*ಸಂತೃಪ್ತ ಗ್ರಾಹಕರೆ ಸಂಸ್ಥೆಯ ಆಸ್ತಿ: ಅಶೋಕ್ ಕುಮಾರ್ ರೈ
*ಗ್ರಾಹಕರಿಗೆ ತೃಪ್ತಿ ನೀಡುವ ಕೆಲಸ ಸಂಸ್ಥೆಯಿಂದಾಗುತ್ತಿದೆ: ಈಶ್ವರ ಭಟ್ ಪಂಜಿಗುಡ್ಡೆ
*ಈ ಭಾಗದ ಜನರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ: ಎಲ್.ಟಿ.ಅಬ್ದುಲ್ ರಝಾಕ್ ಹಾಕಿ
*ದಶಮಾನೋತ್ಸವ ಸಂಭ್ರಮದಲ್ಲಿರುವ ಸಂಸ್ಥೆ ಶತಮಾನೋತ್ಸವವನ್ನು ಆಚರಿಸುವಂತಾಗಲಿ: ರಶೀದ್ ವಿಟ್ಲ

ವಿಟ್ಲ: ಸಂತೃಪ್ತ ಗ್ರಾಹಕರೆ ಸಂಸ್ಥೆಯ ಆಸ್ತಿ, ಸಂತೃಪ್ತ ಗ್ರಾಹಕರನ್ನು ಹೊಂದಿರುವ ಸಂಸ್ಥೆಗೆ ಯಶಸ್ಸು ಖಂಡಿತ. ಬಂಗಾರ ಎಂದರೆ ಎಲ್ಲರಿಗೂ ಅತ್ಯಂತ ಪ್ರಿಯವಾದುದು. ಬೆಲೆ ಏರಿಕೆಯಾದರೂ ಚಿನ್ನಾಭರಣ ಕೊಳ್ಳುವ ಗ್ರಾಹಕರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಚಿನ್ನ ಕಷ್ಟ ಕಾಲದಲ್ಲಿ ನೆರವಾಗುವ ವಸ್ತು. ಸಿಬ್ಬಂದಿಗಳ ನಗುಮುಖದ ಸೇವೆ ಹಾಗೂ ವ್ಯಾಪಾರದಲ್ಲಿ ಗುಣಮಟ್ಟ ಸಂಸ್ಥೆಯ ಬೆಳವಣಿಗೆಗೆ ಪೂರಕ. ಸಂಸ್ಥೆ ಇನ್ನಷ್ಟು ಬೆಳೆಯಲಿ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವಾಗಲಿ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈರವರು ಹೇಳಿದರು.
ಅವರು ಕಳೆದ ಹತ್ತು ವರುಷಗಳಿಂದ ಪುತ್ತೂರಿನ ಕೋರ್ಟ್ ರಸ್ತೆಯ ಫಾರ್ಚೂನ್ ಮಹಲ್ ನಲ್ಲಿ ವ್ಯವಹಾರ ನಡೆಸುತ್ತಿರುವ ಟೋಪ್ಕೋ ಝಂ ಝಂ ಜ್ಯುವೆಲ್ಲರಿಯ ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಸಂಸ್ಥೆಯನ್ನು ಬಹು| ಸಯ್ಯದ್ ಅಲ್ ಹಾಜಿ ಅಹಮದ್ ಪೂಕೋಯ ತಂಜಲ್ ಪುತ್ತೂರು ರವರು ಉದ್ಘಾಟಿಸಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಈಶ್ವರ್ ಭಟ್ ಪಂಜಿಗುಡ್ಡೆರವರು ಮಾತನಾಡಿ ಗ್ರಾಹಕರಿಗೆ ತೃಪ್ತಿ ನೀಡುವ ಕೆಲಸ ಸಂಸ್ಥೆಯಿಂದಾಗಿದೆ. ಸಂಸ್ಥೆಯ ಸಿಬ್ಬಂದಿಗಳ ನಗಮುಖದ ಸೇವೆ ಸಂಸ್ಥೆಯ ಯಶಸ್ಸಿನ ಗುಟ್ಟಾಗಿದೆ. ಬಡವರ್ಗದ ಜನರು ಚಿನ್ನಾಭರಣವವನ್ನು ಕೊಳ್ಳುವಂತಹ ಸಲಭ ಯೋಜನೆಗಳನ್ನು ಸಂಸ್ಥೆ ಮಾಡಬೇಕಿದೆ ಎಂದರು.
