ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಕುಂಬ್ರ ರೇಂಜ್ ಅಧ್ಯಕ್ಷರಾಗಿ ಹಸನ್ ಬಾಖವಿ, ಪ್ರ.ಕಾರ್ಯದರ್ಶಿಯಾಗಿ ನಾಸಿರ್ ಫೈಝಿ ಕುಂತೂರು ಆಯ್ಕೆ

0

ಪುತ್ತೂರು: ಸಮಸ್ತ ಕೇರಳ ಜಂ ಇಯ್ಯತುಲ್ ಮುಅಲ್ಲಿಮೀನ್ ಕುಂಬ್ರ ರೇಂಜ್ ಅಧ್ಯಕ್ಷರಾಗಿ ಹಸನ್ ಬಾಖವಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಫೈಝಿ ಕುಂತೂರು ಆಯ್ಕೆಯಾಗಿದ್ದಾರೆ.


ಪರ್ಪುಂಜ ಮದ್ರಸದಲ್ಲಿ ಮುಫತ್ತಿಶ್ ಶರಫುದ್ದೀನ್ ಅಝ್ಹರಿಯವರ ಅಧ್ಯಕ್ಷತೆಯಲ್ಲಿ ನಡೆದ ಕುಂಬ್ರ ರೇಂಜ್‌ನ ವಾರ್ಷಿಕ ಮಹಾ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಉಪಾಧ್ಯಕ್ಷರಾಗಿ ರಫೀಕ್ ಫೈಝಿ ಹಾಗೂ ಮುಹಮ್ಮದ್ ದಾರಿಮಿ, ಕೋಶಾಧಿಕಾರಿಯಾಗಿ ನವಾಝ್ ಪರ್ಪುಂಜ ಆಯ್ಕೆಯಾದರು.


ಜೊತೆ ಕಾರ್ಯದರ್ಶಿಗಳಾಗಿ ಬಾಸಿತ್ ಹುದವಿ, ಶಬೀರ್ ಅಝ್ಹರಿ, ಪರೀಕ್ಷೆ ಬೋರ್ಡ್ ಚೇರ್‌ಮೆನ್ ಆಗಿ ಖಾಲಿದ್ ಫೈಝಿ, ಮನ್ಸೂರ್ ರಯೀಸಿ, ಮುನೀರ್ ಯಮಾನಿ, ಎಸ್.ಕೆ.ಎಸ್.ಬಿ.ವಿ ಚೇರ್‌ಮೆನ್ ಆಗಿ ಮನ್ಸೂರ್ ಅಸ್ಲಮಿ, ಕನ್ವೀನರ್ ಆಗಿ ಮುನೀರ್ ದಾರಿಮಿ, ರಿಲೀಫ್ ಚೇರ್ಮನ್ ಆಗಿ ಕರೀಂ ದಾರಿಮಿ, ಕುರುನ್ನುಗಲ್ ಉಸ್ತುವಾರಿಯಾಗಿ ಹಮೀದ್ ಮುಸ್ಲಿಯಾರ್ ಮುಂತಾದವರನ್ನು ಆಯ್ಕೆ ಮಾಡಲಾಯಿತು.

ಸಭೆಯನ್ನು ರಫೀಕ್ ಫೈಝಿ ಉದ್ಘಾಟಿಸಿದರು. ಕಾರ್ಯದರ್ಶಿ ನಾಸಿರ್ ಫೈಝಿ ವಾರ್ಷಿಕ ಆಯ-ವ್ಯಯ ಲೆಕ್ಕ ಮಂಡಿಸಿದರು.

LEAVE A REPLY

Please enter your comment!
Please enter your name here