ಪುತ್ತೂರು: ಕಿಲ್ಲೆ ಮೈದಾನ ರಸ್ತೆ ಬಳಿಯ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಮೇ.11ರಂದು ನಡೆಯಲಿವು ಷಡಾಧಾರ ಮತ್ತು ನಿಧಿಕುಂಭ ಪ್ರತಿಷ್ಠಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೇ.10ರಂದು ಬೆಳಿಗ್ಗೆ ನಿಧಿಕುಂಭ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಕುಣಿತ ಭಜನೆ ವಿಶೇಷ ಆಕರ್ಷಣೆಯಾಗಿತ್ತು.
ಬೆಳಿಗ್ಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಅಪ್ಪಣೆ ಪಡೆಯಲಾಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಪ್ರಾರ್ಥನೆ ನೆರವೇರಿಸಿದರು. ಬಳಿಕ ಲಕ್ಷ್ಮೀ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿ ನಿಧಿ ಕುಂಭ ಮೆರವಣಿಗೆ ಮುಖ್ಯರಸ್ತೆಯಾಗಿ ಶ್ರೀ ಮಹಾಕಾಳಿ ದೇವಸ್ಥಾನ ಸಾನಿಧ್ಯದಲ್ಲಿ ಸಮಾವೇಶಗೊಂಡಿತು. ವೇ ಮೂ ಬನ್ನಂಜೆ ರಾಮದಾಸ್ ಭಟ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಕಾಮತ್, ಅಧ್ಯಕ್ಷ ಮುರಳಿಕೃಷ್ಣ ಹಸಂತಡ್ಕ, ಕಾರ್ಯಾಧ್ಯಕ್ಷ ಭಾಮಿ ಜಗನ್ನಾಥ ಶೆಣೈ, ಖಜಾಂಚಿ ನಿತಿನ್ ಕುಮಾರ್ ಮಂಗಳ, ಉಪಾಧ್ಯಕ್ಷರಾದ ನರೇಂದ್ರ ನಾಯಕ್, ಸುದೇಶ್ ಚಿಕ್ಕಪುತ್ತೂರು, ಶಶಿಧರ್ ನಾಯಕ್, ನಾಗೇಂದ್ರ ಬಾಳಿಗ, ಸುಧೀರ್ ಶೆಣೈ, ನಿತಿನ್ ಶೆಣೈ, ಸಂಪತ್ ಕುಮಾರ್, ಶ್ರೀಧರ್ ತೆಂಕಿಲ, ಅಭಿಷೇಕ್ ಗೌಡ, ಅಶೋಕ್ ಕಂಭ್ಳೆ, ಕಿರಣ್ ಶಂಕರ್ ಮಲ್ಯ, ರತ್ನಪ್ರಸಾದ್ ಹೆಗ್ಡೆ, ನ್ಯಾಯವಾದಿ ಮಾದವ ಪೂಜಾರಿ ಸಹಿತ ಹಲವಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯಲ್ಲಿ ಹಲವು ಕಡೆ ಭಕ್ತರು ತಮ್ಮ ಮುಷ್ಠಿ ಕಾಣಿಕೆ ಸಮರ್ಪಿಸಿದರು.
ನಾಳೆ(ಮೇ.11ಕ್ಕೆ) ಷಡಾಧಾರ ಮತ್ತು ನಿಧಿಕುಂಭ ಪ್ರತಿಷ್ಠೆ
ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಮತ್ತು ವೇ ಮೂ ಬನ್ನಂಜೆ ರಾಮದಾಸ್ ಭಟ್ ಅವರ ಪೌರೋಹಿತ್ವದಲ್ಲಿ ಕ್ಷೇತ್ರದಲ್ಲಿ ಮೇ.11ರಂದು ಷಡಾಧಾರ ಮತ್ತು ನಿಧಿಕುಂಭ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ.