರಪೂಜೆ, ರಾತ್ರಿ ಭಕ್ತಿ ರಸಮಂಜರಿ
ಗೃಹಪ್ರವೇಶ
ನರಿಮೊಗರು ಗ್ರಾಮದ ಕೂಡುರಸ್ತೆಯಲ್ಲಿ ನೂತನ ಮನೆ ಜನನಿ ನಿಲಯದ ಗೃಹಪ್ರವೇಶ
ಕಡಬ ತಾಲೂಕು ಕಾಮಣ ಗ್ರಾಮದ ಮುಂಡಾಳದಲ್ಲಿ ನೂತನ ಮನೆ ಶ್ರೀ ಶಾಸ್ತಾರ ನಿಲಯದ ಗೃಹಪ್ರವೇಶ
ಕಡಬ ತಾಲೂಕು ಕುದ್ಮಾರು ಗ್ರಾಮದ ಬರೆಪ್ಪಾಡಿಯಲ್ಲಿ ಪ್ರತೀಕ್ಷಾ ನಿಲಯದ ಗೃಹಪ್ರವೇಶ
ಕೋಡಿಂಬಾಡಿ ಗ್ರಾಮದ ಕೆದಿಕಂಡೆಯಲ್ಲಿ ಸಂತೋಷ್ ಕುಮಾರ್ ರೈಯವರ ನೂತನ ಗೃಹ `ಅಮ್ಮ’ ಇದರ ಗೃಹಪ್ರವೇಶ, ಶ್ರೀ ಸತ್ಯನಾರಾಯಣ ಪೂಜೆ,ಭಜನಾ ಸಂಕೀರ್ತನೆ
ಶುಭವಿವಾಹ
ಕಡಬದ ಅನುಗ್ರಹ ಸಭಾಭವನದಲ್ಲಿ ಕಡಬ ಹೊಸಮನೆ ಉಮೇಶ್ ನಾಕ್‌ರ ಪುತ್ರ ಅಭಿಷೇಕ್ ಮತ್ತು ಕಾಪ್ರಿ ವರ್ಕಾಡಿ ಪ್ರಮೋದ್ ನಾಕ್‌ರ ಪುತ್ರಿ ನವ್ಯಶ್ರೀಯವರ ವಿವಾಹ
ಕುದ್ಮಾರು-ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸವಣೂರು ಗ್ರಾಮದ ಕೆಡೆಂಜಿ ಕಸ್ತೂರಿ ಮತ್ತು ವಿಜಯ ಗೌಡರ ಪುತ್ರ ಚೇತನ್ (ವರುಣ್ ಕುಮಾರ್ ಕೆ.) ಮತ್ತು ಕೊಲ ಗ್ರಾಮದ ಮುಂಡೈಮಾರ್ ಹರಿಣಾಕ್ಷಿ ಮತ್ತು ರಾಮಣ್ಣ ಗೌಡರ ಪುತ್ರಿ ಹೇಮಾ (ಹರ್ಷಿಣಿ ಎಂ.)ರವರ ವಿವಾಹ

LEAVE A REPLY

Please enter your comment!
Please enter your name here