ಪುತ್ತೂರು: ಬಂಟ್ವಾಳ ತಾಲ್ಲೂಕು ಅರಿವು ಕೇಂದ್ರದ ವತಿಯಿಂದ ನಡೆದ ಮಕ್ಕಳ ಗ್ರಾಮೀಣ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಪುಣಚ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಇತ್ತೀಚಿಗೆ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಬೇಬಿ ಯಾನೆ ಯಶೋಧ ಪಟಿಕಲ್ಲು ಇವರು ವಹಿಸಿದ್ದರು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ,ಪಂಚಾಯತ್ ಸದಸ್ಯರುಗಳಾದ ಹರೀಶ್ ಮಾರಮಜಲು, ಆನಂದ ತೊಂಡನಡ್ಕ, ಗಂಗಮ್ಮ, ತೀರ್ಥರಾಮ ನಾಯಕ್ ಹಾಗೂ ಎಂ.ಬಿ.ಕೆ ರೇಖಾ, ಪುನರ್ವಸತಿ ಕಾರ್ಯಕರ್ತ ಮುರಳೀಧರ ಉಪಸ್ಥಿತರಿದ್ದರು.
ಚರಿಷ್ಮ, ಸಾನ್ವಿ, ಧನ್ವಿ, ಅನ್ವಿತಾ ನಾಡಗೀತೆ ಹಾಡಿದರು. ಚರಿಷ್ಮ ಸ್ವಾಗತಿಸಿದರು. ಧನುಷ್, ಅನ್ವಿತಾ, ಸಾನ್ವಿ ಶಿಬಿರದ ಅನಿಸಿಕೆ ವ್ಯಕ್ತ ಪಡಿಸಿದರು. ಚಿಂತನ ವಂದಿಸಿದರು. ಗ್ರಂಥ ಪಾಲಕಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.ಪಂಚಾಯತ್ ಸಿಬ್ಬಂದಿಯವರು ಸಹಕರಿಸಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.