ಸವಣೂರು : ಸವಣೂರು ಗ್ರಾಮದ ಆರೇಲ್ತಡಿ ಉಳ್ಳಾಕ್ಲು, ಕೆಡೆಂಜೋಡಿತ್ತಾಯ ದೈವಸ್ಥಾನದ ಪುನರ್ ನಿರ್ಮಾಣ ಪ್ರತಿಷ್ಟೆ ,ಬ್ರಹ್ಮಕಲಶ- ನೇಮೋತ್ಸವವು ಮೇ.12 ರಿಂದ ಮೇ.16ರವರೆಗೆ ಬ್ರಹ್ಮ ಶ್ರೀ ನೀಲೇಶ್ವರ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಮೇ.12ರಂದು ಬೆಳಿಗ್ಗೆ ಹಸಿರುವಾಣಿ ಮೆರವಣಿಗೆಯು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಿಂದ ಹೊರಟು ಸವಣೂರು ಪುದುಬೆಟ್ಟು ಬಸದಿಗೆ ಬಂದು ಬಳಿಕ ಆರೇಲ್ತಡಿ ದೈವಸ್ಥಾನಕ್ಕೆ ಆಗಮಿಸಿತು.

ತಂತ್ರಿಗಳ ಆಗಮನ,ರಾತ್ರಿ ಸಾಮೂಹಿಕ ಪ್ರಾರ್ಥನೆ,ಆಚಾರ್ಯ ವರಣ,ಪ್ರಾಸಾದ ಪರಿಗ್ರಹ,ಪುಣ್ಯಾಹ ಪ್ರಾಸಾದ ಶುದ್ದಿ,ರಾಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತು ಬಲಿ ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಈ ಸಂಧರ್ಭದಲ್ಲಿ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷೆ ಸುಮನ ಮುರಳಿಮೋಹನ ಶೆಟ್ಟಿ ,ಶಿವಪ್ರಸಾದ್ ಶೆಟ್ಟಿ ಕಿನಾರ,ಅಧ್ಯಕ್ಷ ದಿನೇಶ್‌ಮೆದು,ಪ್ರಧಾನ ಕಾರ್ಯದರ್ಶಿ : ಚಂದ್ರಶೇಖರ ಪಟ್ಟೆ,ಗೌರವ ಸಲಹೆಗಾರರಾದ ಪವಿತ್ರಪಾಣಿ ರತ್ನಾಕರ ಕುಂಜತ್ತಾಯ, ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು,ರಾಜೇಂದ್ರ ರೈ ಮಿಜಾರುಗುತ್ತು ,ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು,ದಯಾಸಾಗರ್ ಪೂಂಜಾ ಮುಗೇರುಗುತ್ತು,ಸದಾಶಿವ ರೈ ಅಜಲಾಡಿಬೀಡು,ಪದ್ಮನಾಭ ಕುಂಜತ್ತಾಯ ಅರ್ಚಕರು,ದಯಾ ವಿ. ರೈ, ಶಿವಣ್ಣ ಗೌಡ ಇಡ್ಯಾಡಿ,ಗಿರೀಶ್ ಮೆದು, ಪ್ರವೀಣ್ ನ್ಯಾಕ್ ಕಂಪ, ಸುಬ್ರಹ್ಮಣ್ಯ ರಾವ್ ಅತಿಕರಯ, ರಾಜಾರಾಮ ಪ್ರಭು, ಅಶ್ವಿನಿ ಫಾರ್ಮ್ಸ್, ರಾಕೇಶ್ ರೈ ಕೆಡೆಂಜಿ,ತಾರಾನಾಥ ಕಾಯರ್ಗ,ಕೋಶಾಧಿಕಾರಿ ರಾಜೇಶ್ ಇಡ್ಯಾಡಿ,ಜತೆ ಕಾರ್ಯದರ್ಶಿ ಜತ್ತಪ್ಪ ಗೌಡ ಆರೇಲ್ತಡಿ,ಉಪಾಧ್ಯಕ್ಷರಾದ ವಾಸುದೇವ ಇಡ್ಯಾಡಿ ಮೋನಪ್ಪ ಗೌಡ ಆರೇಲ್ಪಡಿ, ಸುಜಿತ್ ಕುಮಾರ್ ಶೆಟ್ಟಿ ನಡುಬೈಲು, ಚಂದಪ್ಪ ಪೂಜಾರಿ ಊರುಸಾಗು, ಹರಿಶ್ಚಂದ್ರ ಕಾಯರ್ಗ,ಸದಸ್ಯರಾದ ಸಂಜೀವ ಪೂಜಾರಿ ಅಗರಿಗುತ್ತು, ನಾರಾಯಣ ಗೌಡ ಪೂವ,ಪರಮೇಶ್ವರ ಮಡಿವಾಳ,ವಿಠಲ ಶೆಟ್ಟಿ ಕೆಡೆಂಜಿ,ಮೋನಪ್ಪ ಗೌಡ ಇಡ್ಯಾಡಿ ,ಪೂವಪ್ಪ ಗೌಡ ಸೋಂಪಾಡಿ, ಸುಂದರ ಪೂಜಾರಿ ಮಡಕೆ,ವಿಶ್ವನಾಥ ಪೂಜಾರಿ ಏರ್ತಿಲ,ಕುಶಾಲಪ್ಪ ಗೌಡ ಇಡ್ಯಾಡಿ,ಚಂದ್ರಶೇಖರ ಮೆದು,ನಾರಾಯಣ ಕೆಡೆಂಜಿಮಾರು,ಕುಂಞ ನಲಿಕೆ ಆರೇಲ್ತಡಿ,ಪುಟ್ಟಣ್ಣ ನಾಯ್ಕ ಕೆಡೆಂಜಿ,ಉಮೇಶ್ ಆಚಾರ್ಯ ಚಾಪಲ್ಲ,ಪ್ರಭಾಕರ ಶೆಟ್ಟಿ ನಡುಬೈಲು,ಮೋಹನ ರೈ ಕೆರೆಕ್ಕೋಡಿ,ತೀರ್ಥರಾಮ ಕೆಡೆಂಜಿ,ಪ್ರಕಾಶ್ ಕುದ್ಮನಮಜಲು,ದಿವಾಕರ ಬಸ್ತಿ, ಆನಂದ ಕೇಕುಡೆ,ಬಾಬು ಮುಗೇರು,ಸಂಜೀವ ಭಂಡಾರಿ ನಡುಬೈಲು,ಗಂಗಾಧರ ಪೆರಿಯಡ್ಕ,ಬಾಲಚಂದ್ರ ರೈ ಕೆರೆಕೋಡಿ,ಮಿಥುನ್ ಅಗರಿ,ರಾಜೇಶ್ ರೈ ಮುಗೇರು,ಗಿರಿಧರ ಇಡ್ಯಾಡಿ,ಯೋಗೀಶ್ ಕಾಯರ್ಗ,ರಾಜ್‌ದೀಪಕ್ ಶೆಟ್ಟಿ ಮಠ,ರಾಜೀವಿ ಶೆಟ್ಟಿ ಕೆಡೆಂಜಿ,ಆಶಾ ಪ್ರವೀಣ್ ಕಂಪ,ಕಾಂತು ನಲಿಕೆ,ಶಿವರಾಮ ಗೌಡ,ಪ್ರವೀಣ್ ಕಂಪ,ಸತೀಶ್ ಶೆಟ್ಟಿ ಕಿನಾರ,ಜಗದೀಶ್ ಇಡ್ಯಾಡಿ, ಸಚಿನ್ ಮೊದಲಾದವರಿದ್ದರು.

