ಪುತ್ತೂರು: ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ SKSSF ಕುಂಬ್ರ ವಲಯ ಕೋಶಾಧಿಕಾರಿ, ಯುವ ಉದ್ಯಮಿಯೂ ಆದ ಮಹಮ್ಮದ್ ಕೆ. ಎಚ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ತಿಂಗಳಾಡಿ ವಲಯ ಕಛೇರಿಯಲ್ಲಿ ನಡೆಸಲಾಯಿತು. ತಿಂಗಳಾಡಿ ಶಂಸುಲ್ ಉಲಮಾ ಎಜುಕೇಷನ್ ಸೆಂಟರ್ ವತಿಯಿಂದಲೂ ಅವರನ್ನು ಗೌರವಿಸಲಾಯಿತು.
ವಲಯಾಧ್ಯಕ್ಷ ಮನ್ಸೂರ್ ಅಸ್ಲಮಿ ಅಮ್ಚಿನಡ್ಕ, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ವಲಯ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ಹಾಜಿ ದರ್ಬೆ, ವಲಯ ವಿಖಾಯ ಚೆಯರ್ಮೇನ್ ಶಕೀಲ್ ಅಹ್ಮದ್, ಉದ್ಯಮಿ ಶಂಸುದ್ದೀನ್ ಇಂದುಮೂಲೆ, ರಶೀದ್ ಅಮ್ಚಿನಡ್ಕ ಮುಂತಾದವರು ಉಪಸ್ಥಿತರಿದ್ದರು.ಸಿದ್ದೀಕ್ ಸುಲ್ತಾನ್ ಸ್ವಾಗತಿಸಿ , ವಂದಿಸಿದರು.