ಸುಳ್ಯ: ನೆಟ್ಟಾರು ಸಮೀಪ ಪಿಕಪ್ ವಾಹನವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ವಾಹನ ಸುಟ್ಟು ಹೋದ ಘಟನೆ ಮೇ.11 ರಂದು ಬೆಳಿಗ್ಗೆ ನಡೆದಿದೆ.
ಬೆಳ್ಳಾರೆ ಕಡೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನದ ಎದುರು ಭಾಗದಲ್ಲಿ ನೆಟ್ಟಾರು ತಿರುವು ಸಮೀಪ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಕೂಡಲೇ ವಾಹನವನ್ನು ನಿಲ್ಲಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಬೆಂಕಿಯ ಕೆನ್ನಾಲಿಗೆ ಜಾಸ್ತಿ ಇದ್ದ ಕಾರಣ ಅದು ಸಾಧ್ಯವಾಗಲಿಲ್ಲ.
ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಹಾಗೂ ಸ್ಥಳೀಯರು ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು ಎಂದು ತಿಳಿದು ಬಂದಿದೆ.