ಪುತ್ತೂರು: ನರಿಮೊಗರು ಗ್ರಾಮದ ಕಾಯರ್ ಮುಗೇರ್ ಶ್ರೀ ಮಲರಾಯ ಧರ್ಮದೈವ ಮತ್ತು ಬೊಟ್ಟಿ ದೈವಗಳ ದೈವಸ್ಥಾನಕ್ಕೆ ಸಂಬಂಧಪಟ್ಟ ಕಾಯರ್ ಮುಗೇರ್ ಕುಟುಂಬದ ತರವಾಡು ಮನೆಯಲ್ಲಿ ದೈವಗಳ ನೇಮೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮ ಮೇ 10ರಂದು ನಡೆಯಿತು.

ಬೆಳಿಗ್ಗೆ ಗಣಹೋಮ, ಬಳಿಕ ಶ್ರೀ ವೆಂಕಟರಮಣ ದೇವರ ಹರಿಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ದೈವಗಳಿಗೆ ತಂಬಿಲ ಸೇವೆ ನಡೆಯಿತು. ಸಂಜೆ ಶ್ರೀ ಕಲ್ಲುರ್ಟಿ ಮತ್ತು ರಾಜನ್ ದೈವಗಳ ಭಂಡಾರ ತೆಗೆದು ನೇಮೋತ್ಸವ ನಡೆಯಿತು. ರಾತ್ರಿ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರು, ಕಾಯರ್ಮುಗೇರ್ ಶ್ರೀ ಮಲರಾಯ ಧರ್ಮದೈವ ಮತ್ತು ಬೊಟ್ಟಿ ದೈವಗಳ ಟ್ರಸ್ಟ್ನ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಮತ್ತು ಸದ್ಯಸ್ಯರು, ಕುಟುಂಬಸ್ಥರು, ಕುಟುಂಬದ ಬಂಧುಮಿತ್ರರು, ಗ್ರಾಮಸ್ಥರು ಪಾಲ್ಗೊಂಡಿದ್ದರು.