ಪುತ್ತೂರು: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಫಲಾನುಭವಿಗಳಿಗೆ ಪರಿಹಾರದ ಚೆಕ್ ವಿತರಿಸಲಾಯಿತು. ಶಾಸಕ ಅಶೋಕ್ ರೈ ಯವರು ತನ್ನ ಕಚೇರಿಯಲ್ಲಿ ಚೆಕ್ ಹಸ್ತಾಂತರಿಸಿದರು. ಶಿವಾನಂದ ಮಾದರ ಕೊಡಿಪ್ಪಾಡಿ, ಇಬ್ರಾಹಿಂ ಗಟ್ಟಮನೆ ಕೆದಂಬಾಡಿ, ಚಂದ್ರಹಾಸ ರೈ ಬನ್ನೂರು ಹಾಗೂ ಸುಧೀರ್ ಆಚಾರ್ಯ ಜೋಡು ರಸ್ತೆ ಕಾರ್ಕಳ ರವರಿಗೆ ಒಟ್ಟು 1,71,739 ಲಕ್ಷ ರೂ ಪರಿಹಾರದ ಚೆಕ್ಕನ್ನು ಶಾಸಕರು ನೀಡಿದರು. ಫಲಾನುಭವಿಗಳು ಸಹಾಯ ಕೋರಿ ಶಾಸಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದರು.