ಪುತ್ತೂರು: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಭಾರತ ಕೈಗೊಂಡಿರುವ ಯುದ್ದ ವಿಜಯಕ್ಕಾಗಿ ಪ್ರತೀ ಮನೆಯಲ್ಲಿ ಕುಟುಂಬಿಕರು ಒಗ್ಗೂಡಿ ಪ್ರಾರ್ಥನೆ ಸಲ್ಲಿಸುವ ವಿಶೇಷ ಪ್ರಯತ್ನ ಪುತ್ತೂರಿನ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಿಂದ ನಡೆದಿದೆ.
ಯುದ್ದ ಕಾಲದ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತೀಯ ಸೈನಿಕರ, ರಕ್ಷಣಾ ತಂಡದ ಮುಖ್ಯಸ್ಥರ, ಪ್ರಧಾನ ಮಂತ್ರಿಗಳು ಹಾಗೂ ಎಲ್ಲಾ ರಾಜತಾಂತ್ರಿಕ ತಂಡದವರಿಗೆ ಧೈರ್ಯ, ಆರೋಗ್ಯ, ಶಕ್ತಿ, ಯಶಸ್ಸು ಮತ್ತು ಯುದ್ಧ ವಿಜಯಕ್ಕಾಗಿ ಶಾಲೆಯ ವಿದ್ಯಾರ್ಥಿಗಳು, ಹೆತ್ತವರು ಹಾಗೂ ಮನೆಯವರಲ್ಲೆರೂ ಸೇರಿ ಒಟ್ಟುಗೂಡಿ ದೇವರಲ್ಲಿ ಪ್ರಾರ್ಥಿಸಲು ಮನವಿ ಮಾಡಲಾಗಿದೆ.
ಸರಳವಾಗಿ ಮನೆಯವರೆಲ್ಲರೂ ಸೇರಿ ಪ್ರಾರ್ಥನೆ ಸಲ್ಲಿಸುವ ವಿಶೇಷ ಪ್ರಾರ್ಥನಾ ಶ್ಲೋಕವನ್ನು ಪ್ರಕಟಣೆ ಜೊತೆಗೆ ನೀಡಲಾಗಿದೆ.
“ಭಾರತ ರಾಷ್ಟ್ರ ರಕ್ಷಣಾರ್ಥಂ, ಯುದ್ಧ ಕಾಲೇ ಭಾರತ ರಾಷ್ಟ್ರ ದಿಗ್ವಿಜಯ ಪ್ರಾಪ್ತ್ಯರ್ಥಂ,
ಭಾರತ ರಾಷ್ಟ್ರ ಸೈನಿಕಾನಾಂ ದೀರ್ಘ ಆಯುಷ್ಯ, ಆರೋಗ್ಯ ಪ್ರಾಪ್ತ್ಯರ್ಥಂ,
ಶ್ರೀ ರಾಮ ತಾರಕ ಮಂತ್ರ ಜಪಂ ಕರಿಷ್ಯೇ
ಶ್ರೀ ರಾಮ ಜಯ ರಾಮ ಜಯ ಜಯ ರಾಮ”
ಈ ರೀತಿಯಲ್ಲಿ ಪ್ರಾರ್ಥಿಸಲು ಮನವಿ ಮಾಡಲಾಗಿದೆ.
ಇದರ ಜೊತೆಗೆ ಈ ರಾಮಸ್ಮರಣೆಗೆ ಮಡಿ ಬೇಕಿಲ್ಲ. ಯಾರು ಎಲ್ಲಿದ್ದರೂ ಅಲ್ಲೇ ರಾಮನಾಮ ಸ್ಮರಣೆ ಮಾಡಬಹುದಾಗಿದೆ. ಉದ್ವಿಗ್ನ ಸ್ಥಿತಿ ಮುಗಿಯುವವರೆಗೂ ಧಾರವಾಹಿ, ಸಿನಿಮಾ ನೋಡುವುದು ಬಿಟ್ಟು ದೇಶದ ಬಗ್ಗೆ ಚಿಂತನೆ ಮಾಡೋಣ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.