ಉದ್ಯಮಿ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ ಪುತ್ತೂರುರವರು ಮಾತನಾಡಿ ಸಂತಸ ಆಗ್ತಿದೆ. ಬೆಳೆಯುತ್ತಿರುವ ಪಟ್ಟಣದಲ್ಲಿ ಟೋಪ್ಕೋ ನವೀಕರಣಗೊಂಡು ಉದ್ಘಾಟನೆಗೊಂಡಿದೆ. ಪುತ್ತೂರಿಗೆ ಸಂಸ್ಥೆಯ ಕೊಡುಗೆ ಅಪಾರವಾಗಿದೆ. ಕಳೆದ ಹತ್ತು ವರುಷಗಳಿಂದ ಈ ಭಾಗದ ಜನರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ ಎಂದರು.
ಜಮಿಯ್ಯತ್ತುಲ್ ಫಲಾಹ್ ವಿಟ್ಲ ಇದರ ಅಧ್ಯಕ್ಷರಾದ ರಶೀದ್ ವಿಟ್ಲರವರು ಮಾತನಾಡಿ, ದಶಮಾನೋತ್ಸವ ಸಂಭ್ರಮದಲ್ಲಿರುವ ಸಂಸ್ಥೆ ಶತಮಾನೋತ್ಸವವನ್ನು ಆಚರಿಸುವಂತಾಗಲಿ. ಟೋಪ್ಕೋ ಸಂಸ್ಥೆಯು ಕೇರಳ ಹಾಗೂ ಕರ್ನಾಟಕದಲ್ಲಿ ಒಟ್ಟು 13ಮಳಿಗೆಯನ್ನು ಹೊಂದಿದೆ. ಟೋಪ್ಕೋ ಸಮೂಹ ಸಂಸ್ಥೆಯು ಚಿನ್ನಾಭರಣ, ಬೆಳ್ಳಿ, ಡೈಮಂಡ್ ಆಭರಣ ಹಾಗೂ ವಾಚುಗಳ ವ್ಯವಹಾರದ ಜೊತೆಗೆ ವಸತಿ ಸಮುಚ್ಛಯ, ಕಾಮಗಾರಿ, ಆರೋಗ್ಯ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದೆ. ಜನರೊಂದಿಗಿನ ಪ್ರೀತಿ-ವಿಶ್ವಾಸ, ನ್ಯಾಯಯುತ ವ್ಯವಹಾರ ನಡೆಸುತ್ತಾ ಜನರ ವಿಶ್ವಾಸ ಗಳಿಸಿದ ಸಂಸ್ಥೆಯಾಗಿದೆ ಎಂದರು.
ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ಬಪ್ಪಳಿಗೆ ಮಸೀದಿಯ ಅಧ್ಯಕ್ಷರಾದ ದಾವೂದ್ ಬಪ್ಪಳಿಗೆ, ಉದ್ಯಮಿ ಅಬ್ದುಲ್ ರಹಿಮಾನ್ ಕೂರ್ನಡ್ಕ, ಟೋಪ್ಕೋ ಸಮೂಹ ಸಂಸ್ಥೆಗಳ ಪಾಲುದಾರರಾದ ಮಹಮ್ಮದ್ ಟಿ.ಕೆ., ಅಸ್ಲಾಂ ಟಿ.ಕೆ. ಕುಶಾಲ್ ನಗರ, ನಝೀರ್ ಟಿ.ಕೆ. ಕಣ್ಣೂರು, ಮುನೀರ್ ಟಿ.ಕೆ.ಕಣ್ಣೂರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ಅಝೀಝ್ ಕೆಮ್ಮಾಯಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
ರೀಲಾಂಚಿಂಗ್ ಕೊಡುಗೆ:
ರೀ ಲಾಂಚಿಂಗ್ ಪ್ರಯುಕ್ತ ಗ್ರಾಹಕರಿಗೆ ಮೇ.12ರಿಂದ ಮೇ.17ರ ವರೆಗೆ ವಿಶೇಷ ರಿಯಾಯಿತಿಯನ್ನು ಸಂಸ್ಥೆ ನೀಡಲಿದೆ. ಈ ಸಂದರ್ಭದಲ್ಲಿ ಚಿನ್ನಾಭರಣಗಳ ಖರೀದಿ ಮಾಡಿದಲ್ಲಿ 4.8%ಮೇಕಿಂಗ್ ಚಾರ್ಜಸ್ ಆಫರ್, ಆ್ಯಂಟಿಕ್ ಆಭರಣಗಳ ಮೇಕಿಂಗ್ ಚಾರ್ಜಸ್ 7.5%, ಹಾಗೂ ಡೈಮಂಡ್ ಮೌಲ್ಯದ ಮೇಲೆ 25% ರಿಯಾಯಿತಿ ದೊರೆಯಲಿದೆ. ಪ್ರತೀ ಖರೀದಿಗೆ ವಿಶೇಷ ರಿಯಾಯಿತಿ ಜೊತೆಗೆ ಮತ್ತಷ್ಟು ಕೊಡುಗೆಗಳು ಲಭಿಸಲಿದೆ. ಪ್ರತೀ ಖರೀದಿಗೆ ಕೂಪನ್ ನೀಡಲಾಗುತ್ತಿದ್ದು, ಆಯ್ದ 10 ಮಂದಿ ಗ್ರಾಹಕರಿಗೆ ಬಂಪರ್ ಬಹುಮಾನ ಲಭಿಸಲಿದೆ.
ವಿವಾಹ ಮುಂಗಡ ಬುಕ್ಕಿಂಗ್ ಯೋಜನೆ:
ಪ್ರತಿ ತಿಂಗಳು ಕನಿಷ್ಠ 500ರೂಪಾಯಿಯಂತೆ ಒಂದು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟು ಪಾವತಿ ಮಾಡಿ ಆಯಾ ದಿನದ ದರದ ಚಿನ್ನವನ್ನು ಪಡೆಯಬಹುದಾಗಿದೆ. ಬಳಿಕ ಚಿನ್ನಾಭರಣವನ್ನು ಕೊಳ್ಳುವ ವೇಳೆ ತಯಾರಿಕಾ ವೆಚ್ಚದ ಮೇಲೆ 25% ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಪ್ರತೀ ತಿಂಗಳು ಡ್ರಾ ನಡೆಯಲಿದ್ದು ಅದೃಷ್ಟ ಗ್ರಾಹಕರಿಗೆ ಗ್ರಹೋಪಯೋಗಿ ವಸ್ತುಗಳನ್ನು ಗೆಲ್ಲುವ ಅವಕಾಶವಿದೆ.
ನಮ್ಮ ಬೆಳವಣಿಗೆಯಲ್ಲಿ ಸಹಕರಿಸಿದ ಎಲ್ಲರಿಗೂ ಆಭಾರಿಯಾಗಿದ್ದೇವೆ
ಕಳೆದ ಹತ್ತು ವರುಷಗಳಿಂದ ಈ ಭಾಗದ ಜನರು ನಮಗೆ ನೀಡಿದ ಪ್ರೀತಿ, ಸಹಕಾರ, ಪ್ರೋತ್ಸಹವೇ ಸಂಸ್ಥೆ ಇಷ್ಟೊಂದು ಎತ್ತರಕ್ಕೆ ಬೆಳೆದು ನಿಲ್ಲಲು ಕಾರಣವಾಗಿದೆ. ನ್ಯಾಯಯುತ ವ್ಯವಹಾರದಿಂದಾಗಿ ಸಂಸ್ಥೆ ಅತ್ಯಲ್ಪ ಅವಧಿಯಲ್ಲಿ ಜನ ಮಾನಸವನ್ನು ಮುಟ್ಟುವಲ್ಲಿ ಸಫಲವಾಗಿದೆ. ಸಂಸ್ಥೆಯ ರೀಲಾಂಚಿಂಗ್ ಪ್ರಯಕ್ತ ಹಲವಾರು ಕೊಡುಗೆಗಳನ್ನು ಗ್ತಾಹಕರಿಗೆ ನೀಡುತ್ತಿದೆ. ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕಾಗಿ ವಿನಂತಿ. ಅದೇ ರೀತಿ ಈವರೆಗೆ ನಮ್ಮ ಬೆಳವಣಿಗೆಯಲ್ಲಿ ಸಹಕರಿಸಿದ ಎಲ್ಲಾ ಗ್ರಾಹಕ ವರ್ಗದವರಿಗೂ ನಾವು ಆಭಾರಿಯಾಗಿದ್ದೇವೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತಿದ್ದೇವೆ.
ಮಹಮ್ಮದ್ ಟಿ.ಕೆ.
ಪಾಲುದಾರರು
ಟೋಪ್ಕೋ ಸಮೂಹ ಸಂಸ್ಥೆ
*ಚಿನ್ನಾಭರಣಗಳ ಮೇಕಿಂಗ್ ಚಾರ್ಜಸ್ 4.8%
*ಆ್ಯಂಟಿಕ್ ಆಭರಣಗಳ ಮೇಕಿಂಗ್ ಚಾರ್ಜಸ್ 7.5%
*ಡೈಮಂಡ್ ಮೌಲ್ಯದ ಮೇಲೆ 25% ರಿಯಾಯಿತಿ
*ಪ್ರತೀ ಖರೀದಿಗೆ ವಿಶೇಷ ರಿಯಾಯಿತಿ ಜೊತೆಗೆ ಕೊಡುಗೆ
*ಆಯ್ದ 10ಮಂದಿಗೆ ಬಂಪರ್ ಬಹುಮಾನ