ನಾಳೆ ಧಾರ್ಮಿಕ ಸಭೆ, ಶಿವಧೂತ ಗುಳಿಗೆ ನಾಟಕ
ಮೇ.13ರಂದು ಬೆಳಿಗ್ಗೆ ಗಣಪತಿ ಹವನ,ಭಗವತಿ ಪೂಜೆ,ಬಿಂಬ ಶುದ್ದಿ,ಕಲೆ ಶುದ್ದಿ,ಅನುಜ್ಞಾ ಕಲಶ,ಶಯ್ಯಾ ಪೂಜೆ,ಅನುಜ್ಞಾ ಪ್ರಾರ್ಥನೆ, ಜೀವೋದ್ವಾಸನೆ,ಶಯ್ಯೆಯಲ್ಲಿ ಪೂಜೆ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಅಧಿವಾಸ ಪೂಜೆ, ಕಲಶ ಪೂಜೆ, ಭಗವತಿ ಸೇವೆ, ಜ್ಞಾನಾಧಿವಾಸ,ಅಧಿವಾಸ ಪೂಜೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರುಕುಲ ಕಲಾ ಕೇಂದ್ರ ಪುರುಷರಕಟ್ಟೆ ಪುತ್ತೂರು ಇವರಿಂದ ಗುರುಪ್ರಿಯಾ ಕಾಮತ್ ನಿರ್ದೇಶನದಲ್ಲಿ ಗಾನ ನೃತ್ಯ ಸಂಭ್ರಮ ನಡೆಯಲಿದೆ.
ರಾತ್ರಿ ಸಭಾ ಕಾರ್ಯಕ್ರಮ ನಡೆಯಲಿದ್ದು,ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿಯವರು ಆಶೀರ್ವಚನ ನೀಡುವರು.ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಹಿಸುವರು.ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸುವರು.ಅತಿಥಿಗಳಾಗಿ ಪುತ್ತೂರು ಶಾಸಕ ಅಶೋಕ್ ರೈ,ವಿಧಾನ ಪರಿಷತ್ತು ಸದಸ್ಯರಾದ ಭಾರತಿ ಶೆಟ್ಟಿ, ಕಿಶೋರ್ ಕುಮಾರ್ ಪುತ್ತೂರು, ಪ್ರತಾಪ ಸಿಂಹ ನಾಯಕ್,ಮಾಜಿ ಸಚಿವ ಎಸ್.ಅಂಗಾರ,ಮಾಜಿ ಶಾಸಕ ಸಂಜೀವ ಮಠಂದೂರು ,ಸೀತಾರಾಮ ರೈ ಸವಣೂರು, ಡಾ.ರೇಣುಕಾಪ್ರಸಾದ್ ಕೆ.ವಿ.,ಶಶಿಕುಮಾರ್ ರೈ ಬಾಲ್ಯೊಟ್ಟು ಮೊದಲಾದವರು ಪಾಲ್ಗೊಳ್ಳುವರು. ಬಳಿಕ ಕಲಾ ಸಂಗಮ ಕಲಾವಿದರಿಂದ ಶಿವಧೂತೆ ಗುಳಿಗೆ ನಾಟಕ ಪ್ರದರ್ಶನ ನಡೆಯಲಿದೆ.
ಮೇ.14ರಂದು ಬೆಳಿಗ್ಗೆ ಪ್ರಾಸಾದ ಶುದ್ದಿ,ಪೀಠ ಪ್ರತಿಷ್ಠೆ, ಬೆಳಿಗ್ಗೆ 6.30ರಿಂದ 7.03ರ ವೃಷಭ ಲಗ್ನದಲ್ಲಿ ದೈವಗಳ ಪ್ರತಿಷ್ಠೆ, ಜೀವ ಕಲಶಾಭಿಷೇಕ,ಕಲಶಾಭಿಷೇಕ ,ತಂಬಿಲ,ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ದೈವಗಳ ಭಂಡಾರ ತೆಗೆಯಲಾಗುವುದು.

ಮೇ.15ರಂದು ಬೆಳಿಗ್ಗೆ ಉಳ್ಳಾಕುಲು ದೈವದ ನೇಮೋತ್ಸವ, ಶ್ರೀ ಕೆಡೆಂಜೊಡಿತ್ತಾಯ ದೈವದ ನೇಮೋತ್ಸವ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ,ಸಂಜೆ ಶ್ರೀ ಪಂಜುರ್ಲಿ ಹಾಗೂ ಇತರ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.ಮೇ.16ರಂದು ಸಂಜೆ 6ರಿಂದ ಮುಗೇರಿನಿಂದ ಗುಳಿಗ ಮಾರಿ ಹೊರಟು ಮಾಂತೂರಿನಲ್ಲಿ ಶಿರಾಡಿ ದೈವದ ನೇಮವಾಗಿ ಸರ್ವೆಯಲ್ಲಿ ಮಾರಿ ಬಿಡುವುದು ನಡೆಯಲಿದೆ.